ಬೆಂಗಳೂರು ಗ್ರಾಮಾಂತರ

ಪತ್ನಿ ಬಿಟ್ಟು ಎರಡನೇ ಮದ್ವೆಯಾದ ವಂಚಕ ಪತಿ

Published On :

ಕ.ಪ್ರ. ವಾರ್ತೆ ,  ಕೆಜಿಎಫ್ ,  ಮೇ 14
ವರದಕ್ಷಿಣೆ ತರುವಂತೆ ಪತ್ನಿಯನ್ನು ಪದೇ ಪದೇ ಪೀಡಿಸುತ್ತಿದ್ದ ತಮ್ಮ ಪತಿರಾಯ 2ನೇ ಮದುವೆ ಮಾಡಿಕೊಳ್ಳುವ ಮೂಲತ ತಮಗೆ ವಂಚಿಸಿದ್ದಾನೆ ಎಂದು ಅಂಬಿಕಾ ಎಂಬವರು ಬೇತನಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ, 2ನೇ ಮದುವೆ ಮಾಡಿಸಿದವರ ವಿರುದ್ಧವೂ ದೂರು ನೀಡಿದ್ದಾರೆ.
ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕಂಗಾನೆಲ್ಲೂರು ನಿವಾಸಿ ಅಂಬಿಕಾ ಅವರು 8 ವರ್ಷಗಳ ಹಿಂದೆ ನಾರಾಯಣಸ್ವಾಮಿ ಎಂಬುವರೊಂದಿಗೆ ವಿವಾಹವಾಗಿದ್ದರು. ಮದುವೆ ಹೊಸತರಲ್ಲಿ ಗಂಡ ಹೆಂಡತಿ ಅನ್ಯೂನತೆಯಿಂದಿದ್ದರು. ನಾಲ್ಕು ಮಕ್ಕಳನ್ನೂ ಪಡೆದಿದ್ದರು. ಆದರೆ, ಇತ್ತೀಚೆಗೆ ಪತಿ ನಾರಾಯಣಸ್ವಾಮಿ, ಅತ್ತೆ ವೆಂಕಟಮ್ಮ, ನಾದಿನಿ ಸುಗುಣಮ್ಮ ಹಾಗೂ ಅವರ ಪತಿ ರಾಮಪ್ಪ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಅಂಬಿಕಾ ಅವರಿಗೆ ದೈಹಿಕ-ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ. 20 ದಿನಗಳ ಹಿಂದಷ್ಟೇ ತವರು ಮನೆಯಿಂದ 20000 ನಗದು ತರುವಂತೆ ಮನೆಯಿಂದ ಕಳುಹಿಸಿದ್ದ ಪತಿ ನಾರಾಯಣಸ್ವಾಮಿ ಅವರು ಹೊಸಕೋಟೆ ತಾಲೂಕಿನ ದೇವನಹಳ್ಳಿ ಹೋಬಳಿಯ ಮುತ್ತುಕೂರು ನಿವಾಸಿ ನೇತ್ರಾವತಿ ಎಂಬವರೊಂದಿಗೆ 2ನೇ ವಿವಾಹವಾಗುವ ಮೂಲಕ ನನಗೆ ವಂಚಿಸಿದ್ದಾರೆ ಎಂದು ಅಂಬಿಕಾ ತಿಳಿಸಿದ್ದಾರೆ. ಅಲ್ಲದೆ, ಮದುವೆಗೆ ಸಹಕರಿಸಿರುವ ಮುನಿಯಪ್ಪ, ಲಕ್ಷ್ಮಮ್ಮ, ಅಶೋಕ್, ಶಾಂತಮ್ಮ, ಶಂಕ್ರಪ್ಪ ಹಾಗೂ ಸುಜಾತಮ್ಮ ಎಂಬವರ ವಿರುದ್ಧ ಬೇತಮಂಗಲ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.