ಬೆಂಗಳೂರು ಗ್ರಾಮಾಂತರ

20 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ

Published On :

ಕ.ಪ್ರ.ವಾರ್ತೆ ಟಿ ಮಾಗಡಿ ಟಿ ಜೂ.22
ಅಂದಾಜು 20 ಲಕ್ಷ ರು. ವೆಚ್ಚದಲ್ಲಿ ಕುದೂರಿನ ಅಂತರಗಂಗೆ ರಸ್ತೆಯಿಂದ ಎಸ್.ಎಸ್.ಪಾಳ್ಯದವರೆಗೆ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಕುದೂರು ಬಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ ಜಿಲ್ಲಾ ಪಂಚಾಯ್ತಿ ವತಿಯಿಂದ ರಸ್ತೆ ಕಾಮಗಾರಿ 20 ಲಕ್ಷ ರು. ಅನುದಾನ ಮಂಜೂರಾಗಿದ್ದು,ಈ ಭಾಗದ ಜನತೆಗೆ ಓಡಾಡಲು ಸುಂದರವಾದ ರಸ್ತೆ ನಿರ್ಮಾಣ ಕಾಮಗಾರಿಗೆ   ಚಾಲನೆ ನೀಡಿದ್ದೇನೆ ಎಂದರು.
ಗ್ರಾಮೀಣ ಭಾಗದ ಬಹುತೇಕ ಎಲ್ಲಾ ರಸ್ತೆಗಳ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ಗ್ರಾಮಾಭಿವೃದ್ಧಿಗೆ ಒತ್ತು ನೀಡಲಾಗಿದೆ. ಅದೇ ರೀತಿ  ತಾಲೂಕಿನ 32 ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬರುವ ರಸ್ತೆ ಸೇರಿದಂತೆ ಗ್ರಾಮ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬಸವ ವಸತಿ, ಅಂಬೇಡ್ಕರ್ ಮತ್ತು ರಾಜೀವ್ ಗಾಂಧಿ ವಸತಿ ಯೋಜನೆಯಡಿ ಈಗಾಗಲೇ ಮನೆಗಳ ಕಾಮಗಾರಿ ಕೈಗೊಂಡಿದ್ದು, ಕಂಪ್ಯೂಟರ್‌ನಲ್ಲಿ ದಾಖಲಾಗದೆ ವಜಾಗೊಂಡಿರುವ ಪಟ್ಟಿಯನ್ನು ತಯಾರಿಸಿ ನೀಡುವಂತೆ ಈಗಾಗಲೇ ಆಯಾ ಪಂಚಾಯ್ತಿಗಳಿಗೆ ಸೂಚಿನೆ ನೀಡಿದ್ದೇನೆ. ಪಟ್ಟಿ ಸಿದ್ಧವಾದ ಕೂಡಲೆ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಸೌಲತ್ತುಗಳನ್ನು ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ಸರ್ಕಾರದ ನಿರ್ದೇಶನದಂತೆ ಗ್ರಾಮೀಣ ಭಾಗದ ಪ್ರತಿ ಕುಟುಂಬಗಳು ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳಬೇಕು  ಇದಕ್ಕಾಗಿ  ಸರ್ಕಾರ ಪಲಾನುಭವಿಗಳಿಗೆ 10 ಸಾವಿರ ರು. ಸಹಾಯಧನ ನೀಡಲಿದೆ. ಈಗಾಗಲೇ ಎಲ್ಲಾ ಪಂಚಾಯ್ತಿಗಳ ಅಧಿಕಾರಿಗಳಿಗೆ ಕಡ್ಡಾಯ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಹಂಸಕುಮಾರಿ  ಮಾತನಾಡಿ ಜಿಲ್ಲಾ ಪಂಚಾಯ್ತಿ ವತಿಯಿಂದ ಕುದೂರು ಹೈಸ್ಕೂಲ್ ಕಟ್ಟಡ ನಿರ್ಮಾಣಕ್ಕೆ 16 ಲಕ್ಷ ರು. ಅನುದಾನ ಮಂಜೂರಾಗಿರುವುದಾಗಿ ತಿಳಿಸಿದರು. ಜಿ.ಪಂ. ಮಾಜಿ ಸದಸ್ಯ ವೀರಪ್ಪ, ತಾ.ಪಂ.  ಉಪಾಧ್ಯಕ್ಷ ಕೆ.ಜಿ. ಉದ್ದೀಶ್, ತಾ.ಪಂ. ಸದಸ್ಯರಾದ ಸತ್ಯನಾರಾಯಣ, ಚಂದ್ರಕಲಾ ಪ್ರಭು, ಗುತ್ತಿಗೆದಾರರಾದ ಎಂ.ಎಚ್.ಶ್ರೀನಿವಾಸ್, ಬಿ.ಎನ್. ಮೋಹನ್ ಕುಮಾರ್, ಎಚ್.ಎಸ್.ಮೂರ್ತಿ, ಎಂಜಿನಿಯರ್ ನಾಯಕ್, ಕುದೂರು ಪಿಡಿಓ ಸಯ್ಯದ್ ಶಮೀರ್  ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.