ಶಾಲೆ ಛಾವಣಿ ಕುಸಿತ: 7 ಮಕ್ಕಳಿಗೆ ಗಾಯ
ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ಬಿದಲೂರು ರಸ್ತೆಯ ನಿಸರ್ಗ ವಿದ್ಯಾನಿಕೇತನ ಶಾಲೆಯ ಛಾವಣಿ ಕುಸಿದು 7 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮಕ್ಕಳ ತಲೆ, ಮೂಗು, ಕೈ ಕಾಲುಗಳಿಗೆ ಹೆಚ್ಚಿನ ಗಾಯಗಳಾಗಿದೆ. ಶಾಲೆಯ ಯು.ಕೆ.ಜಿ ತರಗತಿಯ ಮಕ್ಕಳಾದ ಪೂರ್ವಿಕ್ ಬಿನ್ ಮಂಜುನಾಥ್ ಮುದ್ದಲಿಂಗನಹಳ್ಳಿ, ಕಿಶನ್ ಸುಬ್ರಹ್ಮಣ್ಯ ಬಿನ್ ಕೇಶವಮೂರ್ತಿ ತಾವರೆಕೆರೆ, ಕುಶಾಲ್ ಬಿನ್ ರಮೇಶ್ ಹಸಿರುವಳ್ಳಿ, ಯಶವಂತ್ ಬಿನ್ ಸಿದ್ದಪ್ಪ ಭೈರನಾಯಕನಹಳ್ಳಿ, ತೇಜಸ್ ಬಿನ್ ಶಂಕರ ಲಕ್ಕೇನಹಳ್ಳಿ, ಅಶೋಕ್ಕುಮಾರ್ ಮಗಳಾದ ಲಿಖಿತ ಬಿಲ್ಲಿನಕೋಟೆ, ತುಳಸೀರಾಮ್ ಬಿನ್ ಮುನಿರಾಜು ಬಳಗೆರೆ ಗಾಯಗೊಂಡವರಾಗಿದ್ದಾರೆ. ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ತ್ಯಾಮಗೊಂಡ್ಲು ಪೊಲೀಸ್ ಠಾಣಾಧಿಕಾರಿ ಕೆ.ಸುರೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಶಾಲೆಯು ಈಶ್ವರ್ ಎಂಬವರಿಗೆ ಸೇರಿದ್ದು ಘಟನೆ ನಡೆದಿರುವ ಕಟ್ಟಡ ಮೊದಲ ಮಹಡಿಯಲ್ಲಿದೆ. ಕಟ್ಟಡ ಕಟ್ಟಿ 2 ವರ್ಷವಾಗಿದೆ. ಛಾವಣಿಗೆ ಮಾಡಿದ ಪ್ಲಾಸ್ಟಿಂಗ್ ಕಿತ್ತು ಬಂದಿರುವುದರಿಂದ ಈ ರೀತಿ ಆಗಿದೆ.
ನಗದು ಕಳವು
ಹೊಸಕೋಟೆ: ಪಟ್ಟಣದ ಸಂತೆ ವೃತ್ತದ ಬಳಿ ಕಾರಿನಲ್ಲಿದ್ದ ಸುಮಾರು ರು. 9 ಲಕ್ಷ ದುಷ್ಕರ್ಮಿಗಳು ಅಪಹರಿಸಿದ್ದಾರೆ.
ತಾಲೂಕಿನ ನಂದಗುಡಿ ಹೋಬಳಿಯ ಹೆತ್ತಕ್ಕಿ ಗ್ರಾಮದ ಮುನಿಯಪ್ಪ ಎಂಬುವರು ಪಟ್ಟಣದ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಹಣ ತೆಗೆದುಕೊಂಡು ಗ್ರಾಮಕ್ಕೆ ಹಿಂದಿರುವಾಗ ವಾಹನ ನಿಲುಗಡೆ ಮಾಡಿ ರಸ್ತೆ ಬದಿಯ ಗ್ಯಾರೇಜ್ಗೆ ತೆರಳಿದ್ದರು. ಅಲ್ಲಿಂದ ಹಿಂದಿರುಗುವಷ್ಟರಲ್ಲಿ ಕಾರಿನ ಗಾಜು ಒಡೆದು ಒಳಗಡೆ ಬಾಕ್ಸ್ನಲ್ಲಿದ್ದ ಹಣ ಅಪಹರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮುನಿಯಪ್ಪ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

