ಬೆಂಗಳೂರು ಗ್ರಾಮಾಂತರ

ಮುಖ್ಯಮಂತ್ರಿ ಆದೇಶ ಪಾಲಿಸಿದ ಉಸ್ತುವಾರಿ ಸಚಿವ

Published On :

ರಾಮನಗರ: ಉಸ್ತುವಾರಿ ಸಚಿವರು ಹೊಣೆ ಹೊತ್ತ ಜಿಲ್ಲೆಗಳಿಗೆ ಭೇಟಿ ನೀಡುವ ವೇಳೆ ಖಡ್ಡಾಯವಾಗಿ ಪಕ್ಷದ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಸಭೆ ನಡೆಸಬೇಕೆನ್ನುವ ಸಿದ್ದರಾಮಯ್ಯ ಸೂಚನೆಯನ್ನು ರಾಮನಗರದ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಚಾಚೂ ತಪ್ಪದೆ ಪಾಲಿಸಿದ್ದಾರೆ.  ಸರ್ಕಾರವು ರಾಮನಗರಕ್ಕೆ ಈ ಮೊದಲು ಕೃಷ್ಣ ಬೈರೇಗೌಡರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, 24 ತಾಸಿನಲ್ಲೇ ಬದಲಿಸಿತು. ಉಸ್ತುವಾರಿ ಹೊಣೆ ಹೊತ್ತ ಬಳಿಕ ಜಾರ್ಜ್ ಇದೇ ಮೊದಲ ಬಾರಿ ರಾಮನಗರ ಜಿಲ್ಲೆಗೆ ಆಗಮಿಸಿದ್ದರು. ಮೊದಲಿಗೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಜಾರ್ಜ್ ಅವರನ್ನು ಜಿಲ್ಲಾಧಿಕಾರಿ, ಎಸ್ಪಿ ಸಹಿತ ಅಧಿಕಾರಿಗಳು ಸ್ವಾಗತಿಸಿದರು. ನಂತರ ಅವರು ಬಿಎಂ ಹೆದ್ದಾರಿ ಪಕ್ಕದ ಕಾಂಗ್ರೆಸ್ ಕಚೇರಿಗೆ ತೆರಳಿದರು. ಅಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು.
ನಕಲಿ ಚಿನ್ನದ ಗುಂಡು ಸುರಿದು ಹೋದ ಕಿಡಿಗೇಡಿಗಳು
ರಾಮನಗರ: ಕಾರಿನಲ್ಲಿ ಬಂದ ಕಿಡಿಗೇಡಿಗಳು ಚೀಲಮೊಂದರಲ್ಲಿ ತಂದಿದ್ದ ನಕಲಿ ಚಿನ್ನದ ಗುಂಡುಗಳನ್ನು ತಾಲೂಕಿನ ಪಾದರಹಳ್ಳಿ ಹೊರ ವಲಯದಲ್ಲಿ ಸುರಿದು ಹೋಗಿದ್ದಾರೆ.  ಅವೆಲ್ಲ ಚಿನ್ನದ ಗುಂಡುಗಳೇ ಎಂದು ದಾರಿ ಹೋಕರು ಸಿಕ್ಕಷ್ಟು ತುಂಬಿಕೊಂಡು ಹೋಗಿದ್ದಾರೆ. ಗುಂಡುಗಳು ತಲಾ 7-8 ಗ್ರಾಂ ಇದ್ದವು. ತೆಗೆದುಕೊಂಡು ಹೋದವರು ನಂತರ ಪರೀಕ್ಷಿಸಿದಾಗ ಅವೆಲ್ಲ ನಕಲಿ ಚಿನ್ನದವು  ಎನ್ನುವುದು ಗೊತ್ತಾಗಿ ಬೇಸ್ತು ಬಿದ್ದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.