ಆತಂಕಕಾರಿ ಸಮಸ್ಯೆ ಇದ್ದಲ್ಲಿ ಮಾಹಿತಿ ನೀಡಿ: ಎಸಿಪಿ ನಾಯಕ್
ದೇವನಹಳ್ಳಿ: ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಆತಂಕಕಾರಿ ಸಮಸ್ಯೆಗಳ ಮುನ್ಸೂಚನೆ ಇದ್ದಲ್ಲಿ ಠಾಣೆಗೆ ಮಾಹಿತಿ ನೀಡಿ ಎಂದು ಎಸಿಪಿ ಎಸ್.ಎಸ್. ನಾಯಕ್ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಮುಖಂಡರ ಸಭೆಯಲ್ಲಿ ತಿಳಿಸಿದರು.
ಪೊಲೀಸರು ಎಷ್ಟೇ ಎಚ್ಚರದಿಂದ ಇದ್ದರೂ ಹಲವಾರು ಬಾರಿ ಕಳ್ಳತನ ಮತ್ತು ಇತರ ಘಟನೆಗಳು ನಡೆಯುತ್ತವೆ. ಅಲ್ಲದೆ ದೇವನಹಳ್ಳಿ ಬಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವುದರಿಂದ ಹೊರ ರಾಜ್ಯದ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಕೆಲವರು ಅಪಾಯಕಾರಿಯಾಗಿರುತ್ತಾರೆ. ಅಂತಹವರ ಬಗ್ಗೆ ಎಚ್ಚರದಿಂದಿರಬೇಕು ಎಂದರಲ್ಲದೆ ಇನ್ನು ಮುಂದೆ ಪ್ರತಿ ತಿಂಗಳು ಸಾರ್ವಜನಿಕ ಮುಖಂಡರೊಂದಿಗೆ ಸಭೆ ನಡೆಸಲಾಗುವುದು ಎಂದರು.
ದೇವನಹಳ್ಳಿ ಬಸ್ ನಿಲ್ದಾಣದ ಹಿಂಭಾಗದ ಸರ್ಕಲ್ ಹಾಗೂ ಸಿ.ಶಾಂತಮೂರ್ತಿ ಸರ್ಕಲ್, ಸೂಲಿಬೆಲೆ ರಸ್ತೆ ಹಾಗೂ ವಿಜಯಪುರ ಕ್ರಾಸ್ ಬಳಿಯಲ್ಲಿ ಕೆಲವು ಯುವಕರು ಹೆಣ್ಣು ಮಕ್ಕಳು ಹೋಗುವಾಗ ಅಸಭ್ಯತೆಯಿಂದ ವರ್ತಿಸುತ್ತಾರೆ ಎಂದು ಸಾರ್ವಜನಿಕರು ಆರೋಪ ಮಾಡಿದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣಗಳ ಸರ್ಕಲ್ಗಳಲ್ಲಿ ಹೆಚ್ಚಿನ ವಾಹನ ಸಂಚಾರವಿರುವುದರಿಂದ ಸಿಗ್ನಲ್ ದೀಪಗಳ ಅಳವಡಿಕೆಯಾಗಬೇಕು ಎಂದರಲ್ಲದೆ ಈ ಪಟ್ಟಣದಲ್ಲಿ ಸುಮಾರು 25 ಕ್ಕೂ ಹೆಚ್ಚು ಬ್ಯಾಂಕ್ಗಳಿದ್ದು ಎಲ್ಲ ಬ್ಯಾಂಕ್ಗಳ ಮುಂಭಾಗದಲ್ಲಿ ಸಿಸಿ ಕೆಮರ ಅಳವಡಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಮಾತನಾಡಿ ದೇವನಹಳ್ಳಿ ಪಟ್ಟಣದಲ್ಲಿ ಬಾಡಿಗೆ ಮನೆ ಹೊಂದಿರುವವರು ಹೆಚ್ಚು ಬಾಡಿಗೆ ಬರುತ್ತದೆ ಎಂಬ ಕಾರಣದಿಂದ ಗುರುತು ಪರಿಚಯ ಇಲ್ಲದವರಿಗೆ ಮನೆಗಳನ್ನು ಬಾಡಿಗೆಗೆ ನೀಡಬೇಡಿ. ಅನುಮಾನ ಬಂದಲ್ಲಿ ಪೊಲೀಸರಿಗೆ ವಿಷಯ ತಿಳಿಸಿ ಎಂದರು.
ಸಭೆಯಲ್ಲಿ ಮಹಿಳಾ ಸಹಾಯವಾಣಿಯ ಸದಸ್ಯರಾದ ಸೂರ್ಯಕಲಾ ಮೂರ್ತಿ, ಮುಖಂಡರಾದ ಎ.ಸಿ.ಗುರುಸ್ವಾಮಿ, ಸಿ.ಮುನಿರಾಜು. ಎನ್.ಚಂದ್ರಶೇಖರ್, ಅಂಬರೀಷ್, ಸಿ.ಭಾಸ್ಕರ್, ವರ್ತಕರ ಸಂಘದ ಅಧ್ಯಕ್ಷ ಎಸ್.ಆರ್. ಮಂಜುನಾಥ್, ಕಾರ್ಯದರ್ಶಿ ಬಿ.ವಿ.ನಾಗರಾಜು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

