ಬೆಂಗಳೂರು ಗ್ರಾಮಾಂತರ

ಶಾಂತಿಯುತ ಮತದಾನಕ್ಕೆ ಸಿದ್ಧತೆ ಪೂರ್ಣ

Published On :

ಮಾಗಡಿ: ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ  ಕ್ಷಣಗಣನೆ ಆರಂಭಗೊಂಡಿದೆ. ಕಳೆದ ತಿಂಗಳಿನಿಂದ  ಚುನಾವಣಾ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಕಸರತ್ತು ಮುಗಿದಿದ್ದು, ಭಾನುವಾರ ಬೆಳಿಗ್ಗೆ 7 ಗಂಟೆಯಿಂದ  ಮತದಾನ ನಡೆಯಲಿದೆ.  ತಾಲೂಕು ಆಡಳಿತ ಈಗಾಗಲೇ ಸಕಲ ಸಿದ್ದತೆಯೊಂದಿಗೆ ಸಜ್ಜಾಗಿದೆ. ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 288 ಮತಗಟ್ಟೆಗಳಿವೆ. ಸಾಮಾನ್ಯ 191, ಸೂಕ್ಷ್ಮ 52,ಅತಿ ಸೂಕ್ಷ್ಮ 45 ಮತಗಟ್ಟೆಗಳಿವೆ.  ಗಂಡು- 1,03,564, ಹೆಣ್ಣು-99,395, ನಪುಂಸಕ-1 ಮತದಾರರಿದ್ದು, ಕ್ಷೇತ್ರದಲ್ಲಿ ಒಟ್ಟು 2,2,960 ಮತದಾರರಿದ್ದಾರೆ. 65 ಮೊಬೈಲ್ ವೀಕ್ಷಕರು, 45 ವಿಡಿಯೋ ಗ್ರಾಫರ್‌ಗಳು ಚುನಾವಣೆ ವೇಳೆ ವಿಡಿಯೋ  ಚಿತ್ರೀಕರಣ ಮಾಡಲಿದ್ದಾರೆ.  
ಭದ್ರತೆ: ವಿಧಾನ ಸಭಾ ಚುನಾವಣೆಗೆ ಈ ಬಾರಿ ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಾಲ್ಕು ತುಕಡಿಗಳಲ್ಲಿ ಕೇಂದ್ರೀಯ ಮೀಸಲು ಪಡೆ, ಸಿ.ಎ.ಎಫ್, ಬಿ.ಎಸ್.ಎಫ್, 6 ಸಿ.ಪಿ.ಐಗಳು, 23 ಪಿ.ಎಸ್.ಐಗಳು, 32 ಎಚ್.ಸಿಗಳು, 92  ಪಿ.ಸಿಗಳು ಹಾಗು 230 ಹೋಂ ಗಾರ್ಡ್‌ಗಳು ಸೇರಿದಂತೆ  25 ಪ್ಯಾರ  ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪಿಸಿಐ ಯು.ಡಿ.ಕೃಷ್ಣಕುಮಾರ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.