ಪ್ರೇಯಸಿಗೆ ವಿಷವುಣಿಸಿ ಕೊಲೆ
ಆನೇಕಲ್: ಪ್ರೇಮಿಸಿ ವಿವಾಹವಾಗುವುದಾಗಿ ನಂಬಿಸಿ ನಂತರದ ದಿನಗಳಲ್ಲಿ ಅಪನಂಬಿಕೆಯಿಂದ ವರ್ತಿಸಿ ಪ್ರೇಯಸಿಗೆ ವಿಷವಿಟ್ಟು ಕೊಂದ ಘಟನೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ನಡೆದಿದೆ.
ಸಾವು ಬದುಕಿನ ನಡುವೆ 3 ದಿನಗಳ ಕಾಲ ಹೋರಾಟ ಮಾಡಿ ಸಾವನ್ನಪ್ಪಿದ ನತದೃಷ್ಟೆ ಮಂಜುಳಾ(24). ಪ್ರಿಯತಮ ಮಹೇಂದ್ರ ವಿಷವುಣ್ಣಿಸಿ ತಲೆ ಮರೆಸಿಕೊಂಡ ವ್ಯಕ್ತಿ. ಎಲ್ಎಲ್ಬಿ ವ್ಯಾಸಂಗ ಮಾಡುತ್ತಿರುವ ಮಂಜುಳಾ ಮಹೇಂದ್ರನನ್ನು ಪ್ರೀತಿಸುತ್ತಿದ್ದಳು. ಇಬ್ಬರ ಮದುವೆಗೆ ಎರಡೂ ಕುಟುಂಬದ ಹಿರಿಯರು ಹಸಿರು ನಿಶಾನೆ ನೀಡಿದ್ದರು. ಇನ್ನೇನು ಮದುವೆಯಾಗುವ ಭರವಸೆ ನಂಬಿಕೆಯೊಂದಿಗೆ ಯುವ ಜೋಡಿ ಪ್ರೀತಿ ಮುಂದುವರಿಯಿತು. ಕೆಲ ದಿನಗಳ ನಂತರ ಮಹೇಂದ್ರ ಆಕೆಯನ್ನು ದೂರ ಮಾಡುವ ಪ್ರಯತ್ನ ಮಾಡಿದ. ಇದರಿಂದ ಕೋಪಗೊಂಡ ಮಂಜುಳಾ ಶೀಘ್ರ ಮದುವೆಗಾಗಿ ಒತ್ತಾಯಿಸಿದಳು. ಮನೆಗೆ ಕರೆಸಿಕೊಂಡ ಮಹೇಂದ್ರ ತಂದೆ ಹಾಗೂ ತಮ್ಮನ ಜೊತೆ ಸೇರಿ ನಯವಾದ ಮಾತನ್ನಾಡಿ ತಂಪು ಪಾನೀಯದಲ್ಲಿ ವಿಷ ಬೆರೆಸಿ ಕುಡಿಸಿದ್ದು ಆಕೆ ಅಸ್ವಸ್ಥಳಾದ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಮಹೇಂದ್ರ ಹಾಗೂ ಕುಟುಂಬದವರು ತಲೆ ಮರೆಸಿಕೊಂಡಿದ್ದು ಮಂಜುಳಾ ತಾಯಿ ಸಿದ್ದಗಂಗಮ್ಮ ಮಗಳ ಸಾವಿಗೆ ಮಹೇಂದ್ರ ಮತ್ತು ಕುಟುಬಂದವರು ಕಾರಣ ಎಂದು ಆರೋಪಿಸಿದ್ದಾರೆ.
ದೂರು ದಾಖಲಿಸಿಕೊಂಡ ಪಿಎಸ್ಸೈ ಶಶಿಧರ್ ಮತ್ತು ತಂಡ ಸಂಜೆ ಮಹೇಂದ್ರ ಮತ್ತು ಆತನ ತಮ್ಮ ಮಧವನ್ನು ಬಂದಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಸಂಶಯಾಸ್ಪದ ಸಾವು
ಆನೇಕಲ್: ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಮಿಥುನ್ರಾಯ್ (23) ಮೃತಪಟ್ಟವ. ಎದೆ ನೋವೆಂದು ಸೆಕ್ಯುರಿಟಿ ಮುಖ್ಯಸ್ಥರಿಗೆ ತಿಳಿಸಿದರೂ ಆಸ್ಪತ್ರೆಗೆ ದಾಖಲಿಸಲಿಲ್ಲ. ಪರಿಸ್ಥಿತಿ ವಿಷಮಕ್ಕೇರಿದ ಮೇಲೆ ಸನಿಹದ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋಗಲಾಯಿತು. ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದ ಎನ್ನಲಾಗಿದೆ. ಈ ಮಧ್ಯೆ ಸೆಕ್ಯುರಿಟಿ ಕಂಪನಿಯವರು ಅಸ್ಸಾಂನಿಂದ ಮಿಥುನ್ ತಂದೆಯನ್ನು ಕರೆಸಿಕೊಂಡು ರು. 15 ಸಾವಿರ ನೀಡಿ ಶವವನ್ನು ಎತ್ತಿಕೊಂಡು ಹೋಗುವಂತೆ ಧಮಕಿ ಹಾಕಿದ್ದಾರೆ ಎನ್ನಲಾಗಿದೆ. ಮಿಥುನ್ ತಂದೆ ಭಾನುರಾಯ್ ವಿಕಲಚೇತನರಾಗಿದ್ದು ಮಗನ ಶವ ದರ್ಶನ ಮಾಡಿಸಲು ಮಾಡಿದ ಮನವಿಗೂ ಸ್ಪಂದಿಸಲಿಲ್ಲ. ಸಮೀಪ ಬಂಧುಗಳು ಹಾಗೂ ಸ್ಥಳೀಯರ ಸಹಕಾರದಿಂದ ಭಾನುರಾಯ ಹೆಬ್ಬಗೋಡಿ ಠಾಣೆಗೆ ದೂರು ನೀಡಿದ್ದು ನ್ಯೂ ಟೌನ್ ಅಪಾರ್ಟ್ ಮೆಂಟ್ ಬಳಿ ರಸ್ತೆ ತಡೆ ನಡೆಸಿ ಧರಣಿ ಮಾಡಲಾಗಿದೆ.
ವಿಕಲಾಂಗನಾದ ನನ್ನ ಜೀವನಕ್ಕೆ ಮಿಥುನ್ ಆಧಾರವಾಗಿದ್ದ. ಸಮಯೋಚಿತ ಚಿಕಿತ್ಸೆ ನೀಡದ ಕಾರಣ ಮೃತಪಟ್ಟಿದ್ದಾನೆ.3 ವರ್ಷಗಳಿಂದ ಇದೇ ಕಂಪನಿಯಲ್ಲಿ ದುಡಿಯುತ್ತಿದ್ದು ನಮ್ಮ ಕುಟುಂಬಕ್ಕೆ ತೀವ್ರ ಅನ್ಯಾಯವಾಗಿದೆ ಎಂದು ದೂರು ನೀಡಿದ್ದಾರೆ. ಪಿಎಸ್ಸೈ ಶಶಿಧರ್ ದೂರು ದಾಖಲಿಸಿಕೊಂಡು ಕ್ರಮವಹಿಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

