ಕ.ಪ್ರ ವಾರ್ತೆ, ಆನೇಕಲ್, ಮಾ.30
ಬನ್ನೇರುಘಟ್ಟದ ಇತಿಹಾಸ ಪ್ರಸಿಧ್ಧ ಶ್ರೀ ಚಂಪಕಧಾಮ ಸ್ವಾಮಿ ಬ್ರಹ್ಮ ರಥೋತ್ಸವವು ಮಾ.30 ಮಧ್ಯಾಹ್ನ ಅಭಿನಜನ್ಮೂಹೂರ್ತದಲ್ಲಿ ನಡೆಯಲಿದೆ ಎಂದು ಕನ್ವೀನರ್ ಜಯರಾಂ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ಧ್ವಜಾರೋಹಣ ಸಹಿತ ಧಾರ್ಮಿಕ ಕಾರ್ಯಗಳು ಆರಂಭಗೊಂಡಿವೆ. ಶನಿವಾರ ಮೋಹಿನಿ ತಿರುಕುಳೋತ್ಸವ, ಮಂಟಪಪಡಿ, ವೈರಮುಡಿ, ಹಂಸವಾಹನೋತ್ಸವ, ಗರುಡೋತ್ಸವ, ಗಜೇಂದ್ರಮೋಕ್ಷ ಸೇವೆಗಳು ಪರಂಪರಾನುಗತ ನಡೆದಿದೆ.
ಭಾನುವಾರ ಬೆಳಗ್ಗೆ 11.20 ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದ್ದು ಸಂಜೆ ಉಯ್ಯಾಲೋತ್ಸವ, ಧೂಳೋತ್ಸವ, ದೀಪಾರಾಧನೆ, ರಾಜಮುಡಿ ಉತ್ಸವ, ಅನ್ನದಾನ ನಡೆಯಲಿದೆ. ರಾತ್ರಿ ಶ್ರೀ ಚಂಪಕಧಾಮ ಸ್ವಾಮಿ ಸಹಿತ ಗ್ರಾಮದೇವತೆಗಳ ಉತ್ಸವ ನಡೆಯಲಿದೆ ಎಂದು ಅರ್ಚಕ ಶ್ರೀನಿವಾಸಾಚಾರ್ ತಿಳಿಸಿದ್ದಾರೆ.