ಬೆಂಗಳೂರು ಗ್ರಾಮಾಂತರ

ಅನಧಿಕೃತ ಮಿನರಲ್ ವಾಟರ್ ಘಟಕಗಳ ಕಾರುಬಾರು...

Published On :

ನೆಲಮಂಗಲ: ಅನಧಿಕೃತ ಮಿನರಲ್ ವಾಟರ್ ಘಟಕಗಳು  ಹಗಲು ರಾತ್ರಿ ಎನ್ನದೆ  ಕುಡಿಯುವ ನೀರನ್ನು ಡಬ್ಬಿಯಲ್ಲಿ ತುಂಬಿ ಗ್ರಾಹಕರಿಗೆ ವಿತರಿಸುತ್ತಿವೆ.
ಪಟ್ಟಣದಲ್ಲಿ ಪುರಸಭೆಯವರು ಮನೆಗಳಿಗೆ ಪೂರೈಸುತ್ತಿರುವ ಕುಡಿಯುವ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಜನರು ಸ್ಥಳೀಯ ಮಿವರಲ್ ವಾಟರ್ ಘಟಕಗಳನ್ನು ಆಶ್ರಯಿಸಿ ಅಲ್ಲಿಂದ ಡಬ್ಬಗಳಲ್ಲಿ ಕುಡಿಯುವ ನೀರನ್ನು ಕೊಳ್ಳುತ್ತಿದ್ದಾರೆ.
ಚಿಕೂನ್ಗುನ್ಯಾ, ಡೆಂಘೀ ಅಂತಹ ಕಾಯಿಲೆಗಳು ಮಿನರಲ್ ವಾಟರ್ ಘಟಕಗಳಿಂದಲೂ ಸಹ ಹರಡುತ್ತಿವೆ  ಪಟ್ಟಣದಲ್ಲಿ ಐ.ಎಸ್.ಐ ಮಾನ್ಯತೆ ಪಡೆಯದಂತಹ ಅನಧಿಕೃತ ಮಿನರಲ್ ವಾಟರ್ ಘಟಕಗಳು ಹಗಲು ರಾತ್ರಿ ವೇಳೆ ನೀರನ್ನು ಗ್ರಾಹಕರಿಗೆ ಪೂರೈಸುತ್ತಿವೆ. ಮಿನರಲ್ ವಾಟರ್ ಘಟಕಗಳು ನೀರನ ಪರೀಕ್ಷ ಘಟಕ ಹೊಂದಿರಬೇಕು. ಅಲ್ಲಿನ ಬೋರ್ವೆಲ್ ನೀರು ಪರೀಕ್ಷೆಗೊಳಪಡಿಸಿ ಕುಡಿಯಲು ಯೋಗ್ಯವೆಂದು ಅಧಿಕಾರಿಗಳಿಂದ ಮಾನ್ಯತೆ ಪಡೆಯಬೇಕು. ನೀರಿನ ಘಟಕಗಳಲ್ಲಿ ಕೆಲಸ ನಿರ್ವಹಿಸುವವರು ಆರೋಗ್ಯವಂತರಾಗಿರಬೇಕು. ಶುಚಿತ್ವ ಕಾಪಾಡಬೇಕೆಂದು ಡಬ್ಬಿಗಳಿಗೆ ಐ.ಎಸ್.ಐ ಮಾನ್ಯತೆ ಇರುವ ಲೇಬಲ್ ಅಂಟಿಸಿರಬೇಕು ಎಂದು  ಸರ್ಕಾರ ನಿರಿನ ಘಟಕಗಳಿಗೆ ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಿದ್ದರೂ ಇವೆಲ್ಲವನ್ನು ಗಾಳಿಗೆ ತೂರಿ ಮಿನರಲ್ವಾಟರ್ ಎಂದು ಜನತೆಗೆ ಮಾರಾಟ ಮಾಡುತ್ತಿರುವುದನ್ನು ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಅನಧಿಕೃತ ಮಿನರಲ್ ನೀರಿನ ಘಟಕಗಳನ್ನು ನಿಲ್ಲಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.