ಬೆಂಗಳೂರು ಗ್ರಾಮಾಂತರ

ಜೆಡಿಎಸ್ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಬೆದರಿಕೆ

Published On :

ಕ.ಪ್ರ. ವಾರ್ತೆ ಟಿ ದೇವನಹಳ್ಳಿ ಟಿ ಮಾ.6
ದೇವನಹಳ್ಳಿ ಪುರಸಭಾ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿಗಳಿಗೆ ಮತಯಾಚನೆ ಮಾಡಲು ಅಡ್ಡಿಪಡಿಸುವುದಲ್ಲದೆ ಬೆದರಿಕೆ ಕರೆಗಳನ್ನು ಮಾಡುತ್ತಿರುವ ಬಗ್ಗೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಡಿ.ಚಂದ್ರಣರವರು ಖಂಡಿಸಿ ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
      ಐದನೇ ವಾರ್ಡಿನ ಉಷಾ ಪೂರ ಚಂದ್ರ ಹಾಗೂ 9 ನೇ ವಾರ್ಡಿನ ಗೋಪಾಲ್ ಇವರು ಜೆಡಿಎಸ್ ಅಭ್ಯರ್ಥಿಗಳಾಗಿ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆಗೂ ಅಡ್ಡಿಪಡಿಸುತ್ತಿರುವುದಲ್ಲದೆ ನಮ್ಮ ಕಾರ್ಯಕರ್ತರಿಗೆ ವಾರ್ಡ್‌ಗಳಲ್ಲಿ ಅಡ್ಡಾಡಲು ಬಿಡುತ್ತಿಲ್ಲ ಎಂದು ಚಂದ್ರಣರವರು ತಿಳಿಸಿ ಚುನಾವಣೆಗಳಲ್ಲಿ ಮುಕ್ತವಾಗಿ ಸ್ಪರ್ಧಿಸುವ ಹಕ್ಕನ್ನು ಸಹ ಬಲಿಷ್ಠ ವ್ಯಕ್ತಿಗಳು ಕಸಿಯಲಾಗುತ್ತಿದೆ ಎಂದು ಆರೋಪಿಸಿದರು, ಒಂದು ವೇಳೆ ಸ್ಪರ್ಧಿಸಿದರೆ ಪ್ರಚಾರಕ್ಕೆ ಅಡ್ಡಿಪಡಿಸುವುದು ಇದು ಚುನಾವಣಾ ವ್ಯವಸ್ಥೆಗೆ ಧಕ್ಕೆಯಾಗಿದೆ. ಇದರ ಬಗ್ಗೆ ಕೇಂದ್ರ ಚುನಾವಣಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು  ಕಾನೂನಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಇದೇ ಸಂದರ್ಭದಲ್ಲಿ ಐದನೇ ವಾರ್ಡಿನ ಅಭ್ಯರ್ಥಿ ಉಷಾ ಪೂರ ಚಂದ್ರ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಯಾವುದೆ ಪಕ್ಷದ ಅಭ್ಯರ್ಥಿ ಸೋಲಬಹುದು ಅಥವ ಗೆಲ್ಲಬಹುದು. ಆದರೆ ಪ್ರಜಾತಂತ್ರ ವ್ಯವಸ್ಥೆಗ ದಕ್ಕೆ ತರುವಂತಹ ಕೆಲಸ ಆಗುತ್ತಿದೆ ಎಂದರಲ್ಲದೆ ತಾವು ಚುನಾವಣೆಗೆ ಸ್ಪರ್ಧಿಸಿದಾಗಿನಿಂದ ನಾಮ ಪತ್ರ ವಾಪಸ್ ಪಡೆಯಲು  ಕಾಂಗ್ರೆಸ್ ಮುಖಂಡರ ಬೆದರಿಕೆಯ ಒತ್ತಾಯ,  ತಮ್ಮ ಪತಿ ಹಾಗೂ ಮಗನಿಗೂ ಸಹ ಸಾರ್ವಜನಿಕ ಫೋನಿನಿಂದ ಬೆದರಿಕೆ ಕರೆಗಳ ಬರುತ್ತಿವೆ ಎಂದರು. ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಚುನಾವಣಾಧಿಕಾರಿಗಳಿಗೆ ದೂರನ್ನು ನೀಡಿರುವುದಾಗಿ ತಿಳಿಸಿದರು.
   ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಹಾಗೂ ಮುಖಂಡ ಬಿ.ಕೆ.ಶಿವಪ್ಪ, ಮುನಿವೆಂಕಟಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.