ಬೆಂಗಳೂರು ಗ್ರಾಮಾಂತರ

ಮತ್ತೆ ಸಾಬೀತಾದ ಕನ್ನಡದ ಧೀಶಕ್ತಿ

Published On :

ದೊಡ್ಡಬಳ್ಳಾಪುರ,ಮಾ.11
ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಕನ್ನಡಪಕ್ಷ ಪುರಸಭೆ-ನಗರಸಭೆಗಳಲ್ಲಿ ಖಾತೆ ತೆರೆದದ್ದು ದೊಡ್ಡಬಳ್ಳಾಪುರದಲ್ಲಿ. ಅದೂ 1980ರ ದಶಕದಲ್ಲಿ. ಡಾ.ವೆಂಕಟರೆಡ್ಡಿ ಮತ್ತು ತ.ನ.ಪ್ರಭುದೇವ ಅವರ ನಾಯಕತ್ವದಲ್ಲಿ ಮೂಡಿಬಂದಿದ್ದ ಹೋರಾಟದ ಅಖಂಡ ಧೀಶಕ್ತಿ ಇಂದಿಗೂ ತಕ್ಕ ಮಟ್ಟಿಗೆ ಉಳಿದುಕೊಂಡು ಬಂದಿದೆ ಎಂಬುದಕ್ಕೆ ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಕನ್ನಡಪಕ್ಷ ಮತ್ತೆ 2 ಸ್ಥಾನಗಳನ್ನು ಗೆದ್ದಿರುವುದೇ ಸಾಕ್ಷಿ.
ಪಕ್ಷ ಸ್ಪರ್ಧಿಸಿದ್ದು ಕೇವಲ 3 ವಾರ್ಡುಗಳಲ್ಲಿ. ಅದರಲ್ಲಿ 2 ಗೆಲವು, ಮತ್ತೊಂದರಲ್ಲಿ ತೀವ್ರ ಪೈಪೋಟಿಯ ಸೋಲು. ಇತ್ತೀಚೆಗೆ ನಿಧನರಾದ ರೈತ-ಕನ್ನಡಪರ ಹೋರಾಟಗಾರ ಡಾ.ಎನ್.ವೆಂಕಟರೆಡ್ಡಿ ಅವರ ಆಶಯಗಳಿಗೆ ಪೂರಕವಾಗಿ ಹೋರಾಟಗಳನ್ನು ರೂಪಿಸುತ್ತಲೇ ಜೀವಂತಿಕೆ ಉಳಿಸಿಕೊಂಡಿರುವ ಕನ್ನಡಪಕ್ಷ ಕಳೆದ ನಗರಸಭೆ ಚುನಾವಣೆಯಲ್ಲೂ 2 ಸ್ಥಾನಗಳನ್ನು ಹೊಂದಿತ್ತು.
ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಮತ್ತು ಚಾಮರಾಜನಗರ ನಗರಸಭೆಗಳಲ್ಲಿ ಮಾತ್ರ ಕನ್ನಡಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಕನ್ನಡಪಕ್ಷದಿಂದ 8ನೇ ವಾರ್ಡ್‌ನ ಸೌಭಾಗ್ಯ ಸಂಜೀವನಾಯಕ್, 13ನೇ ವಾರ್ಡ್‌ನ ಎನ್.ಮಂಜುಳಾ ಆಂಜನೇಯ ಗೆಲವು ಸಾಧಿಸಿದ್ದು, ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ನೊಂದವರ, ಶೋಷಿತರ ಮತ್ತು ಈ ನೆಲದ ಬದುಕಿನ ಸಂವೇದನೆಗೆ ಪೂರಕವಾಗಿ ನಗರಸಭೆಯ ಮೂಲಕ ಕೆಲಸ ಮಾಡುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.