ಧಾರ್ಮಿಕ ಸಮಾರಂಭದಲ್ಲಿ ರಾಜಕೀಯ ಬೆರೆಸಬೇಡಿ
ಕ.ಪ. ವಾರ್ತೆ ಚಿಕ್ಕನಾಯಕನಹಳ್ಳಿ ಮಾ 14
ಧಾರ್ಮಿಕ ಸಮಾರಂಭದಲ್ಲಿ ರಾಜಕೀಯ ಭಾಷಣ ಮಾಡುವುದನ್ನು ಬಿಜೆಪಿ ಮಾಜಿ ಅಧ್ಯಕ್ಷ ಸಿ.ಎಸ್.ರಾಜಣ್ಣ ವಿರೋಧಿಸಿದರು.
ಮಾ.12ರಂದು ಪಟ್ಟಣದ ಅರಕ್ಷಕ ಠಾಣೆಯಲ್ಲಿ ತಾತಯ್ಯನ ಉರುಸ್ ಪ್ರಯುಕ್ತ ಕರೆದಿದ್ದ ಶಾಂತಿಸಭೆಯಲ್ಲಿ ಮಾತನಾಡುತ್ತಿದ್ದ ಅವರು, ತಾತಯ್ಯನ ಉರುಸ್ ಎಲ್ಲಾ ಧರ್ಮದ ಮತ್ತು ಎಲ್ಲಾ ಜಾತಿಯ ಜನ ಸೇರಿ ಮಾಡುವ ಜಾತ್ರೆ. ಅದೊಂದು ಜಾತ್ಯತೀತವಾದ ಕಾರ್ಯಕ್ರಮ. ಅಂತಹ ಕಾರ್ಯಕ್ರಮದಲ್ಲಿ ಕೇವಲ ಒಂದು ಧರ್ಮದವರನ್ನುದ್ದೇಶಿಸಿ ಧಾರ್ಮಿಕ ಭಾವನೆ ಕೆರಳುವಂತಹ ಮತ್ತು ರಾಜಕೀಯ ಪ್ರೇರಿತ ಮಾತುಗಳು ಅನಾವಶ್ಯಕ. ಅಂತಹವರನ್ನು ಕಾರ್ಯಕ್ರಮಕ್ಕೆ ಕರೆಸದಂತೆ ತಾತಯ್ಯನವರ ಉರುಸ್ ಕಮಿಟಿಯವರಿಗೆ ಮನವರಿಕೆ ಮಾಡಿ ಎಂದು ಇಲಾಖೆಯ ಮುಖ್ಯಸ್ಥರಿಗೆ ತಿಳಿಸಿದರು.
ನಂತರ ಮಾತನಾಡಿದ ಕನ್ನಡ ಸಂಘದ ಕಾರ್ಯದರ್ಶಿ ಸಿ.ಬಿ. ರೇಣುಕಸ್ವಾಮಿ,ಇಲ್ಲಿ ಎಂದೂ ಸಹ ಕೋಮುಭಾವನೆ ಕೆರಳುವಂತಹ ವಾತಾವರಣ ನಿರ್ಮಾಣವಾಗಿಲ್ಲ. ಮುಂದೆ ಆಗುವುದು ಬೇಡ. ಬರೀ ಪೊಲೀಸ್ ಇಲಾಖೆಯಿಂದಷ್ಟೇ ಶಾಂತಿ ಕಾಪಾಡಲು ಸಾಧ್ಯವಿಲ್ಲ, ಸಾರ್ವಜನಿಕರು ಸಹಕರಿಸಬೇಕು ಎಂದು ನುಡಿದರು.
ಸಮರ್ಥನೀಯವಲ್ಲ: ಜಿಲ್ಲಾ ವಿಶ್ವಹಿಂದು ಪರಿಷತ್ ಪ್ರಧಾನ ಕಾರ್ಯದರ್ಶಿ ಮಾತನಾಡಿ ಹಿಂದಿನಿಂದಲು ತಾತಾಯ್ಯನ ಮಠ ಹಿಂದು ಮುಸ್ಲಿಂ ಐಕ್ಯತೆಯ ಸಂಕೇತವಾಗಿತ್ತು.ಆದರೆ ಇತ್ತೀಚೆಗೆ ಅದನ್ನು ಒಂದು ಕೋಮಿನ ಆಸ್ತಿಯನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಮುಂಚೆ ಜಾತ್ರಾಸಮಯದಲ್ಲಿ ಹಸಿರು ಮತ್ತು ಕೇಸರಿ ಧ್ವಜಗಳನ್ನು ಸಮಾನಾಂತರವಾಗಿ ಹಾಕುತ್ತಿದ್ದರು. ಆದರೆ ಇತ್ತೀಚೆಗೆ ಕೇವಲ ಒಂದೇ ಧರ್ಮದ ಸಂಕೇತವಾದ ಹಸಿರು ಧ್ವಜಗಳನ್ನು ಮಾತ್ರ ಹಾಕುತ್ತಿದ್ದಾರೆ.ಇದು ಸಮರ್ಥನೀಯವಲ್ಲ ಎಂದು ವಿರೋಧಿಸಿದರು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಮಾತನಾಡಿ ಜಾತ್ರೆ ಸಂದರ್ಭವನ್ನು ಬಳಸಿಕೊಂಡು ಹೆಂಗಸರ ಒಡವೆಗಳ್ನು ಕದಿಯುವ ಸಂದರ್ಭಗಳು ಹೆಚ್ಚು. ಅದರ ಬಗ್ಗೆ ಇಲಾಖೆ ಮಹಿಳಾ ಪೇದೆಗಳನ್ನು ಹೆಚ್ಚಾಗಿ ನಿಯೋಜಿಸಿ ಕಳ್ಳತನಗಳಾಗದಂತೆ ಎಚ್ಚರಿಕೆ ವಹಿಸಬೇಕು. ಹಾಗೂ ಜಾತ್ರೆ ಸಂದರ್ಭದಲ್ಲಿ ಗೋಮಾಂಸದ ಹೊಟೇಲ್ಗಳನ್ನು ತೆರೆಯದಂತೆ ನಿಬಂರ್ದ ವಿಧಿಸಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉರುಸ್ ಕಮಿಟಿ ಅಧ್ಯಕ್ಷ ಸಿ.ಎಂ. ರಂಗಸ್ವಾಮಿ ಮಾತನಾಡಿ ಯಾವುದೇ ಸಂದರ್ಭದಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಕಾರ್ಯಕ್ರಮವನ್ನು ನಡೆಸುತ್ತೇವೆ. ಈ ಬಗ್ಗೆ ಯಾರ ಮನಸ್ಸಿನಲ್ಲಿ ಸಂದೇಹ ಬೇಡ. ಇದು ನಮ್ಮ ಊರಿನ ಜಾತ್ರೆ, ನಾವೆಲ್ಲಾ ಒಟ್ಟಾಗಿ ಅಣ್ಣ ತಮ್ಮಂದಿರಂತೆ ಬೆರೆತು ಕಾರ್ಯಕ್ರಮ ಮಾಡುವ ಎಂದರು. ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಕೆ.ಪ್ರಭಾಕರ್ ಮತ್ತು ಪಿಎಸ್ಐ ಗೋವಿಂದರಾಜು ಸಭೆಯಲ್ಲಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಪುರಸಭಾ ಸದಸ್ಯ ಎಚ್.ಬಿ.ಪ್ರಕಾಶ್, ಸಿ.ಪಿ.ಮಹೇಶ್, ಮಹಮದ್ ಖಲಂದರ್, ಮಹಮದ್ ಘನಿಸಾಬ್, ಮಾಜಿ ಪುರಸಭಾ ಸದಸ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ಕೃಷ್ಣೇಗೌಡ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

