ಬೆಂಗಳೂರು ಗ್ರಾಮಾಂತರ

ಎಂಟಿಬಿ ನಾಗರಾಜ್ ಗೆಲವು; ಕಾಂಗ್ರೆಸ್ ವಿಜಯೋತ್ಸವ

Published On :

ಸೂಲಿಬೆಲೆ: ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿಜಯಶಾಲಿಯಾಗಿರುವುದರಿಂದ ಸಂತಸಗೊಂಡ ಸೂಲಿಬೆಲೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದರು.
ಸೂಲಿಬೆಲೆ ಮುಖ್ಯ ನಿಲ್ದಾಣ, ದೇವನಹಳ್ಳಿ ಕ್ರಾಸ್, ಜನತಾ ಕಾಲೋನಿ ಹಾಗೂ ಮಾರುತಿ ನಗರದಲ್ಲಿ ಕಾರ್ಯಕರ್ತರ ಗುಂಪು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹೊಸಕೋಟೆ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಿ ವಿಜಯಶಾಲಿಯಾಗಿರುವ ಎಂಟಿಬಿ ನಾಗರಾಜ್ ಜನಪರವಾದ ಆಡಳಿತವನ್ನು ಕ್ಷೇತ್ರದಲ್ಲಿ ನೀಡಲಿದ್ದಾರೆ. ಸಜ್ಜನ ರಾಜಕಾರಣದ ಮನೋಭಾವ ಹೊಂದಿರುವ ಇವರನ್ನು ಮತದಾರ ಕೈ ಬಿಡದೇ ಗೆಲ್ಲಿಸಿರುವುದು ಇಡೀ ಕ್ಷೇತ್ರದ ಮತದಾರರಿಗೆ ಸಂದ ಜಯ ಎಂದು ಸೂಲಿಬೆಲೆ ಹೋಬಳಿ ಎಸ್ಟಿ ಘಟಕ ಅಧ್ಯಕ್ಷ ವೆಂಕಟೇಶ್ ಹೇಳಿದ್ದಾರೆ.
ವಿಜಯೋತ್ಸವದಲ್ಲಿ ಕಾಂಗ್ರೆಸ್ ಮುಖಂಡರಾದ ಮರುವೆ ಕೃಷ್ಣಪ್ಪ, ಚನ್ನಪ್ಪ, ಚಾಂದ್‌ಪಾಷ, ಮುನಿರಾಜ್, ಎಸ್.ಕೆ ರಾಘವೇಂದ್ರ, ಮರುವೆ ಸುಬ್ಬ, ಲಕ್ಷ್ಮಣ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡು ಸಂತಸ ವ್ಯಕ್ತಪಡಿಸಿ ನೂತನ ಶಾಸಕರನ್ನು ಅಭಿನಂದಿಸಿದ್ದಾರೆ
ಸರ್ಕಾರಿ ನೌಕರರು, ಶಿಕ್ಷಕರಿಂದ ಕುಲಗೆಟ್ಟ ಮತ
ನೆಲಮಂಗಲ: ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಚಲಾಯಿಸಿದ ಅಂಚೆ ಮತಗಳು ಒಟ್ಟು 719. ಅವುಗಳಲ್ಲಿ 439 ಕುಲಗೆಟ್ಟಿರುವುದು ಅಚ್ಚರಿಯ ಸಂಗತಿಯಾಗಿದೆ. 719 ಅಂಚೆ ಮತಗಳಲ್ಲಿ ಕುಲಗೆಟ್ಟ 439 ಮತಗಳನ್ನು ಬಿಟ್ಟು ಉಳಿದ 80 ಮತಗಳಲ್ಲಿ  ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಅಂಜನಮೂರ್ತಿ ಅವರಿಗೆ 42 ಮತಗಳು, ಬಿಜೆಪಿಯ ನಾಗರಾಜುಗೆ 21 ಮತಗಳು, ಜೆಡಿಎಸ್‌ನ ಡಾ.ಕೆ.ಶ್ರೀನಿವಾಸಮೂರ್ತಿ ಅವರಿಗೆ 134 ಮತಗಳು, ಕೆಜೆಪಿ ಚಲುವರಾಜುಗೆ 68 ಮತಗಳು, ಪಕ್ಷೇತರರಾದ ಅಂಜನಮೂರ್ತಿಗೆ 9 ಮತಗಳು, ಚೌಡಯ್ಯಗೆ 4 ಮತಗಳು, ತಿರುಮಲಯ್ಯ ಅವರು 1 ಮತ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.