ಬೆಂಗಳೂರು ಗ್ರಾಮಾಂತರ

ಸೂಲಿಬೆಲೆ ಗ್ರಾಪಂಗೆ ಕೇರಳ ಅಧಿಕಾರಿಗಳ ಭೇಟಿ

Published On :

ಕ.ಪ್ರ.ವಾರ್ತೆ   ಸೂಲಿಬೆಲೆ   ಮಾ. 16
ಇಲ್ಲಿನ ಗ್ರಾಪಂಗೆ ಶನಿವಾರ ಕೇರಳ ರಾಜ್ಯದ ಅಧಿಕಾರಿಗಳ ತಂಡವೊಂದು ಸೂಲಿಬೆಲೆ ಗ್ರಾಪಂಗೆ ಭೇಟಿ ನೀಡಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಧಿಸಿರುವ ಪ್ರಗತಿಯನ್ನು ಪರಿಶೀಲನೆ ಮಾಡಿದರು.
ಈ ವೇಳೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಸಮರ್ಪಕವಾಗಿ ಬಳಿಸಿಕೊಂಡು ಸಾಧಿಸಿರುವ ಅಭಿವೃದ್ಧಿಯಿಂದ ಪುಳಕಿತರಾಗಿ ಕೇರಳದಲ್ಲಿ ಇಂಥ ಪ್ರಗತಿಗೆ ಪ್ರಯತ್ನಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಕೇರಳದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸುಮಾರು 25 ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಪಂ ಉದ್ಯೋಗ ಖಾತರಿ ಯೋಜನೆಯನ್ನು ಬಳಿಸಿಕೊಂಡಿರುವ ಪದ್ಧತಿ, ಜಾಬ್ ಕಾರ್ಡು ವ್ಯವಸ್ಥೆ, ಆನ್‌ಲೈನ್‌ನಲ್ಲಿ ಕೂಲಿಕಾರರಿಗೆ ಬಟವಾಡೆ ಮಾಡುವ ಕೂಲಿ ಹಣ ವ್ಯವಸ್ಥೆಯಿಂದ ಕಳೆದ ಕೆಲ ವರ್ಷಗಳಲ್ಲಿ ಸಾಧಿಸಿದ ಪ್ರಗತಿಯನ್ನು ಗ್ರಾಪಂ ಕಚೇರಿ ಆವರಣದಲ್ಲಿ ಸಾಕ್ಷ್ಯ ಚಿತ್ರದ ಮೂಲಕ ಜಿಪಂ ಉಪಕಾರ್ಯದರ್ಶಿ ಮುನಿರಾಜ್, ಪಿಡಿಒ ನಾಗರಾಜಪ್ಪ ವಿವರಿಸಿದರು.
 ಯೋಜನೆ ಸಾಧಕ ಬಾಧಕಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ ತಂಡ ಗ್ರಾಪಂ ಆವರಣದಲ್ಲಿಯೇ ತ್ಯಾಜ್ಯದಿಂದ ತಯಾರು ಮಾಡುತ್ತಿರುವ ಎರೆಹುಳು ಗೊಬ್ಬರ ಘಟಕವನ್ನು ಪರಿಶೀಲನೆ ಮಾಡಿದರು. ಮಳೆ ನೀರು ಸಂಗ್ರಹ ತೊಟ್ಟಿ, ಕುರುಬರಹಟ್ಟಿಯಲ್ಲಿ ನೇರಗದಿಂದ ಮಾಡಿರುವ ರಾಜು ಕಾಲೂವೆ ಹಾಗೂ ಬೆಂಡಿಗಾನಹಳ್ಳಿಯಲ್ಲಿ ನರೇಗ ಕಾಲುವೆಯಿಂದ ಬರುವ ತ್ಯಾಜ್ಯದ ನೀರನ್ನು ಬಳಿಸಿ ವ್ಯವಸಾಯದಲ್ಲಿ ಸಾಧಿಸಿರುವ ಪ್ರಗತಿ ಬಾಳೆ ತೋಟವನ್ನು ವಿಕ್ಷೇಣಿ ಮಾಡಿದರು.ಇಡೀ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿರುವ ಸೂಲಿಬೆಲೆ ಗ್ರಾಪಂ ಆಡಳಿತ ಮತ್ತು ಗ್ರಾಪಂ ಪಿಡಿಓ ನಾಗರಾಜಪ್ಪ ಮೆಚ್ಚಿಗೆಗೆ ಪಾತ್ರವಾದರು. ಗ್ರಾಪಂ ಅಧ್ಯಕ್ಷ ನಾರಾಯಣಪ್ಪ, ಸಹಾಯಕಾಧಿಕಾರಿ ಮೈಕಲ್ಲಪ್ಪ, ಎಂಜೀನಿಯರ್ ರಾಮಾಂಜಿನಪ್ಪ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.