ಪೌರಾಣಿಕ ನಾಟಕ ಜೀವನದ ಅವಿಭಾಜ್ಯ ಅಂಗ: ಸ್ವಾಮಿ
ಗಮನ ಸೆಳೆದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ
ಕ.ಪ್ರ. ವಾರ್ತೆ, ಮಾಗಡಿ, ಮಾ.22
ಬಾಲಕರ ಪ್ರಬುದ್ಧ ಅಭಿನಯ ನೋಡಿ, ಹಿರಿಯ ಕಲಾವಿದರು ಮಕ್ಕಳನ್ನು ಅಪ್ಪಿ ಮುದ್ದಾಡಿದರು. ಮಕ್ಕಳ ಪ್ರಬುದ್ಧ ಅಭಿನಯಕ್ಕೆ ಪ್ರೇಕ್ಷಕರು ಚಕಿತಗೊಂಡರು. ಪೌರಾಣಿಕ ನಾಟಕ ಪ್ರದರ್ಶನ ಗುರುವಾರ ರಾತ್ರಿ ಇಲ್ಲಿನ ಮೋಟಗಾನಹಳ್ಳಿ ಶಾಲಾ ಆವರಣದಲ್ಲಿ ಶಾಲಾ ಮಕ್ಕಳಿಂದ ನಡೆದಾಗ ಎಲ್ಲರಿಂದ ಮುಕ್ತಕಂಠದ ಪ್ರಶಂಸೆ ವ್ಯಕ್ತವಾಯಿತು.
ಮೋಟಗಾನಹಳ್ಳಿಯ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕ ಟಿ.ಸಿ. ಬಸವರಾಜು ಅವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಏರ್ಪಟಾಗಿತ್ತು.
ಇದೇ ವೇಳೆ ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಎಲ್.ಎನ್. ಸ್ವಾಮಿ ಮಾತನಾಡಿ, ಪೌರಾಣಿಕ ನಾಟಕಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿಸಬೇಕು. ಈ ನಿಟ್ಟಿನಲ್ಲಿ ಕಲೆಯನ್ನು ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ಥಕಗೊಳಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರಂಗಸ್ವಾಮಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಶ್ರೀರಾಮನ ನ್ಯಾಯ, ಸತ್ಯ, ಧರ್ಮದ ಪರಿಪಾಲನೆ ಸಮಾಜಕ್ಕೆ ಎಂದೆಂದು ಪ್ರಸ್ತುತವಾಗಿದೆ. ಇದು ಶಾಲಾ ಮಕ್ಕಳ ಹಂತದಲ್ಲೇ ಜೃತಿಗೊಂಡಾಗ ಮಕ್ಕಳ ಮನಸ್ಸಿನಲ್ಲೂ ಸತ್ಯ ಪರಿಪಾಲನೆ ಪಕ್ವವಾಗಿ ಬೇರೂರುತ್ತದೆ ಎಂದರು.
ಜಿ.ಪಂ. ಮಾಜಿ ಸದಸ್ಯ ಸಿ.ಆರ್.ಗೌಡ, ಸರಸ್ವತಿ ಚಿಕ್ಕಣ್ಣ, ದೀಪು ಅಂಜನಮೂರ್ತಿ, ಕಾಂತರಾಜು, ರಾಜಣ್ಣ, ನಾಗರಾಜು, ಮೂರ್ತಿ, ಶಂಕರಪ್ಪ, ಶಾಂತಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

