20 ವರ್ಷ ನಂತರ ಆನೇಕಲ್ ಕೋಟೆ ಕಾಂಗ್ರೆಸ್ ವಶ
ಕ.ಪ್ರ. ವಾರ್ತೆ ಆನೇಕಲ್ಲು ಮೇ 8
ಸತತ 20 ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಎನಿಸಿದ್ದ ಆನೇಕಲ್ ಮೀಸಲು ಕ್ಷೇತ್ರಕ್ಕೆ ಲಗ್ಗೆ ಇಟ್ಟ ಕಾಂಗ್ರೆಸ್ ದಳಪತಿಗಳು ಭಾರಿ ಅಂತರದಿಂದ ಗೆದ್ದು ಕಾಂಗ್ರೆಸ್ ಮಡಿಲಿಗೆ ಕ್ಷೇತ್ರವನ್ನು ಅರ್ಪಣೆ ಮಾಡಿದ್ದಾರೆ.
ಕಾಂಗ್ರೆಸ್ನ ಬಿ. ಶಿವಣ್ಣರವರು 1,05,464 ಮತಗಳನ್ನು ಪಡೆಯುವ ಮೂಲಕ ತಾಲೂಕಿನಲ್ಲಿ ನೂತನ ದಾಖಲೆ ಸೃಷ್ಟಿಸಿದ್ದಾರೆ. ಸಮೀಪದ ಸ್ಪರ್ಧಿ ಬಿಜೆಪಿಯ ನಾರಾಯಣಸ್ವಾಮಿರವರು 65,282 ಮತಗಳನ್ನು ಪಡೆದಿದ್ದು, 40182 ಹೆಚ್ಚು ಮತ ಪಡೆದ ಶಿವಣ್ಣ ವಿಜಯ ಮಾಲೆ ಧರಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಆನೇಕಲ್ ಕೇಶವ 7,307 ಮತಗಳನ್ನು ಪಡೆದಿದ್ದರೆ, ಕೆಜೆಪಿ ಅಭ್ಯರ್ಥಿ 2369 ಮತಗಳನ್ನು ಪಡೆದು ನಾಲ್ಕನೆ ಸ್ಥಾನದಲ್ಲಿದ್ದಾರೆ. ಉಳಿದಂತೆ ಕಣದಲ್ಲಿದ್ದವರು ನಾಲ್ಕಂಕೆ, ಮೂರಂಕೆಗೆ ತೃಪ್ತಿಪಡಬೇಕಾಗಿದೆ. ಈ ಬಾರಿಯ ಅಭೂತ ಪೂರ್ವ ಜಯಕ್ಕೆ ವಿಜಯಿ ಅಭ್ಯರ್ಥಿ ಬಿ. ಶಿವಣ್ಣ ತಾಲೂಕಿನ ಸಮಸ್ತ ಜನತೆ, ಮುಖಂಡರಿಗೆ, ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ವಿಜಯೋತ್ಸವ ರಥ ತಾಲೂಕಿನ ಮುಗಳೂರಿಗೆ ಆಗಮಿಸುತ್ತಿದ್ದಂತೆ ಸಹಸ್ರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಬರಮಾಡಿಕೊಂಡರು. ಅಲ್ಲಿಂದ ಪ್ರಾರಂಭವಾದ ವಿಜಯ ಯಾತ್ರೆ ಸರ್ಜಾಪುರ, ದೊಮ್ಮಸಂದ್ರ, ಅತ್ತಿಬೆಲೆ, ಚಂದಾಪುರ ವೃತ್ತಗಳಲ್ಲೂ ಸಂಚರಿಸಿತು.
ವಿಜಯ ಯಾತ್ರೆಯಲ್ಲಿ ಮೇಲ್ಮನೆ ಸದಸ್ಯ ದಯಾನಂದ, ಜಿಪಂ ಸದಸ್ಯ ಪ್ರಭಾಕರ ಬಾಬು, ಆರ್.ಕೆ. ರಮೇಶ್, ಸೋಮಶೇಖರರೆಡ್ಡಿ, ಜಿಪಂ ಸದಸ್ಯ ಗೋಪಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಣ್ಣ, ಚಂದ್ರಪ್ಪ, ಗೋಪಿ ಸೇರಿದಂತೆ ಸಹಸ್ರಾರು ಮುಖಂಡರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

