ಜನಧ್ವನಿ
ಇದುವರೆಗೂ ಆಡಳಿತದಲ್ಲಿದ್ದ ಬಿಜೆಪಿಯವರಂತೆ ಕಾಂಗ್ರೆಸ್ಸಿಗರೂ ಪರಸ್ಪರ ಕಚ್ಚಾಡುವುದನ್ನು ಬಿಟ್ಟು ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ. ಇನ್ನಾದರೂ ರಾಜ್ಯದಲ್ಲಿ ಸುಭದ್ರ ಸರ್ಕಾರ ಮುಂದುವರೆಯಲಿ.
ಟಿ ವೆಂಕಟೇಗೌಡ, ನಿವೃತ್ತ ಸರ್ಕಾರಿ ನೌಕರ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಎಲ್ಲ ಅಂಶಗಳನ್ನೂ ಜಾರಿಗೊಳಿಸಬೇಕು. ಹಿಂದಿನಂತೆ ಈಗಲೂ ಸುಳ್ಳು ಭರವಸೆಗಳಾಗಿ ಉಳಿಯದಿರಲಿ.
ಟಿ ಪುಟ್ಟಸ್ವಾಮಯ್ಯ, ಕೂಟಗಲ್.
ಏಕ ಪಕ್ಷದ ಸರ್ಕಾರ ರಚನೆ ಸ್ವಾಗತಾರ್ಹ. ರಾಮನಗರವನ್ನು ಜೆಡಿಎಸ್ ಪ್ರಾಬಲ್ಯದ ಜಿಲ್ಲೆ ಎನ್ನುವ ಕಾರಣಕ್ಕೆ ಬಿಜೆಪಿ ಸರ್ಕಾರ ಕಡೆಗಣಿಸಿತ್ತು. ಕಾಂಗ್ರೆಸ್ ಕೂಡ ಅದೇ ಹಾದಿಯಲ್ಲಿ ನಡೆದು, ಪ್ರತೀಕಾರಕ್ಕೆ ಇಳಿಯದಿರಲಿ.
ಟಿ ವೆಂಕಟೇಶ್, ರೈತ.
ರಾಮನಗರದಲ್ಲಿ ಕಾಂಗ್ರೆಸ್ ನಿಜಕ್ಕೂ ಬಲಿಷ್ಠವಾಗಿದೆ. ಬೇರೆ ಪಕ್ಷಗಳಿಂದ ಬಂದವರು ಪಕ್ಷವನ್ನು ದುರ್ಬಲಗೊಳಿಸಿ, ಕುಮಾರಸ್ವಾಮಿ ಗೆಲವಿನ ಹಾದಿ ಸುಗಮಗೊಳಿಸಿದ್ದಾರೆ.
ಟಿ ಸ್ವಾಮಿ, ವಿಭೂತಿಕೆರೆ.
ಒಂದೊಮ್ಮೆ ಕುಮಾರಸ್ವಾಮಿ ಅವರಿಗೆ ಅಧಿಕಾರ ಸಿಕ್ಕಿದ್ದರೆ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ಅವರಿಗೆ ಅಧಿಕಾರ ಸಿಗದೆ ಈ ಜಿಲ್ಲೆಗೆ ನಷ್ಟವಾಗಿದೆ.
ಟಿ ಧನಂಜಯ, ರಾಮನಗರ.
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ದುಡಿಯುವ ವರ್ಗ, ಶೋಷಿತರ ಗೋಳು ಕೇಳುವವರಿಲ್ಲ. ಬಿಜೆಪಿಗೆ ಮತದಾರ ನೀಡಿರುವ ಶಿಕ್ಷೆಯು ಕಾಂಗ್ರೆಸ್ಗೆ ಪಾಠವಾಗಲಿ.
ಟಿ ತಮ್ಮಯ್ಯ, ರಾಮನಗರ.
ಚುನಾವಣೆಯಲ್ಲಿ ಯಾರೇ ಗೆದ್ದು ಹೋದರೂ ಭ್ರಷ್ಟಾಚಾರಕ್ಕೆ ಕೊನೆ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಬಾರಿ ಮತದಾರರದ್ದೇ ಸೋಲು.
ಟಿ ಸಿ.ಪುಟ್ಟಸ್ವಾಮಿ, ಚನ್ನಪಟ್ಟಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

