ಸಾಲುಮರದ ನಿಂಗಣ್ಣಗೆ ರಾಜ್ಯ ಪರಿಸರ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗಳನ್ನು 2011- 2012ನೇ ಸಾಲಿಗೆ ಇಬ್ಬರು ವ್ಯಕ್ತಿಗಳು ಮತ್ತು 4 ಸಂಸ್ಥೆಗಳಿಗೆ ನೀಡಲಾಗಿದ್ದು ಜೂ.18 ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಪರಿಸರ ದಿನವಾದ ಜೂ.5ರಂದೇ ಪ್ರಶಸ್ತಿ ಪ್ರದಾನ ಮಾಡುವ ಉದ್ದೇಶವಿತ್ತು. ಆದರೆ ಸರ್ಕಾರ ಹೊಸದಾಗಿ ಬಂದಿದ್ದರಿಂದ ವಿಳಂಬವಾಗಿದೆ ಎಂದರು. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದವರು ಪರಿಸರಕ್ಕಾಗಿ ಮಾಡಿದ ಕಾರ್ಯ, ವಸ್ತುಸ್ಥಿತಿ ಗಮನಿಸಲು ಅರಣ್ಯ ಮತ್ತು ಪರಿಸರಿ ಇಲಾಖೆ ಪ್ರದಾನ ಕಾರ್ಯದರ್ಶಿಗಳ ನೇತ್ರತ್ವದಲ್ಲಿ ತಂಡ ರಚಿಸಲಾಗಿತ್ತು. ಈ ಸಾಲಿನ ಪ್ರಶಸ್ತಿ ಅರಸಿ ಬಂದ ಒಟ್ಟು 34 ಅರ್ಜಿದಾರರು ಮಾಡಿದ ಕಾರ್ಯಗಳನ್ನು ಕಣ್ಣಾರೆ ನೋಡಲು ಅಧಿಕಾರಿಗಳ ತಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು ಎಂದರು.
ಸಾಲುಮರದ ನಿಂಗಣ್ಣ: ರಾಮನಗರ ಜಿಲ್ಲೆ ಕೂಟಗಲ್ ಹೋಬಳಿ ಬಿಳಗುಂಬ ಅಂಚೆ ಅರೇಹಳ್ಳಿಯ ಸಾಲು ಮರದ ನಿಂಗಣ್ಣ ಈ ಬಾರಿ ಪರಿಸರ ಪ್ರಶಸ್ತಿ ಪಡೆದಿದ್ದಾರೆ.
ನಿಂಗಣ್ಣ ಕಳೆದ 30 ವರ್ಷಗಳಿಂದ ತಮ್ಮ ಹೊಲದಿಂದ ನಾಲ್ಕು ಕಿಲೋ ಮೀಟರ್ವರೆಗಿನ ರಸ್ತೆಯ ಎರಡು ಬದಿಯಲ್ಲಿ ನೆಲ್ಲಿ, ಹಿಪ್ಪಳೆ, ಮಾವು ಅತ್ತಿ, ಗೋಣಿ, ಆಲ, ಶಿವಶಂಖ ಹಾಗೂ ಬಿದಿರು ಮರಗಳನ್ನು ಸಾವಿರಾರು ಸಂಖ್ಯೆಯಲ್ಲಿ ಬೆಳೆಸಿದ್ದಾರೆ. ರಸ್ತೆ ಬದಿಯಲ್ಲಿ 800 ಮರಗಳು, ಸರ್ಕಾರಿ ಗುಂಡು ತೋಪಿನಲ್ಲಿ 200 ಮರಗಳು, ಕೆರೆ ಬದಿಯಲ್ಲಿ ಬಿದಿರು ಸೇರಿದಂತೆ ಇತರ 100 ಮರಗಳನ್ನು ಬೆಳೆಸಿದ್ದಾರೆ. ಯಾವುದೇ ಸರ್ಕಾರಿ, ಸಂಸ್ಥೆಗಳ ಸಹಾಯ ಪಡೆಯದ ಮಾಡಿದ ಇವರ ಕಾರ್ಯವನ್ನು ಮೆಚ್ಚಿದ ರಾಜ್ಯ ಸರ್ಕಾರ 2009ರಲ್ಲಿ 'ಸಾಲು ಮರದ ನಿಂಗಣ್ಣ' ಪ್ರಶಸ್ತಿ ಪ್ರದಾನ ಮಾಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

