ಕಲಾ ತಂಡಗಳ ಆಯ್ಕೆಗಾಗಿ ಅರ್ಜಿ
ರಾಮನಗರ: ವಾರ್ತಾ ಇಲಾಖೆಯು ಗ್ರಾಮಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಮೂರು ಬೀದಿ ನಾಟಕ ಕಲಾ ತಂಡಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಿದೆ. ಬೀದಿ ನಾಟಕ, ಯಕ್ಷಗಾನ, ತೊಗಲುಗೊಂಬೆಯಾಟ, ಮ್ಯಾಜಿಕ್ ಶೋ ಮುಂತಾದ ಪ್ರಚಲಿತ ಕಲಾ ಪ್ರಕಾರಗಳ ಕಲಾ ತಂಡಗಳು ಅರ್ಜಿ ಸಲ್ಲಿಸಬಹುದು. ಪ್ರತಿ ತಂಡದಲ್ಲಿ ಕನಿಷ್ಠ 10 ಕಲಾವಿದರಿರಬೇಕು. ಇಬ್ಬರು ಮಹಿಳಾ ಕಲಾವಿದರಿರುವುದು ಕಡ್ಡಾಯ. ನಿಗದಿತ ಅರ್ಜಿ ನಮೂನೆಯಲ್ಲಿ ತಂಡದ ಮುಖ್ಯಸ್ಥರು ಸೇರಿದಂತೆ ಎಲ್ಲ 10 ಕಲಾವಿದರ ಭಾವಚಿತ್ರ ಲಗತ್ತಿಸಬೇಕು ಹಾಗೂ ಕಲಾವಿದರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಒಂದು ತಂಡದ ಸದಸ್ಯರು ಇನ್ನೊಂದು ತಂಡದಲ್ಲಿ ಇದ್ದರೆ ತಂಡವನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಅರ್ಜಿಯೊಂದಿಗೆ ಸಲ್ಲಿಸಿದ ಕಲಾತಂಡದ ಕಲಾವಿದರನ್ನೇ ಆಯ್ಕೆಗೆ ಪರಿಗಣಿಸಲಾಗುವುದು. ವಾರ್ತಾ ಇಲಾಖೆ ಉಪ ನಿರ್ದೇಶಕರ ಅಧ್ಯಕ್ಷತೆಯ ಆಯ್ಕೆ ಸಮಿತಿ ತಂಡಗಳ ಆಯ್ಕೆ ಮಾಡುವುದು. ಆಯ್ಕೆಯಾದ ತಂಡಗಳಿಗೆ ಸೂಕ್ತ ತರಬೇತಿ ನೀಡಲಾಗುವುದು. ಅರ್ಜಿಯನ್ನು ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಇಲಾಖೆ, ರಾಮನಗರ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂ.17ರ ಸಂಜೆ 4ರೊಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ದೂಣ080-27273405 ಸಂಪರ್ಕಿಸಬಹುದು.
ಉದ್ಯೋಗ ಮೇಳ
ರಾಮನಗರ: ಜೂ.15 ರಂದು ಜಿಲ್ಲಾ ಉದ್ಯೋಗ ವಿನಿಯಮ ಕಚೇರಿ, ಕಂದಾಯ ಭವನ, ರಾಮನಗರ ಇಲ್ಲಿ ಟ್ರ್ಯಾಕ್ ಕಾಂಪೊನೆಂಟ್ ಲಿಮಿಟೆಡ್ ಕಂಪನಿಗೆ ಪುರುಷ ಅಭ್ಯರ್ಥಿಗಳಿಗೆ ಉದ್ಯೋಗ ಮೇಳ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂ.15ರ ಬೆಳಗ್ಗೆ 10.30ಕ್ಕೆ ತಮ್ಮ ವಿದ್ಯಾರ್ಹತೆಯ ಮೂಲ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಭಾಗವಹಿಸಬಹುದು. ಹೆಲ್ಪರ್ ಅಥವಾ ಸಿಬ್ಬಂದಿ: ಒಟ್ಟು 100 ಹುದ್ದೆಗಳು, ವಿದ್ಯಾರ್ಹತೆ ಎಸ್ಎಸ್ಎಲ್ಸಿ, ಪಿಯುಸಿ, ವಯೋವುತಿ 18 ರಿಂದ 24 ವರ್ಷ, ವೇತನ ರು.6000. ಟೆಕ್ನಿಷಿಯನ್- ಒಟ್ಟು ಹುದ್ದೆ 100, ವಿದ್ಯಾರ್ಹತೆ ಐಟಿಐ ಯಾವುದೇ ವೃತ್ತಿಯಲ್ಲಿ ತೇರ್ಗಡೆ, ವಯೋವುತಿ 18 ರಿಂದ 26 ವರ್ಷ, ವೇತನ ರು.7 ರಿಂದ 8 ಸಾವಿರ.
ವೆಲ್ಡರ್: ಒಟ್ಟು ಹುದ್ದೆ 100, ವಿದ್ಯಾರ್ಹತೆ ಐಟಿಐ ವೆಲ್ಡರ್, ವಯೋವುತಿ 18-26 ವರ್ಷ, ವೇತನ ರು.7 ರಿಂದ 8 ಸಾವಿರ. ಉದ್ಯೋಗಾಕಾಂಕ್ಷಿಗಳು ಆಯ್ಕೆಯ ನಂತರ ಕೋಲಾರದಲ್ಲಿ ಕೆಲಸ ನಿರ್ವಹಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 3663531312, 9901876629 ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

