ತಾಲೂಕು ಕಚೇರಿಯಲ್ಲಿ ಸ್ವಚ್ಛತೆ ಇಲ್ಲದೇ ಅದ್ವಾನ
ಕನ್ನಡಪ್ರಭ ವಾರ್ತೆ ನೆಲಮಂಗಲ ಜೂ. 4
ತಾಲೂಕು ಕಚೇರಿಯಲ್ಲಿ ಸ್ವಚ್ಛತೆ ಇಲ್ಲದೆ ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆ ನೊಣಗಳಿಗೆ ಆಶ್ರಯ ತಾಣವಾಗಿದ್ದು, ಶೌಚಾಲಯಗಳು ಸ್ವಚ್ಛತೆಯಿಲ್ಲದೆ ಗಬ್ಬುನಾಥ ಬೀರುತ್ತಿರುವುದರಿಂದ ಮೂಗು ಮುಚ್ಚಿ ಓಡಾಡುವ ಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕಚೇರಿ ಗೋಡೆಗಳ ಮೇಲೆ ಎಲ್ಲೆಂದರೆ ಅಲ್ಲಿ ಗುಟ್ಕಾದ ಉಗುಳಿನಿಂದು ನೋಡಲು ಅಸಹ್ಯವಾಗುತ್ತಿದ್ದರೂ ತಹಸೀಲ್ದಾರ್ ಅವರು ಕಚೇರಿ ಸ್ವಚ್ಛತೆಯ ಕಡೆ ಗಮನ ಹರಿಸಿದಂತೆ ಕಾಣುತ್ತಿಲ್ಲ. ಆಹಾರ ಇಲಾಖೆ, ಖಜಾನೆ, ಕಂದಾಯ ಇಲಾಖೆ, ಮುಜರಾಯಿ ಇಲಾಖೆ, ಸರ್ವೆ ಇಲಾಖೆ, ಭೂಮಿ ನೋಂದಣಿ ಕೇಂದ್ರ ಸೇರಿದಂತೆ ಇತರೆ ಇಲಾಖೆಗಳ ಕಚೇರಿಯ ಕಟ್ಟಡಗಳು ಈ ಕಟ್ಟಡದಲ್ಲಿಯೇ ಇರುವುದರಿಂದ ಪ್ರತಿ ದಿನ ಸಾವಿರಾರು ಮಂದಿ ಕಚೇರಿಗೆ ಭೇಟಿ ನೀಡುತ್ತಾರೆ. ಇಲ್ಲಿಗೆ ಬರುವ ಜನರಿಗೆ ಕಚೇರಿ ಮುಂದೆ ಕುಳಿತುಕೊಳ್ಳಲಾಗಲಿ ಕನಿಷ್ಠ ನಿಂತುಕೊಳ್ಳಲಾಗಲಿ ಯಾವುದೇ ಸೌಲಭ್ಯವಿಲ್ಲ.
ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಸಾರ್ವಜನಿಕ ಆಸ್ಪತ್ರೆ ಇದೆ. ಈ ಸೊಳ್ಳೆಗಳು ಆಸ್ಪತ್ರೆಯಲ್ಲಿನ ರೋಗಿಗಳನ್ನು ಕಚ್ಚುತ್ತವೆ. ತಾಲೂಕು ಆಡಳಿತದ ಶಕ್ತಿ ಕೇಂದ್ರದಲ್ಲಿಯೇ ಸ್ವಚ್ಛ ಮಾಡದವರು ತಾಲೂಕನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ನಿಡವಂದ ರಾಜು ಪ್ರಶ್ನಿಸುತ್ತಾರೆ.
ಕಟ್ಟಡದ ಯಾವ ಭಾಗದಲ್ಲಿಯೂ ಕಸ ಸಂಗ್ರಹದ ತೊಟ್ಟಿಗಳನ್ನಾಗಲಿ ಬಾಕ್ಸ್ಗಳನ್ನಾಗಲಿ ಇಟ್ಟಿಲ್ಲದಿರುವುದರಿಂದ ಜನ ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ
ಭೂಮಿಯ ಪಹಣಿ ಪಡೆಯಲು ಕಚೇರಿಯ ಮುಂಭಾಗದಲ್ಲಿಯೇ ವ್ಯವಸ್ಥೆ ಮಾಡಿದ್ದಾರೆ. ಜನ ಹೆಚ್ಚಾದರೆ ಗೇಟಿನ ಮುಂದೆ ಜನ ನಿಂತು ಒಳಗೆ ಮತ್ತು ಹೊರಗೆ ಓಡಾಡಲು ಇತರರಿಗೆ ಕಷ್ಟವಾಗುತ್ತಿದೆ. ಇನ್ನು ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರತಿ ದಿನ ನೂರಾರು ಜನ ಆಸ್ತಿ ಮತ್ತು ಸೈಟು ನೋಂದಣಿಗೆ ಬರುತ್ತಾರೆ ಇವರಿಗೂ ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲ. ಬೆಳಗಿನಿಂದ ಕೆಲಸ ಮುಗಿಯುವವರೆಗೂ ಒಂಟಿ ಕಾಲಿನಲ್ಲಿ ನಿಲ್ಲಬೇಕಾದ ಶಿಕ್ಷೆ ಅನುಭವಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

