ಪೊಲೀಸರ ವಿರುದ್ಧ ಪ್ರತಿಭಟನೆ
ದೇವನಹಳ್ಳಿ: ಚಿಕ್ಕಸಣ್ಮೆ ಗೇಟ್ ಬಳಿ ಭಾನುವಾರ ಸಂಜೆ ಬೈಕ್ಗೆ ಕಾರೊಂದು ಅಪ್ಪಳಿಸಿ ನಂತರ ದಂಪತಿ ಸಾವನ್ನಪ್ಪಿರುವುದಕ್ಕೆ ಮಾನವೀಯತೆ ಇಲ್ಲದ ಸಂಚಾರಿ ಪೊಲೀಸರ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಆಂಬುಲೆನ್ಸ್ ವಾಹನದಲ್ಲಿ ದಂಪತಿ ಶವ ಇಟ್ಟುಕೊಂಡು ತಮ್ಮೇನಹಳ್ಳಿ ಗ್ರಾಮಸ್ಥರು ಹಾಗೂ ಸುವರ್ಣ ಕರ್ನಾಟಕ ವೇದಿಕೆ ಕಾರ್ಯಕರ್ತರು ಹೆದ್ದಾರಿ ರಸ್ತೆಯನ್ನು ಎರಡು ಗಂಟೆಗಳ ಕಾಲ ಬಂದ್ ಮಾಡಿ ಧರಣಿ ಪ್ರತಿಭಟನೆ ನಡೆಸಿದರು.
ಅಪಘಾತದಲ್ಲಿ ಸಾವಿಗೀಡಾದವರು ದೇವನಹಳ್ಳಿ ತಾಲೂಕು ತಮ್ಮೇನಹಳ್ಳಿ ಗ್ರಾಮದ ಮುನಿಗೋಪಾಲ್ (34) ಹಾಗೂ ಅನಿತ (28) ಇವರ 5 ವರ್ಷದ ಪುತ್ರ ಧನುಷ್ಗೌಡ ಇನ್ನೂ ಬೆಂಗಳೂರಿನ ತುರ್ತು ಚಿಕಿತ್ಸಾ ಘಟಕದಲ್ಲೇ ಇದ್ದಾನೆ.
ಈ ಅಪಘಾತ ನಡೆದ ನಂತರ ಹತ್ತಿರದಲ್ಲೇ ವಾಹನದಲ್ಲಿದ್ದ ಪೊಲೀಸರು ಮಾನವೀಯತೆ ದೃಷ್ಟಿಯಿಂದ ಗಾಯಾಳುಗಳನ್ನು ಸಾಗಿಸಲು ವಿಫಲರಾಗಿದ್ದರಿಂದ ದಂಪತಿಗಳು ಸಾವಿಗೀಡಾಗಿದ್ದಾರೆ ಎಂದು ಪ್ರತಿಭಟನಾ ಕಾರರು ಆರೋಪಿಸಿದ್ದಾರೆ.
ಸೋಮವಾರ ದಂಪತಿ ಶವಗಳಿದ್ದ ವಾಹನ ಸಮೇತವಾಗಿ ದೇವನಹಳ್ಳಿ ಬೈಪಾಸ್ ಬಳಿ ತರಿಸಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಆಗಮಿಸಿದರೂ ಯಾವುದೇ ಮಾತುಕತೆಗೆ ಒಪ್ಪದೆ ಸಂಬಂಧಪಟ್ಟ ಪೊಲೀಸರನ್ನು ಕೂಡಲೇ ಅಮಾನತುಪಡಿಸಿ ಇಲಾಖಾ ವಿಚಾರಣೆ ಮಾಡಬೇಕು, ಅಪಘಾತಕ್ಕೆ ಕಾರಣರಾದ ಕಾರಿನ ಮಾಲೀಕನ ಮೇಲೆ ಕ್ರಮ ಕೈಗೊಳ್ಳಬೇಕು, ಸಾವಿಗೀಡಾದ ದಂಪತಿ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಪರಿಹಾರ ಕೊಡಿಸಬೇಕು ಎಂದು ಪಟ್ಟುಹಿಡಿದರು. ಸುಮಾರು ಒದು ಗಂಟೆಯ ನಂತರ ಸ್ಥಳಕ್ಕೆ ಸಂಚಾರಿ ವಿಭಾಗದ ಎಸಿಪಿ ಎಂ.ಜಿ.ನಾಗೇಂದ್ರಕುಮಾರ್ ಅವರು ಆಗಮಿಸಿ ಪ್ರತಿಭಟನಾಕಾರರ ಪರವಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ರಾಜಣ್ಣರವರು ಘಟನೆ ಬಗ್ಗೆ ವಿವರವಾಗಿ ತಿಳಿಸಿದರು. ನಂತರ ಎಸಿಪಿ ಅವರು ಮಾತನಾಡಿ ನಿಮ್ಮ ಕೋರಿಕೆಯಂತೆ ಸಂಬಂಧಪಟ್ಟ ಪೋಲೀಸರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಅಪಘಾತಕ್ಕೆ ಕಾರಣವಾದ ಕಾರಿನ ಮಾಲೀಕನ ವಿರುದ್ದ ಎಫ್ಐಆರ್ ಹಾಕುವುದಾಗಿ ತಿಳಿಸಿದರಲ್ಲದೆ ಇರುವ ಇಬ್ಬರು ಮಕ್ಕಳಿಗೆ ಪರಿಹಾರ ಕೊಡಿಸುವುದಾಗಿ ತಿಳಿಸಿದನಂತರ ಪ್ರತಿಭಟನಾಕಾರರು ವಾಪಸ್ ನಡೆದರು. ತಮ್ಮೇನಹಳ್ಳಿ ಗ್ರಾಮಸ್ಥರು ದಂಪತಿ ಶವಗಳನ್ನು ಅಂತಿಮ ಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

