ಬೆಂಗಳೂರು ಗ್ರಾಮಾಂತರ

'ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ'

Published On :

ಕ.ಪ್ರ.ವಾರ್ತೆ, ಮಾಗಡಿ, ಜೂ.30
ಜಲಾನಯನ ಯೋಜನೆಯಡಿ ಸಸಿಗಳನ್ನು ವಿತರಿಸಲಾಗುತ್ತಿದೆ. ಪಲಾನುಭವಿಗಳು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜಲಾನಯನ  ಅಭಿವೃದ್ಧಿ ಅಧಿಕಾರಿ ನರೇಂದ್ರನಾಥ್ ತಿಳಿಸಿದರು.
ಅವರು ಕಲ್ಯಾ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಮೊದಲ ಸುತ್ತಿನ ಗ್ರಾಮ ಸಭೆಯಲ್ಲಿ ಮಾತನಾಡಿ ನರೇಗ ಯೋಜನೆಯಡಿ ಅರಣ್ಯ ಸಸಿಗಳು ಮತ್ತು ತೋಟಗಾರಿಕೆ ಸಸಿಗಳನ್ನು ಬೆಳಿಸಿದ್ದು, ರೈತರು ತಮ್ಮ ಜಮೀನಿನ ಹೊಲದ ಬದುಗಳ ಮೇಲೆ ಅರಣ್ಯ ಸಸಿ ಬೆಳಸಬಹುದು. ಜಮೀನನಲ್ಲಿ ತೋಟಗಾರಿಕೆ ಗಿಡಗಳಾದ ಮಾವು ಇತರೆ ಗಿಡಗಳನ್ನು ಬೆಳೆಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆಯಿಂದ ಬದುಕಬೇಕು ಎಂದು ನರೇಂದ್ರನಾಥ  ವಿವರಿಸಿದರು.
ಕೃಷಿ ಸಹಾಯಕ ಅಧಿಕಾರಿ ಗೋವಿಂದಯ್ಯ ಮಾತನಾಡಿ ಬಿತ್ತನೆ ಬೀಜ, ರೋಗ ಹತೋಟಿ ಕಳೆ ನಾಶಕ ಕುರಿತು ವಿವರಿಸಿದರು.
ಕಲ್ಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಮ್ಮ ನಾಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ  ಗ್ರಾಮ ಸ್ಪರಾಜ್ಯ, ನರೇಗ, 2013-14ನೇ ಸಾಲಿನ 13 ನೇ ಹಣಕಾಸಿನ ಕ್ರಿಯಾ ಯೋಜನೆ ತಯಾರಿಸಿ ಅನುಮೋದಿಸಲಾಯಿತು.
ವಿಧ ಇಲಾಖೆಯ ಯೋಜನೆಗಳಿಗೆ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲಾಯಿತು.
ಉಪಾಧ್ಯಕ್ಷ ಬಿ.ಕೆ.ಕುಮಾರ್, ಸದಸ್ಯರಾದ ಅಂಚೇಮಾರಯ್ಯ, ಬಸವೇಗೌಡ, ವೀರಭದ್ರಯ್ಯ, ರಂಗಸ್ವಾಮಯ್ಯ, ಎಚ್.ಜಿ. ಚಿಕ್ಕಣ್ಣ, ಕೆ.ಎಂ.ನಾಗರಾಜು, ಚಂದ್ರಕಲಾ ಅರುಣ್, ನಿಂಗಮ್ಮ ಶ್ರೀನಿವಾಸ್, ಗೌರಮ್ಮ ಬಸವರಾಜು, ಸುರೇಶ್ ಭಾಗ್ಯಮ್ಮ ಶಾಂತಯ್ಯ, ಶೇಷಮ್ಮ, ಎಡಿಎ ಗಾಯಿತ್ರಿ, ಪಿಡಿಓ ಬಿ.ಶಿವಶಂಕರಯ್ಯ, ಕಾರ್ಯದರ್ಶಿ ಪ್ರೇಮ, ಲೆಕ್ಕಸಹಾಯಕ ಟಿ.ಎನ್. ನರಸಿಂಹಮೂರ್ತಿ, ಶಾಲೆಯ ಮುಖ್ಯ ಶಿಕ್ಷಕರು, ಗ್ರಾಮಸ್ಥರು  ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.