'ಜನರ ಸಮಸ್ಯೆಗೆ ಪೊಲೀಸರು ಸ್ಪಂದಿಸಲಿ'
ಸೂಲಿಬೆಲೆ: ಸಮಸ್ಯೆಯನ್ನು ಹೊತ್ತು ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಪ್ರೀತಿ ವಿಶ್ವಾಸದಿಂದ ಅವರ ಸಮಸ್ಯೆಗೆ ಸ್ವಂದಿಸಿದಾಗ ಪೊಲೀಸ್ ಕೆಲಸಕ್ಕೆ ಸಾರ್ಥಕತೆ ಬರುತ್ತದೆ. ಪೊಲೀಸರಿಗೆ ಜನಪರವಾದ ಕಾಳಿಜಿ ಮುಖ್ಯ ಎಂದು ಸೂಲಿಬೆಲೆ ಪೊಲೀಸ್ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ಎಫ್.ಕೆ ನದಾಫ್ ಹೇಳಿದರು.
ಪಟ್ಟಣದ ಠಾಣೆಯಲ್ಲಿ 5 ವರ್ಷ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸಿ ಸಹಾಯಕ ಸಬ್ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ಹೊಂದಿರುವ ರಾಮಚಂದ್ರಪ್ಪ ಅವರನ್ನು ಬೀಳ್ಕೊಡುವ ಮುನ್ನ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸಾರ್ವಜನಿಕರ ಸೇವೆಯಲ್ಲಿರುವ ಪೊಲೀಸರು ಜನರ ಕಷ್ಟಗಳಿಗೆ ಸ್ವಂದಿಸಿದಾಗ ಕರ್ತವ್ಯಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ.ಜನರ ಜೊತೆ ಬೆರೆತು ಕೆಲಸಮಾಡಿದರೆ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು.ಜನರು ಮತ್ತು ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿರುವ ರಾಮಚಂದ್ರಪ್ಪನವರ ಸೇವೆ ಇಲಾಖೆಗೆ ಇದೇ ರೀತಿ ಸಿಗಲಿ ಎಂದು ಹಾರೈಸಿದರು. ಇದೆ ಸಂದರ್ಭದಲ್ಲಿ ಮುಖ್ಯ ಪೇದೆ ಕೃಷ್ಣಪ್ಪ ಮಾತನಾಡಿದರು.
ಎಎಸ್ಐ ಕುಂಜಪ್ಪ, ಮನೋಕರನ್,ಪ್ರಕಾಶ್,ನಾಗರಾಜ್,ನರಸಿಂಹಮೂರ್ತಿ,ಮಂಜುನಾಥ್,ಶಿವರುದ್ರೇಗೌಡ,ಕೃಷ್ಣಪ್ಪ,ಪ್ರಾಣೇಶ್,ಸಂಜಯ್ ಹಲವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

