ಮತಗಟ್ಟೆ ಭದ್ರತೆ ಚಿಂತೆ ಬಿಡಿ ಮತದಾನ ಮಾಡಿ: ಔರಾದ್ಕರ್
ಕ.ಪ್ರ.ವಾರ್ತೆ ಬೆಂಗಳೂರು ಮೇ 3
ಮತದಾನದ ವೇಳೆ ಯಾವುದೇ ಅನಾಹುತ ಸಂಭವಿಸುವುದಿಲ್ಲ. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ನಗರದಲ್ಲಿ ಅಗತ್ಯ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಜನರು ಯಾವುದೇ ಭಯವಿಲ್ಲದೆ ಮತಗಟ್ಟೆಗಳಿಗೆ ಹೋಗಿ ನಿಮ್ಮ ಮತ ಚಲಾಯಿಸಬಹುದು.
ಹೀಗೆಂದು ಭರವಸೆ ನೀಡಿದ್ದು, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್.
ಶುಕ್ರವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾಡನಾಡಿದ ಅವರು, ನಗರದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿದ್ದು, 6450 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆ ಬಳಿ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ, 2 ಕ್ಷೇತ್ರಗಳಿಗೆ ಒಂದು ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ. ಉಳಿದಂತೆ ಆಯುಕ್ತರು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಗಸ್ತಿನಲ್ಲಿರುತ್ತಾರೆ.
ಇವರ ಜೊತೆಗೆ ಸಂಚಾರ ದಳ ಪೊಲೀಸರೂ ಗಸ್ತಿನಲ್ಲಿರುತ್ತಾರೆ. ಇದನ್ನು ಪರಿಶೀಲಿಸಲು ಒಂದು ಕ್ಷೇತ್ರಕ್ಕೆ ಮೂವರು ಪಿಐ ಹಾಗೂ ಎಸಿಪಿ ನಿಯೋಜಿಸಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 256 ಕಡೆ ಸಿಸಿಟಿವಿ ಅಳವಡಿಸಲಾಗಿದೆ.
ಚುನಾವಣಾ ಆಯೋಗದ ವಿಚಕ್ಷಣಾ ದಳದ ಸಿಬ್ಬಂದಿಯೊಂದಿಗೆ ಪೊಲೀಸರು ಸಂಪರ್ಕದಲ್ಲಿರುತ್ತಾರೆ. ಯಾವುದೇ ಅನಾಹುತ ಸಂಭವಿಸಿದಲ್ಲಿ ನಿಯಂತ್ರಣ ಕೊಠಡಿ ಸಂಖ್ಯೆ 100ಕ್ಕೆ/ ಆಯಾ ಠಾಣೆಗೆ/ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಬಹುದು ಎಂದರು.
ಸಿಬ್ಬಂದಿ ನಿಯೋಜನೆ
17 ಸಾವಿರ ಪೊಲೀಸರು
1 ಸಾವಿರ ಸಿವಿಲ್ ಡಿಫೆನ್ಸ್ ವಾರ್ಡನ್
4 ಸಾವಿರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಕೆಎಸ್ಆರ್ಪಿ ತುಕಡಿ
20 ಮಂದಿ ತರಬೇತಿ ನಿರತ ಐಪಿಎಸ್ ಅಧಿಕಾರಿಗಳು
ಮತಗಟ್ಟೆ
6450 ಮತಗಟ್ಟೆ
2300 ಕ್ಕೂ ಅಧಿಕ ಅತಿಸೂಕ್ಷ್ಮ ಮತಗಟ್ಟೆ
2000 ಕ್ಕೂ ಅಧಿಕ ಸೂಕ್ಷ್ಮ ಮತಗಟ್ಟೆ
ಪೊಲೀಸ್ ಕಣ್ಣು
ಟ ಸಾಮಾನ್ಯ ಮತಗಟ್ಟೆಗೆ ಪೊಲೀಸ್ ಪೇದೆ ನೇಮಕ
ಟ ಸೂಕ್ಷ್ಮ ಮತಗಟ್ಟೆಗೆ ಮುಖ್ಯ ಪೊಲೀಸ್ ಪೇದೆ ನೇಮಕ
ಟ ಅತಿಸೂಕ್ಷ್ಮ ಮತಗಟ್ಟೆಗೆ ಮುಖ್ಯಪೇದೆ/ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ನೇಮಕ
ಪ್ರಕರಣಗಳು
ಟ 17, 36 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳ ವಶ
ಟ 1.5 ಕೋಟಿಗೂ ಅಧಿಕ ನಗದು ವಶ
ಟ 214 ವಿವಿಧ ಪ್ರಕರಣ ದಾಖಲು
ಟ 3 ಸಾವಿರಕ್ಕೂ ಹೆಚ್ಚು ರೌಡಿಗಳಿಂದ ಬಾಂಡ್ ಪಡೆದ ಪೊಲೀಸ್
ಟ 154 ಮದ್ಯದ ಬಾಟಲ್ ವಶಕ್ಕೆ ಪಡೆದ ದೂರುಗಳು, 1015 ಲೀ. ಮದ್ಯ ವಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

