ಆದಿನಾರಾಯಣ ಪ್ರಸಾದ್ಗೆ 580 ಅಂಕ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಮೇ 7
ಇಲ್ಲಿನ ಶ್ರೀದೇವರಾಜ ಅರಸ್ ಪದವಿ ಪೂರ್ವ ಕಾಲೇಜಿನ ಡಿ.ಎಸ್. ಆದಿನಾರಾಯಣಪ್ರಸಾದ್ ದ್ವಿತೀಯ ಪಿಯುಸಿ ವಿಜ್ಞಾನ ಸಂಯೋಜನೆಯಲ್ಲಿ 600ಕ್ಕೆ 580 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮೆರೆದಿದ್ದಾನೆ.
ಕಾಲೇಜಿಗೆ ಶೇ.80.25 ಫಲಿತಾಂಶ ಲಭ್ಯವಾಗಿದೆ. ಕಾಲೇಜಿನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 319 ವಿದ್ಯಾರ್ಥಿಗಳಲ್ಲಿ 256 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 22 ಮಂದಿ ಉನ್ನತ ಶ್ರೇಣಿ, 143 ಮಂದಿ ಪ್ರಥಮ ದರ್ಜೆ, 61 ಮಂದಿ ದ್ವಿತೀಯ ದರ್ಜೆ ಮತ್ತು 30 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
550ಕ್ಕೂ ಹೆಚ್ಚು ಅಂಕ ಪಡೆದವರು: ವಿಜ್ಞಾನ ಸಂಯೋಜನೆಯಲ್ಲಿ ಡಿ.ಎಸ್.ಆದಿನಾರಾಯಣಪ್ರಸಾದ್-580(ಶೇ.96.6), ಎನ್.ಎಚ್.ಪ್ರಿಯಾಂಕ-563(ಶೇ.93.9), ವಾಣಿಜ್ಯ ಸಂಯೋಜನೆಯ ಕೆ.ಆರ್.ಪ್ರಿಯಾಂಕ-561(ಶೇ.93.3), ಹರಿಕೀರ್ತನ-557(ಶೇ.92.6), ಡಿ.ಜಿ.ವಿಜಯಲಕ್ಷ್ಮಿ-557(ಶೇ.92.6), ನಿಖಿಲ್ ಎಂ.ಸೋನಿಗ್ರ-552(ಶೇ.92), ಜಿ.ಎಂ.ಸುನಯ್-551(ಶೇ.91.8), ಎಂ.ಎಸ್.ಭರತ್-551(ಶೇ.91.8), ಡಿ.ಪಿ.ಕಾವ್ಯ-550(ಶೇ.91.6) ಅಂಕಗಳನ್ನು ಪಡೆದಿದ್ದಾರೆ.
100ಕ್ಕೆ 100: ಕಾಲೇಜಿನ ಆದಿನಾರಾಯಣಪ್ರಸಾದ್ ಭೌತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾನೆ. ಅದೇ ರೀತಿ ಕೆ.ಆರ್.ಪ್ರಿಯಾಂಕ ಮತ್ತು ಡಿ.ಜಿ.ವಿಜಯಲಕ್ಷ್ಮಿ ಲೆಕ್ಕಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಉನ್ನತ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಕಾಲೇಜಿನ ನಿರ್ದೇಶಕ ಜೆ.ರಾಜೇಂದ್ರ ಮತ್ತಿತರರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಕೆ.ಲವಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

