ರೇಷ್ಮೆ ಆಮದು ಸುಂಕ ಹೆಚ್ಚಳಕ್ಕೆ ಸಚಿವ ಬಚ್ಚೇಗೌಡ ಅಭಿನಂದನೆ
ಬೆಂಗಳೂರು: ರೇಷ್ಮೆ ಆಮದು ಸುಂಕವನ್ನು ಶೇ.5ರಿಂದ 15ಕ್ಕೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯದ ರೇಷ್ಮೆ ಮತ್ತು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಸ್ವಾಗತಿಸಿದ್ದಾರೆ.
ಆಮದು ಸುಂಕ ಹೆಚ್ಚಿಸಿರುವ ಕೇಂದ್ರದ ಕ್ರಮ ಸ್ವಾಗತಾರ್ಹ. ಇದರಿಂದ ಗೂಡು ಬೆಳೆಯುವ ರೈತರಿಗೆ ಮತ್ತು ನೂಲು ಬಿಚ್ಚಣಿಕೆ ಮಾಡುವ ರೀಲರುಗಳಿಗೆ ಸಂಪೂರ್ಣ ಪರಿಹಾರ ಸಿಗದೇ ಇದ್ದರೂ ಸ್ವಲ್ಪ ಮಟ್ಟಿನ ನೆರವು ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೇಷ್ಮೆ ಆಮದು ಸುಂಕ ಹೆಚ್ಚಿಸುವ ಕೇಂದ್ರ ಸರ್ಕಾರದ ತೀರ್ಮಾನದಿಂದಾಗಿ ರೇಷ್ಮೆ ಗೂಡಿನ ಬೆಲೆ ಹೆಚ್ಚಳವಾಗಲಿದೆ. ನೂಲಿನ ಬೇಡಿಕೆಯೂ ಹೆಚ್ಚಾಗಲಿದ್ದು ರೈತರು ಮತ್ತು ರೀಲರುಗಳಿಗೆ ಸಹಾಯಕವಾಗಲಿದೆ. ಆದ್ದರಿಂದ ರಾಜ್ಯದ ರೇಷ್ಮೆ ಬೆಳೆಗಾರರು, ರೀಲರುಗಳು, ರೇಷ್ಮೆ ಬೆಳಗಾರರ ಸಂಘದ ಮುಖಂಡರು ಹಾಗೂ ಸರ್ಕಾರದ ಪರವಾಗಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಬಚ್ಚೇಗೌಡರು ಕೃತಜ್ಞತೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

