ಪ್ರಗತಿ ಪರಿಶೀಲನಾ ಸಭೆ ಮುಂದಕ್ಕೆ
ರಾಮನಗರ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಜೂ.29ರಂದು ನಡೆಯಬೇಕಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯು ಕಾರಣಾಂತಗಳಿಂದ ಜು.1ಕ್ಕೆ ಮುಂದೂಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.
ಇಂದು ಪರಿಸರ ಸಂರಕ್ಷಣಾ ದಿನ
ಆನೇಕಲ್ಲು: ಆನೇಕಲ್ ತಾಲೂಕು ವನ್ಯಜೀವಿ ಹಾಗೂ ಪರಸರ ಹಿತರಕ್ಷಣಾ ಸಮಿತಿ ವತಿಯಿಂದ ಪಟ್ಟಣದ ಮುನಿಸ್ವಾಮಪ್ಪ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ ಎಂದು ಸಂಯೋಜಕ ಮಂಜುನಾಥ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಆನೇಕಲ್ ಶಾಸಕ ಬಿ.ಶಿವಣ್ಣ, ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ, ಮೇಲ್ಮನೆ ಸದಸ್ಯ ಬಿ.ಟಿ. ದಯಾನಂದ ಹಾಗೂ ಮಾಜಿ ಸಚಿವ ಎ.ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ.
ರಂಗಸ್ವಾಮಿ ಹಂತಕ ಜಗದೀಶ್ ಬಂಧನ
ನೆಲಮಂಗಲ: ಕಳೆದ 4 ತಿಂಗಳ ಹಿಂದೆ ತಾಲೂಕಿನ ದಾಬಸ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಾಪೂಜಿ ನಗರದ ಬಳಿ ರಂಗಸ್ವಾಮಿ ಎಂಬಾತನನ್ನು ಕುತ್ತಿಗೆ ಸೀಳಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಾಬಸ್ಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಬೆಂಗಳೂರಿನ ಜಗದೀಶ್ (23) ಕೊಲೆ ಆರೋಪಿ. ಈತ ಮತ್ತು ಕೊಲೆಯಾದ ರಂಗಸ್ವಾಮಿ ಇಬ್ಬರೂ ಸ್ನೇಹಿತರೆ ಆಗಿದ್ದು, ಒಮ್ಮೆ ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದಾಗ ಜೊತೆಯಲ್ಲಿಯೇ ಮದ್ಯಪಾನ ಮಾಡಿದ್ದರು. ಆ ಸಂದರ್ಭ ರಂಗಸ್ವಾಮಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ. ಇದನ್ನು ಸಹಿಸದ ಜಗದೀಶ ಎಷ್ಟೇ ಹೇಳಿದರೂ ನಿಂದನೆ ಮುಂದುವರಿಸಿದ್ದನು. ಇದರಿಂದ ತಾಳ್ಮೆ ಕಳೆದುಕೊಂಡ ಜಗದೀಶ ಈತನನ್ನು ಮುಗಿಸುವ ಯೋಚನೆ ಮಾಡಿದ್ದ.ಮತ್ತೆ ಉಪಾಯವಾಗಿ ಮದ್ಯಪಾನ ಮಾಡಲು ಬಾಪೂಜಿ ನಗರದ ಕಡೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶವಾದ ಮತ್ತು ತನ್ನ ತಂದೆಯ ಸಮಾಧಿ ಬಳಿ ಕುಡಿದು ನಂತರ ಚಾಕುವಿನಿಂದ ರಂಗಸ್ವಾಮಿಯ ಕುತ್ತಿಗೆ ಸೀಳಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಎಂದು ದಾಬಸ್ಪೇಟೆ ಪೊಲೀಸರು ತಿಳಿಸಿದ್ದಾರೆ.
ಪುಟ್ಟಯ್ಯ ನಿಧನ
ರಾಮನಗರ: ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಮದ ನಿವೃತ್ತ ಶಿಕ್ಷಕ ಪುಟ್ಟಯ್ಯ(77) ಅವರು ಶುಕ್ರವಾರ ನಿಧನರಾದರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ಸಂಜೆ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಪುಟ್ಟಯ್ಯ ಅವರು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರಿಯೆ ಮತ್ತೀಕೆರೆ ಗ್ರಾಮದಲ್ಲಿ ಶನಿವಾರ ಬೆಳಗ್ಗೆ 11ಕ್ಕೆ ನೆರವೇರಲಿದೆ.
ಇಂದು ಉಚಿತ ಆರೋಗ್ಯ ಶಿಬಿರ
ಹೊಸಕೋಟೆ: ಬೆಂಗಳೂರಿನ ಟ್ರಿನಿಟಿ ಕೇರ್ ಫೌಂಡೇಶನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜೂ.29ರಂದು ಉಚಿತ ಸೀಳುತುಟಿ ಮತ್ತು ಮುಖದ ವಿಕಲಾಂಗತೆಯ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.
ತಪಾಸಣೆ ನಂತರ ಅಗತ್ಯವಿರುವ ಮಕ್ಕಳು, ವಯಸ್ಕರಿಗೆ ಬೆಂಗಳೂರಿನ ಎಸ್ಸಿಜಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಬಡತನ ರೇಖೆಗಿಂತ ಕೆಳಗಿನ ಮಕ್ಕಳು, ವಯಸ್ಕರಿಗೆ ಶಸ್ತ್ರಚಿಕಿತ್ಸೆಯು ಉಚಿತವಾಗಿರುತ್ತದೆ. ಸೀಳುತುಟಿ, ಸೀಳುಅಂಗಳ, ಶಸ್ತ್ರಚಿಕಿತ್ಸೆ, ಹಿಂದಿನ ಸೀಳುತುಟಿ ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ಉಳಿದ ಅಂಗಳದಲ್ಲಿನ ರಂಧ್ರ ಮುಚ್ಚುವ, ಮೂಗಿನ ವಿಕಲಾಂಗತೆಯನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ, ಮುಖದ ಮೇಲಿನ ದವಡೆ, ಕೆಳಗಿನ ದವಡೆ ಹಾಗೂ ವಸಡುಗಳಲ್ಲಿ ಕಂಡುಬರುವ, ಹುಟ್ಟಿನಿಂದಲೇ ಅಥಾವಾ ಚಿಕ್ಕ ವಯಸ್ಸಿನಿಂದ ಕಂಡುಬರುವ ಮುಖದ ವಿಕಲಾಂಗತೆ, ಬಾಯಿ ತೆರೆಯಲು ತೊಂದರೆಯಂತಹ ನ್ಯೂನತೆಗಳನ್ನು ಸರಿಪಡಿಸಲಾಗುವುದು.
ಶಿಬಿರದಲ್ಲಿ ನೋಂದಣಿ ಆದವರಿಗೆ ಆಸ್ಪತ್ರೆಗೆ ದಾಖಲಾದ ದಿನದಿಂದ ಬಿಡುಗಡೆ ಆಗುವವರೆವಿಗೂ ಶಸ್ತ್ರಚಿಕಿತ್ಸೆ, ವಸತಿ ಉಚಿತವಾಗಿರುತ್ತದೆ. ವಿವರಗಳಿಗೆ ಡಾ.ಥಾಮಸ್, ಮೊ.9880394959, 9035525974 ಸಮಪರ್ಕಿಸಿ.
ಯುವತಿ ಮೇಲೆ ಶಿಕ್ಷಕನಿಂದ ಅತ್ಯಾಚಾರ
ಚನ್ನಪಟ್ಟಣ: ಮದುವೆ ಆಗುವುದಾಗಿ ನಂಬಿಸಿ 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ಪಟ್ಟಣದ ಜೀವನ್ಪುರ್ ಮೊಹಲ್ಲಾದಲ್ಲಿ ನಡೆದಿದೆ. ಅರೆಬಿಕ್ ಭಾಷೆ ಕಲಿಸುತ್ತಿದ್ದ ಶಿಕ್ಷಕ ಸೈಯದ್ ಇಮ್ರಾನ್ ಅತ್ಯಾಚಾರವೆಸಗಿದ ಆರೋಪಿ. ಕಳೆದ ಮೂರು ತಿಂಗಳ ಹಿಂದೆ ಅರೆಬಿಕ್ ಭಾಷೆ ಕಲಿಸುವುದಾಗಿ ಬೀಡಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಆಕೆ ಗರ್ಭಿಣಿ ಆದಾಗ ಮದುವೆ ಆಗುವಂತೆ ಯುವತಿ ಕೇಳಿದರು. ಆಗ ನೀನು ಈ ಸಂಗತಿ ಎಲ್ಲಿಯಾದರೂ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ನಿನ್ನ ಅಶ್ಲೀಲ ದೃಶ್ಯಗಳನ್ನು ನಾನು ಸೆರೆ ಹಿಡಿದಿದ್ದು, ಅದನ್ನು ಬಹಿರಂಗಪಡಿಸುವುದಾಗಿ ಶಿಕ್ಷಕ ದಮಕಿ ಹಾಕಿದ್ದ. ಈತನ ವರ್ತನೆಯಿಂದ ಆತಂಕಕ್ಕೀಡಾದ ಯುವತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅತ್ಯಾಚಾರ: ಬಂಧನ
ಚನ್ನಪಟ್ಟಣ: ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರ ಎಸಗಿರುವ ಪ್ರಕರಣ ತಾಲೂಕಿನ ಬ್ರಹಣೀಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 16 ವರ್ಷದ ಬಾಲಕಿಯನ್ನು ಇದೇ ಗ್ರಾಮದ ರಾಜು 6 ತಿಂಗಳ ಹಿಂದೆ ಕರೆದೊಯ್ದಿದ್ದ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

