ಮೌಲ್ಯಯುತ ಶಿಕ್ಷಣ ಅವಶ್ಯ: ವೀರೇಶಾನಂದ ಸರಸ್ವತಿಶ್ರೀ
ಕ.ಪ್ರ.ವಾರ್ತೆ, ನೆಲಮಂಗಲ, ಜೂ.29
ಯುವ ಸಮೂಹಕ್ಕೆ ಗುಣಮಟ್ಟದ ಶಿಕ್ಷಣ ನೀಡಿದರೆ ಸಾಲದು. ಮೌಲ್ಯಯುತವಾದ ಶಿಕ್ಷಣ ಕೊಡಬೇಕು ಎಂದು ತುಮಕೂರಿನ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಗಳು ನುಡಿದರು.
ಪಟ್ಟಣದ ಪವಾಡ ಬಸವಣ್ಣ ದೇವರ ಮಠದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಶುಕ್ರವಾರ ಭವ್ಯ ರಥಯಾತ್ರೆ ಮತ್ತು ಯುವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಶಾಲಾ ಮಕ್ಕಳಿಗೆ ಬಿಸಿಯೂಟ, ಬಡವರಿಗೆ 1ರ ಯೋಜನೆಯಡಿ ಪಡಿತರ ಅಕ್ಕಿ ನೀಡಿ ಸಂಜೆ ದುಬಾರಿ ಮದ್ಯ ನೀಡುವ ಮೂಲಕ ಸಮಾಜ ಇನ್ನಷ್ಟು ಹದಗೆಡುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ನಲಿ- ಕಲಿ ಕಾರ್ಯಕ್ರಮ ರೂಪಿಸಿ ವರ್ಷಾಂತ್ಯದ ಪರೀಕ್ಷೆಯಲ್ಲಿ ಕಾಪಿ ಮಾಡುವ ಸ್ಥಿತಿ ಶಿಕ್ಷಣದ ವ್ಯವಸ್ಥೆಯಾಗಿದ್ದು, ಅದು ಬದಲಾಗಬೇಕಿದೆ. ವಿದ್ಯಾಭ್ಯಾಸ ಶಿಸ್ತಿನ ಮಾರ್ಗದಲ್ಲಿ ನಡೆಯಬೇಕೆಂದು ದಿವ್ಯ ಸಾನ್ನಿಧ್ಯ ವಹಿಸಿದ್ದ ಹಲಸೂರು ರಾಮಕೃಷ್ಣ ಮಠ ತ್ಯಾಗೇಶ್ವರಾನಂದಜೀ ಮಹಾರಾಜ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪವಾಡ ಬಸವಣ್ಣ ದೇವರಮಠದ ಶ್ರೀಸಿದ್ದಲಿಂಗ ಮಹಾಸ್ವಾಮಿ ವಹಿಸಿ ಮಾತನಾಡುತ್ತಾ ವಿವೇಕಾನಂದರ ಪ್ರತಿನಿತ್ಯದ ಅವರ ಅನುಭವ ವಿಚಾರಧಾರೆಯನ್ನು ಪ್ರತಿನಿತ್ಯ ಅರಿಯುವ ಮನೋಭಾವ ಶಾಲಾ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಮೂಡಿ ಬರಬೇಕು. ಶಿಸ್ತಿನ ಮಹತ್ವ ಯುವಕರು ಅಳವಡಿಸಿಕೊಳ್ಳಬೇಕೆಂದರು.
ವಿವೇಕಾನಂದರ ಮೂರ್ತಿ ಹೊತ್ತ ಭವ್ಯ ರಥವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವೀರಗಾಸೆ ನೃತ್ಯದೊಂದಿಗೆ ವಿಶೇಷವಾಗಿ ಅಲಂಕರಿಸಿ ಮೆರವಣಿಗೆ ನಡೆಸಿದರು.
ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ, ಬಸವನಗುಡಿ ಮಠದ ಮಹಾವಾಕ್ಯನಂಜೀ ಮಹಾರಾಜ್, ಮಾಜಿ ಶಾಸಕ ನಾಗರಾಜ್, ತಹಸೀಲ್ದಾರ್ ವಿ.ರಾಜೇಂದ್ರ, ಡಿವೈಎಸ್ಪಿ ಮಲ್ಲೇಶ್, ಬಿ.ಇ.ಓ ಹನುಮಾನಾಯಕ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

