ಜೆಡಿಎಸ್ ಸೋಲಿಗೆ ನಾನೇ ಹೊಣೆ: ಬಾಲಕೃಷ್ಣ
ಕನ್ನಡಪ್ರಭ ವಾರ್ತೆ ್ಣ ಮಾಗಡಿ ್ಣ ಮಾ.12
ಈ ಬಾರಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಹಿನ್ನೆಡೆಯಾಗಿದೆ. ಇದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಪ್ಪು ಒಪ್ಪಿಕೊಂಡಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಜೆಡಿಎಸ್ಗೆ 20 ಸ್ಥಾನ ದೊರೆತಿತ್ತು. ಈ ಬಾರಿ ಮತದಾರರು ಜೆಡಿಎಸ್ ವಿರುದ್ಧ ತೀರ್ಪು ನೀಡಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸೂಚಿಸಿದ್ದಾರೆ ಅವರ ತೀರ್ಪಿಗೆ ನಾವೆಲ್ಲರೂ ತಲೆ ಬಾಗುತ್ತೇವೆ ಎಂದರು. ಎಲ್ಲೊ ಒಂದೆಡೆ ನಾವು ಜನರ ಭಾವನೆಗೆ ಸ್ಪಂದಿಸಿಲ್ಲ ಎಂಬ ನೋವಿದೆ. ಜೊತೆಗೆ ಪುರಸಭೆಯಲ್ಲಿ ಆಡಳಿತ ನಡೆಸಿದ ಸದಸ್ಯರು ಸಹ ಮುಂದಿನ ದಿನಗಳಲ್ಲಿ ನಮಗೆ ವೀಸಲಾತಿ ಸಿಗುವುದಿಲ್ಲ ಎಂಬ ಬೇಜವ್ದಾರಿಯೂ ಇರಬಹುದು, ಕಳೆದ ಮೀಸಲಾತಿಯೇ ಪುನರಾವರ್ತನೆಯಿಂದ ಜೆಡಿಎಸ್ ಹಿನ್ನೆಡೆಯೂ ಕಾರಣವಾಗಿರಬಹುದು ಎಂಬ ವಿಚಾರವನ್ನು ಶಾಸಕರು ಅವಲೋಕಿಸಿದರು.
ಸಮರ್ಪಕ ಕೆಲಸದ ತೃಪ್ತಿ ಇದೆ: ಒಳಚರಂಡಿ ಕಾಮಗಾರಿಯಿಂದ ಪಟ್ಟಣದ ರಸ್ತೆಗಳನ್ನು ಸಮರ್ಪಕವಾಗಿ ಅಭಿವೃದ್ಧಿ ಪಡಿಸಲಾಗಲಿಲ್ಲ, ಆದರೂ ವಿರೋಧ ಪಕ್ಷದ ಶಾಸಕನಾಗಿ ಕ್ಷೇತ್ರದ ಮುಖ್ಯ ರಸ್ತೆಗಳು ಸಮರ್ಪಕವಾಗಿ ಅಭಿವೃದ್ಧಿಯಾಗಿದೆ ಎಂಬ ತೃಪ್ತಿಯಿದೆ ಎಂದರು.
ಮತದಾರರು ಈ ಬಾರಿ ಜೆಡಿಎಸ್ಗೆ 8 ಸ್ಥಾನ ನೀಡಿದ್ದಾರೆ.ಪುರಜನರ ತೀರ್ಪಿಗೆ ನಾನು ತಲೆ ಬಾಗುತ್ತೇನೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಶೇ.80ರಷ್ಟು ಮತದಾರರಿದ್ದು, ಅವರ ಮನೋಭಾವ ಬೇರೆಯಾಗಿರುತ್ತದೆ ಎಂದು ಶಾಸಕ ಬಾಲಕೃಷ್ಣ ವಿವರಿಸಿದರು. ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಗುರುಸ್ವಾಮಿ, ನಾಗೇಂದ್ರ, ಬಸವರಾಜು, ಅರುಣ ಬಸವರಾಜು,ರೂಪೇಶ್ ಕುಮಾರ್, ಎಂ.ಆರ್. ಮಂಜುನಾಥ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

