ಹೊಸಕೋಟೆ ಪುರಸಭೆ: ಶಾಂತಿಯುತ ಮತದಾನ
ಹೊಸಕೋಟೆ: ಪಟ್ಟಣದ ಪುರಸಭೆಯ 23 ವಾರ್ಡ್ಗಳಲ್ಲಿ ಒಟ್ಟು 30 ಮತ ಕೇಂದ್ರಗಳಲ್ಲಿ ನಡೆದ ಮತದಾನ ಶಾಂತಿಯುತವಾಗಿ ನಡೆಯುತು.
ಒಟ್ಟು 33402 ಮತಗಳಲ್ಲಿ 25651 ಮತ ಚಲಾವಣೆಯಾಗಿದ್ದು, ಶೇ 76.79ರಷ್ಟು ದಾಖಲಾಗಿದೆ. 17030 ಪುರಷರಲ್ಲಿ 13222 (ಶೇ.77.63), 16372 ಮಹಿಳೆಯರಲ್ಲಿ 12429 (ಶೇ.75.91) ಮತ ಚಲಾಯಿಸಿದ್ದಾರೆ. ಅತಿ ಹೆಚ್ಚಿನ ಶೇ 92.55ರಷ್ಟು ಮತದಾನ ವಾರ್ಡ್ ನಂ.12ರ ದೊಡ್ಡ ತಿಗಳರ ಪೇಟೆಯಲ್ಲಿ ನಡೆದಿದೆ.
ಇಲ್ಲಿರುವ 752 ಮತದಾರರಲ್ಲಿ 696 ಮತದಾರರು ಮತ ಚಲಾಯಿಸಿದ್ದಾರೆ. ಅತಿ ಕಡಿಮೆ ಶೇ 60.30ರಷ್ಟು ಮತದಾನ ವಾರ್ಡ್ ನಂ.10 ಗಂಗಮ್ಮ ಗುಡಿ ಮತ್ತು ಗಣಗಲು ರಸ್ತೆ ನಡೆದಿದ್ದು ಇಲ್ಲಿರುವ 2572 ಮತದಾರರಲ್ಲಿ 1552 ಮತದಾರರು ಮತ ಚಲಾಯಿಸಿದ್ದಾರೆ.
ಇದೇ ರೀತಿ ವಾಡ್ ನಂ.1. ಕಿಲಾರಿಪೇಟೆ (ಶೇ.77.34), 2. ಚಿಕ್ಕತಿಗಳರಪೇಟೆ (ಶೇ 88.74), 3. ಕೋಟೆ (ಶೇ.79.38), 4.ತಮ್ಮೇಗೌಡ ಬಡಾವಣೆ (ಶೇ.77.87), 5.ಎನ್ಇಎಸ್ ಕ್ವಾಟ್ರಸ್ (ಶೇ.72.48), 6.ಸರ್ ಎಂ.ವಿ. ಬಡಾವಣೆ (ಶೇ.85.45), 7. ಸರ್ ಎಂ.ವಿ. ಬಡಾವಣೆ (ಶೇ.80.86), 8. ಸರ್ ಎಂ.ವಿ. ಬಡಾವಣೆ (ಶೇ.66.94), 9. ಸರ್ ಎಂ.ವಿ. ಬಡಾವಣೆ (68.07), 10. ಸರ್ ಎಂ.ವಿ. ಬಡಾವಣೆ (ಶೇ 60.30), 11. ಬೆಸ್ತರಪೇಟೆ (ಶೇ.85.62), 12. ದೊಡ್ಡ ತಿಗಳಪೇಟೆ (ಶೇ.92.55), 13. ನಾಲಾಗಲ್ಲಿ, ಕಮ್ಮವಾರಿಪೇಟೆ (ಶೇ 87.25), 14. ದರ್ಜಿಪೇಟೆ, ಕುಂಬಾರಪೇಟೆ (ಶೇ.75.32), 15. ಅರಳೇಪೇಟೆ, ಕುರುಬರಪೇಟೆ (ಶೇ. 75.55), 16. ಕುರುಬರಪೇಟೆ (ಶೇ.73.55), 17. ಫಕೀರ್ವಾಡ ರಜಪೂತರಪೇಟೆ (ಶೇ 85.85), 18. ಷರಾಬ್ ಮುನಿಶಾಮಯ್ಯ ಬಡಾವಣೆ (ಶೇ 83.30), 19.ಗೌತಮ್ ಕಾಲೋನಿ (ಶೇ.87.81), 20. ಎ.ಆರ್.ಬಡಾವಣೆ (ಶೇ.67.93), 21. ಅಂಬೇಡ್ಕರ್ ಕಾಲೋನಿ (ಶೇ.79.45), 22. ಖಾಜಿ ಮೊಹಲ್ಲಾ, ವರದಾಪುರ (ಶೇ.77.18), 23. ದಂಡುಪಾಳ್ಯ, ಸಿದ್ದಾರ್ಥ್ ನಗರ (ಶೇ 87.80) ಮತದಾನ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

