ಬೆಂಗಳೂರು ಗ್ರಾಮಾಂತರ

ಯಲಹಂಕದಲ್ಲಿ ಶೇ. 66.77ರಷ್ಟು ಮತದಾನ

Published On :

ಯಲಹಂಕ: ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಈ ಭಾರಿ ಶೇ66.77 ರಷ್ಟ ಮತದಾನವಾಗಿದೆ ಎಂದು ಚುನಾವಣಾಧಿಕಾರಿ  ಕಾಂತರಾಜು  ತಿಳಿಸಿದರು. ಕಳೆದ ಭಾರಿ 2008 ರಲ್ಲಿ ಚುನಾವಣೆಯಲ್ಲಿ 61.02 ರಷ್ಟು ಮತದಾನವಾಗಿದ್ದು ಭಾನುವಾರ ನಡೆದ ಚುನಾವಣೆಯಲ್ಲಿ 66.77 ರಷ್ಟು ಮತದಾನವಾಗಿದೆ  ಕಳೆದ ಭಾರಿ ಗಿಂತ ಶೇ 5ರಷ್ಟು  ಮತದಾನವಾಗಿದೆ. ಚುನಾವಣೆಯಲ್ಲಿ ಈ ಭಾರಿ 1,95,556 ಜನರು ಮತದಾನಮಾಡಿದ್ದು ಈ ಭಾರಿ 1,01,817 ಪುರುಷ ಮತದಾರರು. 93,739 ಮಹಿಳೆಯರು ಮತಚಲಾಯಿಸಿದರು.  ಕ್ಷೇತ್ರದ ಹೆಸರಘಟ್ಟ ಹೋಬಳಿ ಬೂತ್ ನಂಬರ್ 7 ಹನಿಯೂರು ಗ್ರಾಮದಲ್ಲಿ ಶೇ 96ರಷ್ಟು ಅಂದರೆ 709 ಮತದಾರರಲ್ಲಿ 678 ಜನರು ಮತಚಲಾಯಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಬೂತ್ ನಂಬರ್ 61ಎ ನಾಗೇನಹಳ್ಳಿಯ ಸಿ.ಆರ್.ಪಿ.ಎಫ್.ಕೇಂದ್ರದಲ್ಲಿ ಶೇ. 33 ರಷ್ಟು ಮತದಾನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.