ಬೆಂಗಳೂರು ಗ್ರಾಮಾಂತರ

ಯುವಸಮುದಾಯಕ್ಕೆ ಸಮರ್ಥ ಮಾರ್ಗದರ್ಶನ ಅಗತ್ಯ

Published On :

ಕನಕಪುರ: ಭಾರತೀಯ ಯುವಶಕ್ತಿಯ ಸದ್ಬಳಕೆಯಾಗದೆ ಯುವ ಸಮುದಾಯ ಅಡ್ಡಹಾದಿ ಹಿಡಿಯುತ್ತಿದೆ, ಯುವಸಮುದಾಯಕ್ಕೆ ಸಮರ್ಥ ಮಾರ್ಗದರ್ಶನ ನೀಡಿ ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಉತ್ತೇಜಿಸುವುದು ಇಂದಿನ ಅಗತ್ಯವಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಮಾಯಣ್ಣಗೌಡ ಹೇಳಿದ್ದಾರೆ.   ಅವರು ಕನಕಪುರದ ಎಸ್. ಕರಿಯಪ್ಪ ಸ್ಮಾತಕೋತ್ತರ ಕೇಂದ್ರದಲ್ಲಿ ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಗ್ರಾಮವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು.
 ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಮೇಜರ್ ಡಾ.ಮುನಿರಾಜಪ್ಪ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಯುವ ಸಮುದಾಯದಲ್ಲಿ ಅಗಾಧವಾದ ಚೈತನ್ಯದ ಚಿಲುಮೆಯೇ ತುಂಬಿದೆ.
ಅವರಿಗೆ ಸಮರ್ಥ ಮಾರ್ಗದರ್ಶನದ ಅಗತ್ಯವಿದೆ. ಅವರ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವುದರೊಂದಿಗೆ ಹೊಣೆಗಾರಿಕೆಯನ್ನು ನಿಭಾಯಿಸುವ ಕುರಿತು ತಿಳಿಹೇಳಬೇಕಾಗಿದೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆರ್‌ಇಎಸ್ ಕಾರ್ಯದರ್ಶಿ ಸಿ.ರಮೇಶ್, ಡಾ.ಎಸ್.ಎಚ್.ಭುವನೇಶ್ವರ್ ಪಾಲ್ಗೊಂಡಿದ್ದರು. ಕು.ಪಲ್ಲವಿ ಸ್ವಾಗತಿಸಿದರು. ಕೆ.ಟಿ.ಬಸವರಾಜು ನಿರೂಪಿಸಿದರು. ಶ್ರೀಮತಿ ಟಿ.ವಿ.ರೇಣುಕಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.