ಸೋತವರ ಸಮರ; ಚನ್ನಿಗಪ್ಪ-ಮುನೇಗೌಡ ವಾಗ್ಯುದ್ಧ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬರುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಕಾಣುತ್ತಿದೆ. ಸ್ವಯಂಕೃತ ಅಪರಾಧದಿಂದ ಸೋಲನುಭವಿಸಿದ ಜೆಡಿಎಸ್ ಸೋಲಿನ ಆತ್ಮಾವಲೋಕನದಲ್ಲಿದ್ದರೆ, ಪಕ್ಷದಿಂದ ಸಿಡಿದು ಹೋಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಫಲಿತಾಂಶದ ದಿಕ್ಕು ಬದಲಿಸಿದ ಪಕ್ಷೇತರ ಅಭ್ಯರ್ಥಿ ತನ್ನದೇ ಗುಂಗಿನಲ್ಲಿದ್ದಾರೆ. ಆದರೆ ಈ ಇಬ್ಬರೂ ಪರಸ್ಪರ ಟೀಕೆ-ಟಿಪ್ಪಣಿಗಳಿಂದ ಗಮನ ಸೆಳೆದಿದ್ದಾರೆ.
ಜೆಡಿಎಸ್ನಿಂದ ಸ್ಪರ್ಧಿಸಿ 3ನೇ ಸ್ಥಾನ ಪಡೆದು ಸೋತ ಮಾಜಿ ಸಚಿವ ಸಿ.ಚನ್ನಿಗಪ್ಪ, ಮತದಾರರಿಗೆ ನಾನು ಕೃತಜ್ಞ. ನನ್ನನ್ನು ಸೋಲಿಸುವ ಹುನ್ನಾರದಿಂದ ಬಿಜೆಪಿ ಅಭ್ಯರ್ಥಿಯಿಂದ ಪಕ್ಷೇತರ ಅಭ್ಯರ್ಥಿ ಬಿ.ಮುನೇಗೌಡರಿಗೆ 2 ಕೋಟಿ ಸಂದಾಯವಾಗಿತ್ತು. ಇದು ಬಿಜೆಪಿಗೇ ಮುಳುವಾಗಿ ಆ ಪಕ್ಷ 4ನೇ ಸ್ಥಾನ ಪಡೆದಿದೆ. ಪಕ್ಷೇತರ ಮುನೇಗೌಡ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ನಾನು ಕ್ಷೇತ್ರ ಬಿಟ್ಟು ಹೋಗುವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಮುನೇಗೌಡ ಟೀಕೆ: ಚನ್ನಿಗಪ್ಪ ವಿರುದ್ಧ ಮಾತನಾಡಿರುವ ಪಕ್ಷೇತರ ಅಭ್ಯರ್ಥಿ ಬಿ.ಮುನೇಗೌಡ, ನರಸಿಂಹಸ್ವಾಮಿ ಅವರಿಂದ ಹಣ ಪಡೆದು ಚುನಾವಣೆ ನಡೆಸುವ ಸಣ್ಣತನ ನನ್ನದಲ್ಲ. ಇದಕ್ಕೆ ನರಸಿಂಹಸ್ವಾಮಿಯವರೇ ಸ್ಪಷ್ಟನೆ ಕೊಡಬೇಕು. ಚನ್ನಿಗಪ್ಪ ಸೋತ ಹತಾಶೆಯಲ್ಲಿ ಅವರು ಏನೇನೋ ಮಾತಾಡುತ್ತಿದ್ದಾರೆ. ನಾನು ಅವರಂತೆ ಸೋತು ಕ್ಷೇತ್ರ ಬಿಟ್ಟು ಓಡಿ ಹೋದವನಲ್ಲ ಎಂಬುದು ಜನಕ್ಕೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

