ಜನಧ್ವನಿ
ರಾಮನಗರದ ಜನತೆಯ ಹೃದಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿದ್ದಾರೆ. ಈ ಕಾರಣಕ್ಕೆ ಅವರು ಕ್ಷೇತ್ರಕ್ಕೆ ಬಾರದೆಯೂ ಗೆಲವು ಸಾಧಿಸಿದ್ದಾರೆ.
ಟಿ ಡಿ.ಗಿರೀಗೌಡ,
ರಾಮನಗರ.
ಅಂದು ಕುಮಾರಸ್ವಾಮಿಯಿಂದ ಬಿಜೆಪಿ ಸರ್ಕಾರ ಬಂದಿತ್ತು. ಇಂದು ಬಿಜೆಪಿ ದುರಾಡಳಿತದ ಫಲವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮಾಂದೇನಾಗುತ್ತೋ ನೋಡೋಣ.
ಟಿ ಚಂದ್ರಶೇಖರ,
ರಾಮನಗರ.
ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ. ಆದರೆ, ಬೆಳಗಾವಿಯಲ್ಲಿ ಎಂಇಎಸ್ ಗೆಲವು ಇಡೀ ಕನ್ನಡಿಗರಿಗೆ ಆದ ಸೋಲು.
ಟಿ ಹೊಸೂರು ಶ್ರೀಧರ್, ಕರವೇ ಜಿಲ್ಲಾಧ್ಯಕ್ಷ.
ರಾಜಕೀಯ ನಾಟಕಗಳಿಂದ ಬೇಸತ್ತ ಕರ್ನಾಟಕದ ಜನಸಾಮಾನ್ಯರು ಬದಲಾವಣೆ ಬಯಸಿ ತೀರ್ಪು ನೀಡಿದ್ದಾರೆ. ಅದನ್ನು ಲಕ್ಷ್ಯದಲ್ಲಿರಿಸಿಕೊಂಡು, ಕನ್ನಡ ನೆಲ, ನುಡಿಯ ಹಿತವನ್ನು ಕಾಪಾಡಿಕೊಂಡು ಒಳ್ಳೆಯ ಆಡಳಿತವನ್ನು ನೀಡಬೇಕಾದ ಗುರುತರ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಹೆಗಲಿಗಿದೆ.
ಟಿ ವಸಂತ ಭಟ್, ಲಾಂಗ್ವೇಜ್ ಕನ್ಸಲ್ಟೆಂಟ್
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರುವುದು ಖುಷಿ. ಜತೆಗೆ ಜಿಲ್ಲೆಯಲ್ಲಿ 4 ಸ್ಥಾನ ಪಡೆದಿರುವುದು ಮತ್ತೂ ಖುಷಿ. ಇನ್ನು 2 ಬರಬೇಕಿತ್ತು. ಬಿಜೆಪಿಯ ಜನವಿರೋಧಿ ನೀತಿಯಿಂದ ಧೂಳಿಪಟವಾಯ್ತು. ಖಂಡಿತವಾಗಿ ಕಾಂಗ್ರೆಸ್ ಸುಭದ್ರ ಸರ್ಕಾರ ನೀಡುತ್ತೆ.
ಟಿ ಆರ್. ರಾಜೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ
ಬಿಜೆಪಿಯ ಭ್ರಷ್ಟಾಚಾರ, ಬಿಜೆಪಿ ಹಗರಣಗಳು, ಸ್ವಜನಪಕ್ಷಪಾತದ ವಿರುದ್ಧವಾಗಿ ರಾಜ್ಯದ ಮತದಾರರು ಕಾಂಗ್ರೆಸ್ ಪರವಾಗಿ ಮತ ನೀಡಿದ್ದಾರೆ.
ಟಿ ಕೊಟ್ಟ ಶಂಕರ್, ಉಪನ್ಯಾಸಕ
ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಸ್ವಾಗತಾರ್ಹ. ಕರ್ನಾಟಕಕ್ಕೆ ಬದಲಾವಣೆ ಬೇಕಿದ್ದು. ಮತದಾರರು ಪ್ರಬುದ್ಧರಾಗಿ ಓಟ್ ಹಾಕಿದ್ದಾರೆ. ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು.
ಟಿ ಪಂಡಿತ್ ಜವಹರ್,ಹೋರಾಟಗಾರರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

