ರು. 11 ಕೋಟಿ ಮಂಜೂರು
ಕ.ಪ್ರ.ವಾರ್ತೆ ಆನೇಕಲ್ಲು ಮಾ.21
ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಅವರು ಇಲಾಖೆ ಅನುದಾನ ಶಾಸಕರ ಅನುದಾನ ಹಾಗೂ ಇತರೇ ಮೂಲಗಳಿಂದ ವಣಕನಹಳ್ಳಿಯ ಸರ್ವತೋಮುಖ ಅಭಿವೃದ್ಧಿಗಾಗಿ 11 ಕೋಟಿ ರು.ಗಳನ್ನು ಮಂಜೂರು ಮಾಡುವ ಮೂಲಕ ಕಾಲೊನಿಗೆ ಸಿಮೆಂಟ್ ರಸ್ತೆ, ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಹೈ ಟೆಕ್ ಸ್ಪರ್ಷ ನೀಡಿದ್ದಾರೆ ಎಂದು ಟಿಎಪಿಎಂಎಸ್ ಅಧ್ಯಕ್ಷ ಸೋಮಶೇಖರರೆಡ್ಡಿ ತಿಳಿಸಿದ್ದಾರೆ. ಪಂಚಾಯ್ತಿ ವ್ಯಾಪ್ತಿಯ ಸೋಲೂರು, ತೆಲಗರಹಳ್ಳಿ, ಕೆಂಪುದೊಮ್ಮಸಂದ್ರ, ಕಾಳನಾಯಕನಹಳ್ಳಿ, ಸಿಂಗಸಂದ್ರ, ಚೂಡೇನಹಳ್ಳಿ, ಸುಣವಾರ ಸೇರಿದಂತೆ 10 ಹಳ್ಳಿಗಳ ಕಾಲನಿಗಳು ಆಧುನಿಕ ಸೌಲಭ್ಯಗಳನ್ನು ಹೊಂದಿ ಸ್ವಚ್ಛವಾಗಿದೆ ಎಂದರು. ಮುಂದಿನ ಶೈಕ್ಷ ಣಿಕ ಸಾಲಿಗೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸಮರ್ಪಣೆಯಾಗಲಿದೆ. ಥಳಿ ರಸ್ತೆ ಅಗಲೀಕರಣದಿಂದ ಟ್ರಾಫಿಕ್ಜಾಂ ಕಿರಿಕಿರಿ ತಪ್ಪುತ್ತದೆಂದು ಮುಖಂಡ ತೋಪಯ್ಯ ತಿಳಿಸಿದರು. ತಾಪಂ ಅಧ್ಯಕ್ಷ ರಮೇಶ್ಗೌಡ, ಎಪಿಎಂಸಿ ನಿರ್ದೇಶಕ ಬಿ. ನಾಗರಾಜು, ಗ್ರಾಪಂ ಅಧ್ಯಕ್ಷ ರಘು, ತಾಪಂ ಸದಸ್ಯ
ಓಂಕಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

