ಬೆಂಗಳೂರು ಗ್ರಾಮಾಂತರ

13 ಗ್ರಾಮಗಳಿಗೆ ಸುವರ್ಣ ಗ್ರಾಮೋದಯ: ಬಚ್ಚೇಗೌಡ

Published On :

ಕ.ಪ್ರ.ವಾರ್ತೆ ಸೂಲಿಬೆಲೆ ಮಾ.17,
ಹೊಸಕೋಟೆ ತಾ.ನ 13 ಗ್ರಾಮಗಳಿಗೆ ಸುರ್ವಣ ಗ್ರಾಮೋದಯ ಯೋಜನೆ ಅನುಷ್ಠಾನಕ್ಕಾಗಿ ರು.5.33 ಕೋಟಿ ಹಣವನ್ನು ಒದಗಿಸಲಾಗಿದೆ ಎಂದು ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದ್ದಾರೆ.
ಸೂಲಿಬೆಲೆ ಬಳಿಯ ಕಮ್ಮಸಂದ್ರ ಗ್ರಾಮದಲ್ಲಿ  ಸುರ್ವಣ ಗ್ರಾಮೋದಯ ಯೋಜನೆಗೆ ಗುದ್ದಲಿ ಪೂಜೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೈಲುನರಸಾಪುರ ಗ್ರಾಮಕ್ಕೆ ರು.94.08, ನಂದಗುಡಿಗೆ ರು.77.13 ಲಕ್ಷ, ಬೇಗೂರು ಗ್ರಾಮಕ್ಕೆ ರು.30.98 ಲಕ್ಷ,ಕಮ್ಮಸಂದ್ರಕ್ಕೆ ರು.52.53 ಲಕ್ಷ, ಆಲಪ್ಪನಹಳ್ಳಿಗೆ ರು.25.80 ಲಕ್ಷ, ಕುಂಬಳಹಳ್ಳಿಗೆ ರು.71.83 ಲಕ್ಷ, ಮಲ್ಲಸಂದ್ರಕ್ಕೆ ರು.52ಲಕ್ಷ,  ದೊಡ್ಡನಲ್ಲಾಳಕ್ಕೆ ರು.20.15ಲಕ್ಷ, ದೊಡ್ಡದುನ್ನಸಂದ್ರಕ್ಕೆ ರು.39.95ಲಕ್ಷ, ಸಮೇತನಹಳ್ಳಿಗೆ ರು.3013 ಲಕ್ಷ, ಖಾಜಿ ಹೊಸಹಳ್ಳಿಗೆ ರು.23.93 ಲಕ್ಷ, ದೊಡ್ಡನಹಳ್ಳಿಗೆ ರು.1875 ಲಕ್ಷ,ತಿರುವಂಗಕ್ಕೆ ರು.18.28 ಲಕ್ಷ ಅನುಧಾನ ನೀಡಿದ್ದು, ಈ ಗ್ರಾಮಗಳಲ್ಲಿ ಯೋಜನೆಯ ಅಳವಡಿಕೆಯಿಂದ ಮೂಲ ಸೌಕರ್ಯಗಳ ಕೊರತೆ ನೀಗಲಿದೆ.
ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಅನುದಾನಗಳನ್ನು ತಂದು  ಅಭಿವೃದ್ಧಿಪಡಿಸಿದ್ದು,  ಮುಂಬರುವ ಚುನಾವಣಿಯಲ್ಲಿ ಮತ್ತೇ ಆರ್ಶಿವದಿಸಿ ಜನಸೇವೆಗೆ ಅವಕಾಶ ಮಾಡುವಂತೆ ಮನವಿ ಮಾಡಿದರು.
ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶ್‌ಗೌಡ ಮಾತನಾಡಿ,  ಬಚ್ಚೇಗೌಡರು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇಡೀ ಹೊಸಕೋಟೆ ತಾಲೂಕಿನ ಜನತೆ ಅರಿತಿದ್ದಾರೆ.ಕೆಲವರು ಅಭಿವೃದ್ಧಿ ಬಗ್ಗೆ ಸುಳ್ಳು ಬಡಾಯಿ ಕೊಚ್ಚಿಕೊಳ್ಳುತ್ತಿದ್ದು, ಅಭಿವೃದ್ಧಿ ಮೂಲಕ ಬಚ್ಚೇಗೌಡರು ಅವರಿಗೆ ತಿರುಗೇಟು ನೀಡಿರುವುದನ್ನು ಸಹಿಸಲು ಸಾಧ್ಯವಾಗದೆ ವಿನಾಕಾರಣ ಸಚಿವ ಬಗ್ಗೆ ಮಾತನಾಡುತ್ತಾರೆ.
ಇವರಿಗೆ ಚುನಾವಣೆಯಲ್ಲಿಯೇ ಜನತೆ ಪಾಠ ಕಲಿಸ್ತಾರೆ. ಅಭಿವೃದ್ಧಿಯೇ ಬೆಂಡಿಗಾನಹಳ್ಳಿ ಕುಟುಂಬದ ಮುಖ್ಯಧ್ಯೇಯವಾಗಿದೆ ತಾಲೂಕಿನಲ್ಲಿ ಹೊಸ ವಿವಿ ಸ್ಥಾಪನೆ, ಐಟಿಐ ಕಾಲೇಜು,ಪದವಿ ಕಾಲೇಜುಗಳ ಸ್ಥಾಪನೆ,ಏತನೀರಾವರಿ ಯೋಜನೆಗಳನ್ನು ಸಚಿವರು ಅನುಷ್ಠಾನ ಮಾಡಿದ್ದು, ತಾಲೂಕಿಗೆ ಹೊಸ ಆಶಾಕಿರಣವಾಗಿದೆ ಎಂದರು.
ಜಿಪಂ ಸದಸ್ಯೆ ವೆಂಕಟಲಕ್ಷಮ್ಮ, ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಮುನಿಯಪ್ಪ,
ವಸಂತಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.