ಬೆಂಗಳೂರು ಗ್ರಾಮಾಂತರ

ರಾಂಪುರ ಇರುಳಿಗರ ಹಾಡಿಯಲ್ಲಿ ಬಾಲ್ಯ ವಿವಾಹ

Published On :

ಕ.ಪ್ರ.ವಾರ್ತೆ ಟಿ ರಾಮನಗರ ಟಿ ಜೂ.22
ಇಲ್ಲಿಗೆ ಸಮೀಪದ ರಾಂಪುರ ಇರುಳಿಗರ ಹಾಡಿಯಲ್ಲಿ ಬಾಲ್ಯ ವಿವಾಹ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೌನ್ಸೆಲಿಂಗ್ ನಡೆಸಿರುವ ಮಕ್ಕಳ ರಕ್ಷಣಾ ಘಟಕವು ಅಪ್ರಾಪ್ತ ಬಾಲಕಿಯನ್ನು ಬಾಲ ಮಂದಿರದ ವಶಕ್ಕೆ ನೀಡಿದೆ.
ಹಾಡಿಯ 17 ವರ್ಷದ ಬಾಲಕ ಮತ್ತು 11 ವರ್ಷದ ಬಾಲಕಿ ವಿವಾಹ  ಎರಡು ತಿಂಗಳ ಹಿಂದೆಯೇ ಜರುಗಿದೆ ಎನ್ನಲಾಗಿದೆ. 4ನೇ ತರಗತಿಗೆ ದಾಖಲಾಗಬೇಕಿದ್ದ ಬಾಲಕಿಯು ಶಾಲೆಗೆ ಬಾರದಿದ್ದಾಗ ವಿಚಾರಿಸಲಾಗಿ ಮದುವೆಯಾಗಿರುವ ಮಾಹಿತಿ ಬಯಲಾಗಿದೆ.
3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ ಬೇಸಿಗೆ ರಜೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ಬರುತ್ತಿರಲಿಲ್ಲ. ಆಗ ಆಕೆ ಮಾವಿನ ತೋಟ ಕಾಯುವ ಕೆಲಸ ಮಾಡುತ್ತಿದ್ದಾಳೆ ಎಂದು ಪೋಷಕರು ಸಬೂಬು ಹೇಳಿದ್ದರು. ಶಾಲೆ ಪ್ರಾರಂಭದ ಬಳಿಕ ನಿಜ ಸಂಗತಿ ತಿಳಿದಿದೆ.
ಈ ಕುರಿತು ಶಾಲೆಯ ಮುಖ್ಯ ಶಿಕ್ಷಕ ನರಸಿಂಹಯ್ಯ ಅವರು ಮಕ್ಕಳ ರಕ್ಷಣಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಮೇರೆಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಧಾ ಅವರು ಬಾಲಕಿ, ಬಾಲಕ ಮತ್ತು ಎರಡೂ ಕುಟುಂಬದವರ ಕೌನ್ಸೆಲಿಂಗ್ ನಡೆಸಿದ್ದಾರೆ.
ಕಡೆಗೆ, ಬಾಲಕಿಯನ್ನು ಬಾಲ ಮಂದಿರದ ವಶಕ್ಕೆ ಒಪ್ಪಿಸಲಾಗಿದೆ. 18 ವರ್ಷ ತುಂಬುವವರೆಗೂ ಬಾಲಕಿಯು ಬಾಲ ಮಂದಿರದಲ್ಲೇ ವ್ಯಾಸಂಗ ಮುಂದುವರೆಸುವುದಕ್ಕೆ ಕೌನ್ಸೆಲಿಂಗ್ ವೇಳೆ ಪೋಷಕರೂ ಸಮ್ಮತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.