ಬೆಂಗಳೂರು ಗ್ರಾಮಾಂತರ

ರಾಮಾಂಜನೇಯ ತಂಡಕ್ಕೆ ದೇವರ ದಾಸಿಮಯ್ಯ ಕಪ್

Published On :

ಕ.ಪ್ರ.ವಾರ್ತೆ   ದೊಡ್ಡಬಳ್ಳಾಪುರ    ಜೂ.10
ಇಲ್ಲಿನ ಶ್ರೀಗಾಯತ್ರಿ ಪೀಠ ಮಿತ್ರ ಬಳಗ ಟ್ರಸ್ಟ್, ಗಾಯತ್ರಿ ಪೀಠ ಯುವ ಬಳಗ, ಮಹಿಳಾ ಬಳಗದ ನೇತೃತ್ವದಲ್ಲಿ ಇಲ್ಲಿನ ಕೊಂಗಾಡಿಯಪ್ಪ ಕಾಲೇಜು ಮೈದಾನದಲ್ಲಿ 2 ದಿನಗಳ ಕಾಲ ನಡೆದ ಶ್ರೀದೇವರ ದಾಸಿಮಯ್ಯ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೀರಾಮಾಂಜನೇಯ ಕ್ರಿಕೆಟ್ ಕ್ಲಬ್ ತಂಡ ಜಯಗಳಿಸಿ ಪ್ರಶಸ್ತಿ ಪಡೆದುಕೊಂಡಿದೆ.
ಸೋಮವಾರ ಸಂಜೆ ಗೋಲ್ಡನ್ ಲಯನ್ಸ್ ಮತ್ತು ರಾಮಾಂಜನೇಯ ಸಿಸಿ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಮಾಂಜನೇಯ ತಂಡ ನಿಗದಿತ 6 ಓವರ್ಗಳಲ್ಲಿ 40 ರನ್ ಗಳಿಸಿತ್ತು. 41 ರನ್ನುಗಳ ಗುರಿ ಬೆನ್ನತ್ತಿದ ಗೋಲ್ಡನ್ ಲಯನ್ಸ್ ತಂಡ ನಿಗದಿತ 6 ಓವರ್ಗಳಲ್ಲಿ 31 ರನ್ನುಗಳನ್ನು
ಮಾತ್ರ ಗಳಿಸಿ 9 ರನ್ಗಳಿಂದ ಸೋಲನ್ನಪ್ಪಿತು. ಪಂದ್ಯಾವಳಿಯ ವಿವಿಧ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ರಾಮಾಂಜನೇಯ ತಂಡದ ಗುರುರಾಜ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹೇಮಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಟ್ರೋಫಿ ವಿತರಣೆ: ಫೈನಲ್ ಪಂದ್ಯಾವಳಿಯಲ್ಲಿ ಗೆಲವು ಸಾಧಿಸಿದ ರಾಮಾಂಜನೇಯ ತಂಡಕ್ಕೆ ಪಿ.ಸಿ.ಲಕ್ಷ್ಮೀನಾರಾಯಣ್ ಪ್ರಾಯೋಜಿತ ಪಂಜಿನಿ ಚನ್ನಪ್ಪ-ಲಕ್ಷ್ಮೀದೇವಮ್ಮ ಪರ್ಯಾಯ ಪಾರಿತೋಷಕ, ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಯಿತು. ರನ್ನರ್ ಅಪ್ ಆದ ಗೋಲ್ಡನ್ ಲಯನ್ಸ್ ತಂಡಕ್ಕೆ ಕೆ.ಜಿ.ರಘುರಾಂ ಪ್ರಾಯೋಜಿತ ಕೆ.ಗೋಪಾಲಕೃಷ್ಣ-ಪ್ರಭಾವತಮ್ಮ ಪರ್ಯಾಯ ಪಾರಿತೋಷಕ, ಟ್ರೋಫಿ ಮತ್ತು ನಗದು ಬಹುಮಾನ ವಿತರಿಸಲಾಯಿತು. ಎರಡೂ ತಂಡಗಳ ಎಲ್ಲ ಸದಸ್ಯರಿಗೆ ವೈಯಕ್ತಿಕ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.
ಸೇವೆಗೆ ನಗದು ಬಹುಮಾನ: ಫೈನಲ್ ಪಂದ್ಯದಲ್ಲಿ ಗೆದ್ದ ಮತ್ತು ಸೋತ ತಂಡಗಳೆರಡೂ ತಮಗೆ ನೀಡಿದ 3333 ಮತ್ತು 2222 ರು.ಗಳ ನಗದು ಬಹುಮಾನವನ್ನು ಗಾಯತ್ರಿಪೀಠ ಮಿತ್ರ ಬಳಗದ ಪುಸ್ತಕ ನಿಧಿಗೆ ನೀಡುವ ಮೂಲಕ ಸೇವಾ ಕಾರ್ಯಗಳು ಮತ್ತು ಬಡವಿದ್ಯಾರ್ಥಿಗಳಿಗೆ ನೆರವಾಗುವ ಆಶಯ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮ: ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮಾತನಾಡಿ ಗಾಯತ್ರಿ ಪೀಠ ಮಿತ್ರ ಬಳಗ, ಯುವಬಳಗಗಳು ನಡೆಸುತ್ತಿರುವ ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಮಾಜ ಸೇವೆ ಚಟುವಟಿಕೆಗಳು ಸಂಘಟನೆಯ ದೃಷ್ಟಿಯಲ್ಲಿ ಮಹತ್ವದ ಪಾತ್ರವಹಿಸಿದೆ. ಸಮಾಜದ ಮುನ್ನಡೆಗೆ ಪೂರಕವಾಗುವ ಮತ್ತಷ್ಟು ಸೇವಾ ಕಾರ್ಯಗಳಿಗೆ ಒತ್ತು ನೀಡುವ ಅಗತ್ಯವಿದೆ. ಸತತ 2ನೇ ಬಾರಿ ಯಶಸ್ವಿಯಾಗಿ ಪಂದ್ಯಾವಳಿ ನಡೆದಿರುವುದು ಗಣನೀಯ ಎಂದರು.
ಗಾಯತ್ರಿ ಪೀಠ ಮಿತ್ರ ಬಳಗದ ಅಧ್ಯಕ್ಷ ಶಿವಾನಂದ್, ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ವಿ. ತಿಮ್ಮಶೆಟ್ಟಪ್ಪ, ನಗರಸಭಾ ಸದಸ್ಯ ಪಿ.ಸಿ.ಲಕ್ಷ್ಮೀನಾರಾಯಣ್, ಕ್ರೀಡಾ ಸಮಿತಿ ಅಧ್ಯಕ್ಷ ಕೆ.ಜಿ.ರಘುರಾಂ, ಸಿಟಿ ಬ್ಯಾಂಕ್ನ ವ್ಯವಸ್ಥಾಪಕ ಕಾರ್ತಿಕ್ ಮತ್ತಿತರರು ಭಾಗವಹಿಸಿದ್ದರು. ಉಮಾಶಂಕರ್, ನಾಗರಾಜ್, ಕೃಷ್ಣಕುಮಾರ್, ಶಿವಶಂಕರ್ ಸೇರಿದಂತೆ ಕ್ರೀಡಾ ಸಮಿತಿಯ ಸದಸ್ಯರು, ಯುವಬಳಗ ಮತ್ತು ಮಿತ್ರ ಬಳಗದ ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.