ಬೆಂಗಳೂರು ಗ್ರಾಮಾಂತರ

ಡೆಂಘೀ ನಿಯಂತ್ರಣಕ್ಕೆ ಜನತೆ ಸಹಕರಿಸಲಿ: ಮಂಜುನಾಥ್

Published On :

ಮಾಗಡಿ: ಡೆಂಘೀ  ನಿಯಂತ್ರಣಕ್ಕೆ ಪುರಸಭೆಯೊಂದಿಗೆ ಪುರನಾಗರಿಕರು  ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಆರ್.ಮಂಜುನಾಥ್ ಕರೆ ನೀಡಿದರು.ಅವರು ಪುರಸಭೆ ಕಚೇರಿಯಿಂದ ಸಿಬ್ಬಂದಿಗಳೊಂದಿಗೆ ಪುರನಾಗರಿಕರಲ್ಲಿ ಡೆಂಘೀ ನಿಯಂತ್ರಣ ಕುರಿತು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
 ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮನೆ ಮುಂದೆ, ಅಕ್ಕಪಕ್ಕದ ಗುಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತಮ್ಮ ಮನೆಯಲ್ಲಿನ ಕಸವನ್ನು ಪುರಸಭೆಯ ಗಾಡಿಯಲ್ಲಿ ಹಾಕುವುದನ್ನು ರೂಢಿಸಿಕೊಳ್ಳಬೇಕು. ಈಗಾಗಲೇ ಪುರಸಭೆಯ ವ್ಯಾಪ್ತಿಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಪಾಂಗಿಂಗ್ ಮೂಲಕ  ಹೊಗೆ ಬಿಡಲಾಗುತ್ತಿದೆ. ಚರಂಡಿಗಳಿಗೆ ಡಿಡಿಟಿ ಫೌಡರ್ ಸಿಂಪಡಿಸಲಾಗುತ್ತಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕರ ಪತ್ರ ಹಂಚುವ ಮೂಲಕ ಪುರಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಪುರಜನರ ಆರೋಗ್ಯವೇ ಪುರಸಭೆಯ ಧ್ಯೇಯವಾಗಿದೆ ಎಂದರು.    
ಡಾ.ರವಿಕುಮಾರ್, ಡಾ.ಶಶಾಂಕ್, ಪುರಸಭೆಯ ರೆವಿನ್ಯೂ ಇನ್ಸ್ಪೆಕ್ಟರ್ ಗುರುನಾಥ್, ನಂದೀಶ್, ನಾಗೇಂದ್ರ, ನರಸಿಂಹಮೂರ್ತಿ, ಪುರಸಭೆ ಆರೋಗ್ಯಾಧಿಕಾರಿ ಕುಸುಮಾ, ಎಂಜಿನಿಯರ್ ಮುರಳೀಧರ್, ಸುಮತಿ,ನಂಜುಂಡಪ್ಪ, ಮೋಹನ್ ಇತರರು ಜಾಥಾದಲ್ಲಿ ಭಾಗವಹಿಸಿ ಕರ ಪತ್ರ ವಿತರಿಸುವ ಮೂಲಕ ಜನಜಾಗೃತಿ ಗೊಳಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.