ಬೆಂಗಳೂರು ಗ್ರಾಮಾಂತರ

ಕ್ರೀಡಾಮನೋಭಾವದಿಂದ ಸೋಲು ಸ್ವೀಕಾರ

Published On :

ಕನಕಪುರ: ಕನಕಪುರ ಕ್ಷೇತ್ರದ ಮತದಾರರು 68 ಸಾವಿರಕ್ಕೂ ಹೆಚ್ಚಿನ ಮತ ನೀಡಿ ಬೆಂಬಲಿಸಿದ್ದಕ್ಕಾಗಿ ಮಾಜಿ ಸಚಿವ ಜೆಡಿಎಸ್ ಅಭ್ಯರ್ಥಿ ಪಿಜಿಆರ್ ಸಿಂಧ್ಯಾ ಕೃತಜ್ಞತೆ ಅರ್ಪಿಸಿದ್ದಾರೆ. ಗೆಲವಿಗಾಗಿ ಹಗಲಿರುಳು ದುಡಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೂ ಸಿಂಧ್ಯಾ ಹೃದಯಪೂರ್ವಕ ಧನ್ಯವಾದ ಸಲ್ಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮತದಾರರ ಒಲವು ಗಳಿಸಲು ವಿಫಲರಾದ ತಾವು ಸೋಲಿನಿಂದ ವಿಚಲಿತರಾಗಿಲ್ಲ. ತಮ್ಮ ಸೋಲಿಗೆ ತಾವೇ ಕಾರಣರಾಗಿದು,್ದ ಯಾರನ್ನೂ ಬಾಧ್ಯಸ್ಥರಾಗಿಸುವುದಿಲ್ಲ. ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದರು. ಹಿಂಬಾಗಿಲ ಪ್ರವೇಶದ ಬಗ್ಗೆ ನಂಬಿಕೆಯಿಲ್ಲದ ತಾವು ಮೇಲ್ಮನೆಗಾಗಲೀ ಅಥವಾ ಸಂಸದರ ಸ್ಥಾನಕ್ಕಾಗಲಿ ಆಕಾಂಕ್ಷಿಯಲ್ಲಾ ಎಂದು ಸ್ಪಷ್ಟೀಕರಿಸಿದ ಸಿಂಧ್ಯಾ, ಚುನಾವಣಾ ಸಂದರ್ಭದಲ್ಲಿ ಆಯೋಗಕ್ಕೆ ಹಲವಾರು ದೂರು ಸಲ್ಲಿಸಿದ್ದು, ಅವುಗಳ ಬಗ್ಗೆ ಆಸಕ್ತಿ ವಹಿಸುವುದಾಗಿ ತಿಳಿಸಿದರು. ಬಾಲನರಸಿಂಹ, ಜಯರಾಮು, ಬಿ.ನಾಗರಾಜು, ಸಿದ್ದಪ್ಪಾಜಿ, ಕಬ್ಬಾಳೇಗೌಡ, ಚಿನ್ನಸ್ವಾಮಿ, ಚಂದ್ರು, ಗಬ್ಬಾಡಿ ರವಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.