ಉಂಗುರ ಕಸಿದು ಓಡುತ್ತಿದ್ದವನ ಬಂಧನ
ಚನ್ನಪಟ್ಟಣ: ಮನೆಯಲ್ಲಿ ಮಲಗಿದ್ದ ಯುವತಿಯ ಉಂಗುರ ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಟ್ಟಣದ ರಾಜಾಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ. ಮೂಕಪ್ಪ(35) ಬಂಧಿತ ವ್ಯಕ್ತಿಯಾಗಿದ್ದು, ಹುಬ್ಬಳ್ಳಿ ಮೂಲದವನಾದ ಈತ ಕುಂಬಳಗೂಡಿನಲ್ಲಿ ವಾಸಿಸುತ್ತಿದ್ದಾನೆ. ರಾಜಾಕೆಂಪೇಗೌಡ ಬಡಾವಣೆಯ ರಾಜೇಶ್ ಎಂಬುವರ ಮನೆಗೆಯಲ್ಲಿ ಮಲಗಿದ್ದ ಹುಡುಗಿಯ ಕೈಯಲ್ಲಿದ್ದ ಉಂಗುರವನ್ನು ಕಸಿದು ಪರಾರಿಯಾಗುವಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿ ಕೊಂಡಿರುವ ಪುರ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಚಿನ್ನಾಭರಣ ದೋಚಿ ಪರಾರಿ: ದೂರು
ಚನ್ನಪಟ್ಟಣ ನೀರುಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಮಹಿಳೆಯರಿಬ್ಬರು 35 ಸಾವಿರ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಅಪ್ಪಗೆರೆಯಲ್ಲಿ ಸೋಮುವಾರ ಸಂಜೆ ನಡೆದಿದೆ. ಟೊಯೋಟೋ ನೌಕರ ಹರೀಶ್ ಎಂಬುವರ ಮನೆಗೆ ಹೋಗಿ ಅವರ ಪತ್ನಿಗೆ ನೀರು ಕೊಡುವಂತೆ ಕೇಳಿದ್ದಾರೆ. ಮನೆಯೊಳಗೆ ನೀರು ತರಲು ಹೋಗುತ್ತಿದ್ದಂತೆ ಒಳಗೆ ನುಗ್ಗಿದ್ದ ಕಳ್ಳರು ಮನೆಯೊಡತಿಗೆ ಆಸೀಡ್ ಎರಚುವುದಾಗಿ ಹೆದರಿಸಿ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿಪರಾರಿಯಾಗಿದ್ದರೆ. ಈ ಸಂಬಂಧ ದೂರುದಾಖಲಿಸಿ ಕೊಂಡಿರುವ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

