ಲಯನ್ಸ್ಸಂಸ್ಥೆ ಅಧ್ಯಕ್ಷರಾಗಿ ನಾಗರಾಜಯ್ಯ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆಗಳ 2013-14 ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಲಯನ್ಸೆ ಸೇವಾ ಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಪಿಆರ್ಎಸ್ ಚೇತನ್ ಅವರು ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾದ ಆರ್.ನಾಗರಾಜಯ್ಯ ಹಾಗೂ ಲಯನೆಸ್ ಸಂಸ್ಥೆಯ ಅಧ್ಯಕ್ಷರಾದ ವಿ.ಪದ್ಮಾವತಮ್ಮ ಇವರ ತಂಡಗಳಿಗೆ ಅಧಿಕಾರ ಸ್ವೀಕಾರದ ಪ್ರಮಾಣ ವಚನ ಬೋಧನೆ ಮಾಡಿದರಲ್ಲದೆ ನಾವು ನಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುವುದೇ ನನಗೆ ವೈಯುಕ್ತಿಕವಾಗಿ ಸಂತೋಷ. ನಮ್ಮ ಮಾತಿನ ಭಾವುಕತೆ ಸಭಿಕರಿಗೆ ನೇರ ತಲುಪತ್ತದೆ ಎಂದರಲ್ಲದೆ ಇಲ್ಲಿನ ಲಯನ್ಸ್ ಸಂಸ್ಥೆ ಗ್ರಾಮೀಣ ಜನರ ಬದುಕಿಗೆ ಹತ್ತಿರವಾಗಿ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಪಿಳ್ಳಮುನಿಶಾಮಪ್ಪ ಅವರು ಮಾತನಾಡಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಎಲ್ಲ ಆರೋಗ್ಯ ಕಾರ್ಯಕ್ರಮ ನೀಡಲು ಯಾವುದೇ ಸರ್ಕಾರಗಳಿಂದ ಸಾಧ್ಯವಿಲ್ಲ. ಇಂತಹ ಸೇವಾ ಸಂಸ್ಥೆಗಳು ದಾನಿಗಳ ನೆರವನ್ನು ಪಡೆದು ಸಾಮಾನ್ಯ ಜನರ ಬದುಕಿಗೆ ಸ್ಪಂದಿಸುತ್ತಿರುವುದು ಅಭಿನಂದನೀಯ ಎಂದರಲ್ಲದೆ ಸಂಸ್ಥೆಯವರಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಲಯನ್ಸ್ ಸಂಸ್ಥೆಯ ಆರಂಭಿಕ ಸದಸ್ಯರು ಹಾಗೂ ಮಾಜಿ ಸಂಸದರಾದ ಸಿ.ನಾರಾಯಣಸ್ವಾಮಿ ಮಾತನಾಡಿ ಕಳೆದ ಸಾಲಿನ ಅಧ್ಯಕ್ಷರಾದ ಕೆ.ಶ್ರೀನಿವಾಸ್ ತಮ್ಮ ಸದಸ್ಯರ ಸಹಕಾರದೊಂದಿಗೆ ಉತ್ತಮ ಸೇವಾಕಾರ್ಯಗಳನ್ನು ಮಾಡಿದ್ದು ಅದೇ ರೀತಿಯಲ್ಲಿ ನೂತನ ಅಧ್ಯಕ್ಷರಾದ ಆರ್.ನಾಗರಾಜಯ್ಯ ತಂಡದವರು ಉತ್ತಮ ಸೇವಾ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು. ಕಾರ್ಯದರ್ಶಿ ಕಿರ್ಲೋಸ್ಕರ್ ನಾಗರಾಜ್ ವರದಿ ನೀಡಿದರು. ಇದೇ ಸಂಧರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಂಗವಿಕಲ ಮತ್ತು ಬುದ್ಧಿಮಾಂದ್ಯ ಬಾಲಕ ಗೋಪಿಗೆ ವೀಲ್ಚೇರ್ನ್ನು ಮಾಜಿ ಜಿಲ್ಲಾ ರಾಜ್ಯಪಾಲ ಚೇತನ್ ವಿತರಣೆ ಮಾಡಿದರು.
2012-13 ನೇ ಸಾಲಿಗೆ ಆರ್.ನಾಗರಾಜಯ್ಯ -ಅಧ್ಯಕ್ಷರು, ಕೆ.ಶ್ರೀನಿವಾಸ್ ನಿಕಟಪೂರ್ವ ಅಧ್ಯಕ್ಷರು, ನಾಗೇಶ್ ಹತ್ವಾರ್ ಹಾಗೂ ಜಿ.ಮಂಜುನಾಥ್- ಉಪಾಧ್ಯಕ್ಷರು, ಕೆ.ಎಸ್.ರಮೇಶ್ಬಾಬು- ಕಾರ್ಯದರ್ಶಿ, ಎಸ್.ಪ್ರತಾಪ್- ಖಜಾಂಚಿ. ಲಯನೆಸ್ ಸಂಸ್ಥೆಗೆ ವಿ.ಪದ್ಮಾವತಮ್ಮ -ಅಧ್ಯಕ್ಷರು, ವಿನುತಾ ಸತೀಶ್ ನಿಕಟ ಪೂರ್ವ ಅಧ್ಯಕ್ಷೆ, ಕಲಾವತಿ ಹಾಗೂ ಪಾರ್ವತಮ್ಮ - ಉಪಾಧ್ಯಕ್ಷರು, ಕಲ್ಪನಾ ವಿಶ್ವನಾಥ್ -ಕಾರ್ಯದರ್ಶಿ ಹಾಗೂ ನಿರ್ಮಲಕುಮಾರಿ- ಖಜಾಂಚಿಯಾಗಿ ಆಯ್ಕೆಗೊಂಡಿರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

