ಬೆಂಗಳೂರು ವಿವಿ ವಿಭಜಿಸಿ: ದೊರೆಸ್ವಾಮಿ
ಬೆಂಗಳೂರು: ಬೆಂಗಳೂರು ವಿವಿ ಸದಾ ತೊಡಕು ಮತ್ತು ಗೊಂದಲಗಳಿಂದ ಕೂಡಿರಲು ಮುಖ್ಯ ಕಾರಣ 624 ಕಾಲೇಜುಗಳು ಹಾಗೂ 6 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಸಂಖ್ಯೆಯೇ ಆಗಿದ್ದು, ಇದನ್ನು ವಿಭಜಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪಿಇಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಆರ್. ದೊರೆಸ್ವಾಮಿ ಹೇಳಿದ್ದಾರೆ.
ವಿಭಜನೆಯ ಕುರಿತು ಹಿಂದಿನ ಸರ್ಕಾರದ ನಿರ್ಧಾರ ಪೂರ್ವಾಗ್ರಹದಿಂದ ಕೂಡಿಲ್ಲ. ಉನ್ನತಶಿಕ್ಷಣದ ಗುಣಮಟ್ಟದ ವಿಷಯದಲ್ಲಿ ಈಗಿನ ಸರ್ಕಾರ ಮುಕ್ತ ಮನ್ಸಸಿನಿಂದ ಮುಂದುವರಿದು ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಸ್ಯಾಂ ಪಿತ್ರೋಡ ಅವರ ನಿರ್ದೇಶನದಲ್ಲಿ ರಚಿತವಾದ ಸಮಿತಿ ಕೂಡ ಇದನ್ನೇ ಪ್ರತಿಪಾದಿಸಿದೆ. ಹಿಂದಿನ ಸರ್ಕಾರದ ನಿರ್ಧಾರವನ್ನು ಸಾರಾಸಗಟಾಗಿ ತೆಗೆದುಹಾಕುವ ಬದಲು ಬೆಂಗಳೂರು ವಿವಿಯನ್ನು ಕನಿಷ್ಠ ಎರಡು ವಿವಿಗಳನ್ನಾಗಿ ವಿಭಜಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

