ಮುಳುಕಟ್ಟಮ್ಮದೇವಿ ಜಾತ್ರಾ ಮಹೋತ್ಸವ
ಮಾಗಡಿ: ಪಟ್ಟಣದ ತಿರುಮಲೆಯಲ್ಲಿ ನೆಲೆಸಿರುವ ಆದಿಶಕ್ತಿ ಶ್ರೀ ಮುಳುಕಟ್ಟಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ದೇವಿಯ ಹೊಳೆ ಪೂಜೆ, ಹೊಡೆದ ಹೊಂಬಾಳೆ ಮುಡಿಸಿ, ಆರತಿ ನೈವೇದ್ಯ ದೇವಿ ಅರ್ಪಿಸಲಾಯಿತು. ಮೇ 8 ರಂದು ಬುಧವಾರ ಮಧ್ಯಾಹ್ನ 1.30ಕ್ಕೆ ದೇವಿಗೆ ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ಹ್ಝಾಡಿ ಪ್ರಸ್ಟಾ ವಿನಿಯೋಗ ನಡೆಯಲಿದೆ. ಸಂಜೆ ಅರೆ ತಮಟೆ ಮಂಗಳ ವಾಧ್ಯದೊಂದಿಗೆ ರಾಜ ಬೀದಿ ಉತ್ಸವ ಮೆರವಣಿಗೆ ನಡೆಯಲಿದೆ. ನೂರಾರು ಭಕ್ತರು ಭಾಗವಹಿಸಿಲಿದ್ದಾರೆ ಎಂದು ಅರ್ಚಕ ಗೋವಿಂದರಾಜು ತಿಳಿಸಿದ್ದಾರೆ.
ಕನಸವಾಡಿ ಕಾಲೇಜಿಗೆ ಶೇ.65
ದೊಡ್ಡಬಳ್ಳಾಪುರ : ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.65 ಫಲಿತಾಂಶ ಲಭ್ಯವಾಗಿದೆ. ಕಾಲೇಜಿನಲ್ಲಿ ವಾಣಿಜ್ಯ ಮತ್ತು ಕಲಾ ಸಂಯೋಜನೆಗಳಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 96 ವಿದ್ಯಾರ್ಥಿಗಳಲ್ಲಿ 61 ಮಂದಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕೆ.ಬಿ.ಬಿಂದು-522(ಶೇ.87) ಫಲಿತಾಂಶ ಪಡೆದಿದ್ದಾಳೆ. ಉಳಿದಂತೆ 26 ಮಂದಿ ಪ್ರಥಮ ದರ್ಜೆ, 19 ಮಂದಿ ದ್ವಿತೀಯ ಮತ್ತು 16 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಿ.ಕುಸುಮಾ-498 ಮತ್ತು ಕಲಾ ವಿಭಾಗದ ಆರ್.ಡಿ.ದಿವ್ಯ-485 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

