ಬೆಂಗಳೂರು ಗ್ರಾಮಾಂತರ

ನೆಲಮಂಗಲದಲ್ಲಿ ಜೆಡಿಎಸ್ ಬಹುಮತ ನಗೆ

Published On :

ಕನ್ನಡಪ್ರಭವಾರ್ತೆ೤ ನೆಲಮಂಗಲ೤ ಮಾ.11
ಪಟ್ಟಣದ ಪುರಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನಿಚ್ಚಳ ಬಹುಮತ ಪಡೆಯುವುದರೊಂದಿಗೆ ಅಧಿಕಾರ ಗದ್ದುಗೆ ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ 6 ಸ್ಥಾನ ಮತ್ತು ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದ್ದು ಒಂದು ಸ್ಥಾನದಲ್ಲಿ ಗೆಲವು ಸಾಧಿಸಿದೆ.ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಒಟ್ಟು 23 ವಾರ್ಡ್‌ಗಳಿಂದ 129 ಅಭ್ಯರ್ಥಿಗಳು ನಾಮ ಪತ್ರಗಳನ್ನು ಸಲ್ಲಿಸಿ ಮಿನಿ ಚುನಾವಣಾ ಸಮರ ಸಾರಿದ್ದರು. ಗೆಲುವಿನ ನಗೆ ಬೀರಿದವರು ಹಾಗೂ ಸಮೀಪ ಸ್ಪರ್ಧಿಗಳ ವಿವರ ಇಂತಿದೆ.
ವಾರ್ಡ್ ನಂ.1- ಜೂನಿಯರ್ ಕಾಲೇಜು ರಸ್ತೆ ಹಿಂದುಳಿದ ವರ್ಗ(ಎ), ಬಿಜೆಪಿಯ ಸಿ. ಕೇಶವಮೂರ್ತಿ(244), ಸಮೀಪ ಸ್ಪರ್ಧಿ ಜೆಡಿಎಸ್ ಸುರೇಶ್ (170).
ವಾರ್ಡ್ ನಂ.2- ರಾಯನ್‌ನಗರ(ಪ.ಜಾತಿ ಮೀಸಲು), ಜೆಡಿಎಸ್ ನರಸಿಂಹಮೂರ್ತಿ(621), ಸಮೀಪ ಸ್ಪರ್ಧಿ  ಕಾಂಗ್ರೆಸ್ ಗಂಗರಾಜು 393.
ವಾರ್ಡ್ ನಂ.3- ರುದ್ರೇಶ್ವರ ದೇವಾಲಯದ ರಸ್ತೆ (ಹಿ.ವರ್ಗ(ಎ) ಮಹಿಳೆ ಮೀಸಲು), ಕಾಂಗ್ರೆಸ್ ರಫಿಯಾ( 174), ಸಮೀಪ ಸ್ಪರ್ಧಿ ಜೆ.ಡಿ.ಎಸ್ ಆಯಿಷಾ ತರನಂ 128.
ವಾರ್ಡ್ ನಂ.4- ಜಯನಗರ (ಪ.ಜಾತಿ ಮಹಿಳೆ ಮೀಸಲು), ಕಾಂಗ್ರೆಸ್ ಸರಸ್ವತಿ. ಹೆಚ್.ವಿ (381), ಸಮೀಪ ಸ್ಪರ್ಧಿ ಪಕ್ಷೇತರ ಎಸ್.ಸರಸ್ವತಮ್ಮ 197.
ವಾರ್ಡ್ ನಂ.5- ಜಯದೇವ ಹಾಸ್ಟೆಲ್ ರಸ್ತೆ (ಪ.ಜಾತಿ ಮೀಸಲು), ಜೆಡಿಎಸ್ ಪ್ರಸನ್ನಕುಮಾರ್.ವಿ.ಆರ್ (433), ಸಮೀಪ ಸ್ಪರ್ಧಿ ಕಾಂಗ್ರೆಸ್ ಮಂಜುನಾಥ್.ಜಿ. 192.
ವಾರ್ಡ್ ನಂ.6- ಕೋಟೆಬೀದಿ (ಹಿಂದುಳಿದ ವರ್ಗ(ಬಿ) ಮೀಸಲು), ಜೆಡಿಎಸ್ ಹೆಚ್.ಜಿ.ರಾಜು(202), ಸಮೀಪದ ಸ್ಪರ್ಧಿ ಕಾಂಗ್ರೆಸ್ ಹನುಮಂತರಾಜು 198.
ವಾರ್ಡ್ ನಂ.7- ದೇವಾಂಗ ಬೀದಿ(ಸಾಮಾನ್ಯ ಮೀಸಲು), ಜೆ.ಡಿ.ಎಸ್ ಎ.ಪಿಳ್ಳಪ್ಪ( 476 ), ಸಮೀಪ ಸ್ಪರ್ಧಿ ಕಾಂಗ್ರೇಸ್ ರಂಗನಾಥ್ 133.
ವಾರ್ಡ್ ನಂ.8- ಹಳೇ ಎಸ್.ಬಿ.ಎಂ.ರಸ್ತೆ (ಪ.ಪಂಗಡ ಮಹಿಳೆ ಮೀಸಲು), ಜೆ.ಡಿ.ಎಸ್ ಆಶಾ ನಾಗರಾಜು( 407), ಸಮೀಪ ಸ್ಪರ್ಧಿ ಕಾಂಗ್ರೆಸ್ ಸುಧಾ 125.
ವಾರ್ಡ್ ನಂ.9- ಕುರುಬರ ಬೀದಿ (ಸಾಮಾನ್ಯ), ಕಾಂಗ್ರೆಸ್ ಗಂಗಾಧರ್‌ರಾವ್.ಎನ್.ಎಸ್(298), ಸಮೀಪ ಸ್ಪರ್ಧಿ ಜೆ.ಡಿ.ಎಸ್. ಎನ್.ರಾಜಶೇಖರ್ (224).
ವಾರ್ಡ್ ನಂ.10- ಚನ್ನಕೇಶವಸ್ವಾಮಿ ಗುಡಿ ಬೀದಿ (ಸಾಮಾನ್ಯ), ಜೆ.ಡಿ.ಎಸ್ ಗಣೇಶ್.ಎಸ್(480), ಸಮೀಪ ಸ್ಪರ್ಧಿ ಕಾಂಗ್ರೆಸ್ ಪುರುಷೋತ್ತಮ 153.
ವಾರ್ಡ್ ನಂ.11- ಮಹಾರಾಷ್ಟ್ರಬೀದಿ (ಸಾಮಾನ್ಯ ಮಹಿಳೆ ಮೀಸಲು), ಕಾಂಗ್ರೆಸ್ ರಾಧಾಬಾಯಿ(330), ಸಮೀಪ ಸ್ಪರ್ಧಿ ಜೆ.ಡಿ.ಎಸ್ ಜಯಮ್ಮ 318.
ವಾರ್ಡ್ ನಂ.12- ಹಿಪ್ಪೆ ಆಂಜನೇಯಸ್ವಾಮಿ ಲೇಔಟ್ (ಸಾ.ಮಹಿಳೆ ಮೀಸಲು) ಹೆಚ್.ಸರೋಜಮ್ಮ 562, ಸಮೀಪ ಸ್ಪರ್ಧಿ ಜೆ.ಡಿ.ಎಸ್ ಪುಷ್ಪಲತಾ 308.
ವಾರ್ಡ್ ನಂ.13- ಎಂ.ಜಿ.ರಸ್ತೆ ಸುಭಾಷ್‌ನಗರ (ಸಾ.ಮ. ಮೀಸಲು) ಜೆಡಿಎಸ್ ಪಿ.ಮಂಜುಳಾ ಗೋಪಾಲ್462, ಸಮೀಪ ಸ್ಪರ್ಧಿ ಕಾಂಗ್ರೆಸ್ ರೇಣುಕಾದೇವಿ.ಕೆ.ಎ 315.
ವಾರ್ಡ್ ನಂ.14-  ಚನ್ನಪ್ಪ ಬಡಾವಣೆ (ಹಿ.ವರ್ಗ(ಎ)ಮಹಿಳೆ ಮೀಸಲು) , ಜೆ.ಡಿ.ಎಸ್ ನಂದಿನಿ ಮಂಜುನಾಥ.ಕೆ 475, ಸಮೀಪ ಸ್ಪರ್ಧಿ  ಕಾಂಗ್ರೇಸ್  ನಂದಿನಿ ಮುರುಳಿ 348.
ವಾರ್ಡ್ ನಂ.15- ಬ್ಯಾಂಕ್ ಕಾಲೋನಿ(ಹಿಂ.ವರ್ಗ(ಎ) ಮೀಸಲು), ಜೆ.ಡಿ.ಎಸ್ ಆಂಜಿನಪ್ಪ 297 , ಸಮೀಪ ಸ್ಪರ್ಧಿ  ಬಿ.ಜೆ.ಪಿ ಚಂದ್ರಶೆಟ್ಟಿ 123.
ವಾರ್ಡ್ ನಂ.16- ವೀವರ್ಸ್ ಕಾಲೋನಿ(ಸಾಮಾನ್ಯ)  ಜೆ.ಡಿ.ಎಸ್ ಎಂ.ನಾರಾಯಣ್ 808, ಸಮೀಪ ಸ್ಪರ್ಧಿ  ಬಿ.ಜೆ.ಪಿ ಎನ್.ಆರ್.ನಾಗೇಂದ್ರ 383.
ವಾರ್ಡ್ ನಂ.17- ಮುನಿಸಿಪಲ್ ವಸತಿಗೃಹ(ಸಾಮಾನ್ಯ) ಜೆ.ಡಿ.ಎಸ್ ಶಿವಕುಮಾರ್.ಕೆ.ಎಂ. 614 , ಸಮೀಪ ಸ್ಪರ್ಧಿ  ಕಾಂಗ್ರೆಸ್ ಗಣೇಶ್ 255.
ವಾರ್ಡ್ ನಂ.18- ಗಣೇಶ್‌ರಾವ್ ಲೇಔಟ್ (ಹಿಂ.ವರ್ಗ(ಎ) ಮೀಸಲು)  ಕಾಂಗ್ರೆಸ್ ಶಿವಕುಮಾರ್ 265 ,ಸಮೀಪ ಸ್ಪರ್ಧಿ  ಜೆ.ಡಿ.ಎಸ್ ಗುರುರಾಜು 253.
ವಾರ್ಡ್ ನಂ.19- ಗೋವಿಂದಪ್ಪ ಬಡಾವಣೆ (ಸಾ.) ಜೆಡಿಎಸ್ ಡಿ.ಸೀತಾರಾಮು 682, ಸಮೀಪಸ್ಪರ್ಧಿ ಕಾಂ. ಜಿ.ಕುಮಾರಸ್ವಾಮಿ 400.
ವಾರ್ಡ್ ನಂ.20-  ಪರಮಣ್ಣ ಬಡಾವಣೆ (ಸಾಮಾನ್ಯ) ಜೆ.ಡಿ.ಎಸ್ ಹೇಮಂತ್‌ಕುಮಾರ್ 626 , ಸಮೀಪ ಸ್ಪರ್ಧಿ  ಕಾಂಗ್ರೆಸ್ ಆರ್.ಉಮಾಶಂಕರ್ 291.
ವಾರ್ಡ್ ನಂ.21- ವಿಜಯನಗರ (ಸಾಮಾನ್ಯ ಮಹಿಳೆ ಮೀಸಲು) ಜೆ.ಡಿ.ಎಸ್ ಸುಜಾತ 494, ಸಮೀಪ ಸ್ಪರ್ಧಿ  ಬಿ.ಜೆ.ಪಿ ಅನುಸೂಯ 308.
ವಾರ್ಡ್ ನಂ.22- ಇಂದಿರಾನಗರ (ಹಿಂ.ವರ್ಗ(ಎ) ಮೀಸಲು)  ಜೆ.ಡಿ.ಎಸ್ ಅರುಣ್‌ಕುಮಾರ್ 511, ಸಮೀಪ ಸ್ಪರ್ಧಿ  ಕಾಂಗ್ರೆಸ್ ಗೋವಿಂದರಾಜು 304.
ವಾರ್ಡ್ ನಂ.23- ಉದ್ಭವ ಗಣಪತಿ ದೇವಾಲಯ ರಸ್ತೆ (ಹಿಂ.ವರ್ಗ(ಬಿ) ಮಹಿಳೆ ಮೀಸಲು) , ಜೆ.ಡಿ.ಎಸ್ ಪುಷ್ಪಲತಾ 651, ಸಮೀಪ ಸ್ಪರ್ಧಿ ಕಾಂಗ್ರೆಸ್ ರಾಜಮ್ಮ 107.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.