ಒಂದೇ ಸ್ಥಳದಲ್ಲಿ ಅಂಬೇಡ್ಕರ್, ಬಾಬೂಜಿ ಭವನ
ಕ.ಪ್ರ.ವಾರ್ತೆ ಟಿ ಮಾಗಡಿ ಟಿ ಜೂ.22
ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬೂಜಿ ಭವನವನ್ನು ಒಂದೇ ಸ್ಥಳದಲ್ಲಿ ನಿರ್ಮಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ಭವನವನ್ನಾಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಭರವಸೆ ನೀಡಿದರು.
ಅವರು ತಾಲೂಕಿನ ಸುಗ್ಗನಹಳ್ಳಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮಾಜ ಸೇವಾ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರು ಪವಿತ್ರವಾದ ಸಂವಿಧಾನ ರಚಿಸಿದರು. ಆದರೆ ಇತ್ತೀಚೆಗೆ ಅನೇಕ ಸಂಘಟನೆಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸಮಾಜವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ.ಇದರಿಂದಾಗಿ ಸಂಘಟನೆಗಳು ಸಮಾಜದ ವಿಶ್ವಾಸ ಕಳೆದುಕೊಳ್ಳುತ್ತಿವೆ. ಸಂಘಟನೆಗಳು ಶೋಷಿತರ ಧ್ವನಿಯಾಗಬೇಕು. ನಿರ್ಗತಿಕರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರ್ಕಾರಿ ಸೌಲತ್ತುಗಳನ್ನು ಕೊಡಿಸುವಲ್ಲಿ ಸಂಘಟನೆಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಆತ್ಮಶೋಧನೆ ಮಾಡಿಕೊಳ್ಳಬೇಕು. ಆಗ ಮಾತ್ರ ಡಾ.ಬಿ.ಆರ್. ಅಂಬೇಡ್ಕರ್ ಆಶಯಗಳು ಈಡೇರುತ್ತದೆ. ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ.ಅಸಮಾನತೆ ಅಳಿಸುವ ಪ್ರಯತ್ನವೂ ಆಗುತ್ತದೆ ಎಂದರು.
ನನ್ನನ್ನು ಅಸ್ಪೃಶ್ಯರಂತೆ ಕಾಣಬೇಡಿ: ನಾನು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿದ್ದೇನೆ. ಆದರೂ ನನ್ನನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದೀರಿ ಏಕೆ ಎಂದು ಜನತೆಯನ್ನು ಪ್ರಶ್ನಿಸಿದ ಶಾಸಕ ಎಚ್.ಸಿ.ಬಾಲಕೃಷ್ಣ, ಶೋಷಿತ ಸಮಾಜವವನ್ನು ಸಮಾನತೆಗಾಗಿ ತರಲು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದರಲ್ಲದೆ ಶೋಷಿತರು ಮಾತ್ರ ಸಂವಿಧಾನ್ಮಕ ಕಾನೂನು ಪಾಲನೆ ಮಾಡುತ್ತಿದ್ದು, ಶ್ರೀಮಂತರು ಕಾಲ ಕಸ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಸುಗ್ಗನಹಳ್ಳಿ ಸುವರ್ಣ ಗ್ರಾಮ: ಸುಗ್ಗನಹಳ್ಳಿಯನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಲಾಗುವುದು. ಗ್ರಾಮೀಣ ಭಾಗದ ಜನತೆ ಬಯಲು ಶೌಚಾಲಯ ತಿರಸ್ಕರಿಸಬೇಕು. ಮನೆಗೊಂದು ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಬೇಕು. ಸರ್ಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಕುಟುಂಬಗಳಿಗೆ ಹತ್ತು ಸಾವಿರ ರು. ಸಹಾಯಧನ ನೀಡುತ್ತಿದೆ ಸದ್ಬಳಕೆ ಮಾಡಿಕೊಳ್ಳುವಂತೆ ಎಚ್.ಸಿ. ಬಾಲಕೃಷ್ಣ ಕರೆ ನೀಡಿದರಲ್ಲದೆ ಸರ್ಕಾರಿ ಸೌಲತ್ತು ಪಡೆಯಲು ಯಾರಿಗೂ ಲಂಚ ಕೊಡಬೇಡಿ ಎಂದರು. ಇದೇ ಸಂದರ್ಭದಲ್ಲಿ ಸುಗ್ಗನಹಳ್ಳಿ ಗ್ರಾಮದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ನೀಡಲು ಪಂಚಾಯ್ತಿಗಳು ನಿರಾಶ್ರಿತರ ಪಟ್ಟಿ ತಯಾರಿಸಿ, ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲು ಸೂಚಿಸಲಾಗುವುದು ಎಂದರು.
ಸವಲತ್ತು: ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ನಾಯಕ್ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಶೋಷಿತರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಸೌಲತ್ತುಗಳನ್ನು ನೀಡುತ್ತಿದೆ. ಸಂಘಟನೆಗಳು ಜಾತ್ಯಾತೀಯವಾಗಿ ಒಗ್ಗಟ್ಟಾಗಬೇಕು. ಸೌಲತ್ತುಗಳನ್ನು ನಿರ್ಗತಿಕರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಘದ ಬೇಡಿಕೆಗಳಿಗೆ ತಾಲೂಕಿ ಆಡಳಿತ ಸ್ಪಂದಿಸಲಿದೆ ಎಂದರು.
ಕವಿ ಕೆ.ಬಿ.ಸಿದ್ದಯ್ಯ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರಾಮುಖ್ಯತೆಯನ್ನು ಸಮಾಜ ಸ್ಪಷ್ಟವಾಗಿ ಅರಿಯಬೇಕು. ದಲಿತರಿಗೆ ಮಾತ್ರ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಲಿಲ್ಲ. ಜಾತಿ,ಧರ್ಮ, ಭಾಷೆ, ಹೆಣ್ಣು, ಗಂಡು ಸಮಾನತೆಯಿಂದ ಬದುಕುವಂತಾಗಬೇಕು ಎಂಬ ಚಿಂತನೆಯಿಂದ ಅಂಬೇಡ್ಕರ್ ಸಂವಿಧಾನ ರಚಸಿದ್ದಾರೆ. ಸಂವಿಧಾನದ ಆಶಯಕ್ಕೆ ತಕ್ಕಂತೆ ಸಮಾಜ ನಡೆಯಬೇಕಿದೆ ಎಂದರು.
ಸಂಘದ ಅಧ್ಯಕ್ಷ ಎಸ್.ಆರ್. ನರಸಿಂಹಮೂರ್ತಿ ಮಾತನಾಡಿ ಸಂಘವು ಶೋಷಿತರ ಧ್ವನಿಯಾಗಿದೆ. ಪುರಾತನ ಸುಗ್ಗನಹಳ್ಳಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿತ್ಯ ನೂರಾರುಭಕ್ತರು ಬರುತ್ತಾರೆ. ವಸತಿಗೃಹವಿಲ್ಲ, ದೇವಾಲಯದ ಬಳಿ ವಸತಿ ಸಮ್ಮುಚ್ಚಾಯ ನಿರ್ಮಿಸಿ ಮೂಲಭೂತ ಸೌಲತ್ತುಗಳನ್ನು ನೀಡುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವೀರಪ್ಪ, ತಾ.ಪಂ. ಉಪಾಧ್ಯಕ್ಷ ಕೆ.ಜಿ. ಉದ್ದೀಶ್, ಉಪಾಧ್ಯಕ್ಷ ಗಂಗಯ್ಯ, ಪ್ರಧಾನ ಕಾರ್ಯದರ್ಶಿ ಎಎಸ್.ಆರ್. ರಂಗಸ್ವಾಮಿ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ಸಹಕಾರ್ಯದರ್ಶಿ ರಘುಕುಮಾರ್, ಖಜಾಂಚಿ ಎಸ್.ಜಿ.ರಂಗಸ್ವಾಮಿ, ಸಲಹೆಗಾರ ಕೋಡಯ್ಯ, ಸಂಚಾಲಕ ಹನುಮಂತಯ್ಯ, ಎಚ್.ಎಸ್. ಕುಮಾರ್, ಸುಲೋಚನಾ ನಾಗರಾಜು, ಕೃಷ್ಣಮೂರ್ತಿಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

