ಬೆಂಗಳೂರು ಗ್ರಾಮಾಂತರ

'ಸ್ತೋತ್ರ ಪಠಣದಿಂದ ಮಾನಸಿಕ ನೆಮ್ಮದಿ'

Published On :

ನೆಲಮಂಗಲ: ದೇವರ ಸ್ತೋತ್ರ ಪಠಿಸುವುದರಿಂದ ಮಾನವನಿಗೆ ತಗುಲಿರುವ ಅನೇಕ ರೋಗಗಳು ನಿವೃತ್ತಿಯಾಗುತ್ತದೆ ಮಾತ್ರವಲ್ಲ, ಮಾನಸಿಕ ನೆಮ್ಮದಿ ಲಭಿಸಲಿದೆ ಎಂದು ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ ಶಂಕರಭಾರತೀ  ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಪಟ್ಟಣದ ಸುಭಾಷ್‌ನಗರದ ವಿನಾಯಕ ದೇವಸ್ಥಾನದ ಆವರಣದಲ್ಲಿ ವೇದಾಂತ ಭಾರತೀ ಸಂಸ್ಥೆಯು ಹಮ್ಮಿಕೊಂಡಿದ್ದ ಆನಂದ ಸಿಂಧು ಸ್ತೋತ್ರ ಪಠಣ ಮಹಾಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಪಂಚದ ಸಮಸ್ತ ಜನರ ಸಕಲ ಚಟುವಟಿಕೆಗಳ ಕೊನೆಯ ಗುರಿ ಪರಮಾನಂದ ಮಾತ್ರ ಎಂಬುದು ತತ್ವಜ್ಞಾನಿಗಳ ಯುಕ್ತಿ ಮತ್ತು ಅನುಭವಗಳಿಂದ ಕಂಡುಕೊಂಡ ಸತ್ಯ ಎಂದರು. ಪ್ರತಿಯೊಂದು ಮನೆಯಲ್ಲಿ ತಾಯಂದಿರು ತಮ್ಮ ಕುಟುಂಬದ ಸದಸ್ಯರು, ದೇವರ ಸ್ತೋತ್ರಗಳನ್ನು ಪಠಿಸುವುದರಿಂದ ಉತ್ತಮ ಆರೋಗ್ಯ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ನುಡಿದರು.ವೇದಾಂತ ಭಾರತೀ ನಿರ್ದೇಶಕ ಡಾ.ಪಿ.ಸದಾನಂದಮಯ್ಯ, ಅಧ್ಯಕ್ಷೆ ವನಜಾಕ್ಷಿ, ಕಾರ್ಯದರ್ಶಿ ಲಲಿತ ಎನ್.ಸ್ವಾಮಿ, ಜ್ಯೋತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.