ಎಚ್ಚೆತ್ತ ಪಪೂ ಇಲಾಖೆ; ಶುಲ್ಕ ಪ್ರಕಟ
ರಾಮನಗರ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಸುಲಿಗೆ ಕುರಿತು ವ್ಯಾಪಕ ಟೀಕೆಯಿಂದ ಎಚ್ಚೆತ್ತಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸರ್ಕಾರಿ ನಿಯಮಾನುಸಾರ ಶಿಕ್ಷಣ ಸಂಸ್ಥೆಗಳಲ್ಲಿ ವಸೂಲು ಮಾಡಬೇಕಿರುವ ಶುಲ್ಕ ಮತ್ತು ಅಭಿವೃದ್ಧಿ ಶುಲ್ಕ ಪ್ರಕಟಿಸಿದೆ.
ಇದರನ್ವಯ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಅಭಿವೃದ್ಧಿ ಶುಲ್ಕವಾಗಿ ಗರಿಷ್ಠ 600 ಮಾತ್ರವೇ ಪಡೆದುಕೊಳ್ಳಬೇಕು ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಉಪ ನಿದೇರ್ಶಕ ಡಿ.ಲಿಂಗರಾಜು ಆದೇಶಿಸಿದ್ದಾರೆ.
ಸರ್ಕಾರಿ ಸಂಸ್ಥೆ ಶುಲ್ಕ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ 983, ಬಿಸಿಎಂ ವಿದ್ಯಾರ್ಥಿಗಳಿಗೆ 563, ಪ.ಜಾತಿ ಹಾಗೂ ಪ.ಪಂಗಡದವರಿಗೆ 132 ಶುಲ್ಕವನ್ನು ನಿದಗಿಪಡಿಸಲಾಗಿದೆ.
ವಿಜ್ಞಾನ ವಿಭಾಗದಲ್ಲಿ ಸಾಮಾನ್ಯ ವರ್ಗದವರಿಗೆ 1389, ಬಿಸಿಎಂಗೆ 689, ಪ.ಜಾತಿ ಮತ್ತು ಪ.ಪಂಗಡಕ್ಕೆ 132. ಕಲಾ ವಾಣಿಜ್ಯ ಮತ್ತು ವಿಜ್ಞಾನ ಎಲ್ಲ ವಿಭಾಗಗಳಲ್ಲಿ ಎಲ್ಲ ವರ್ಗದ ಬಾಲಕಿಯರಿಗೆ ಶುಲ್ಕವನ್ನು 132ಕ್ಕಿಂತ ನಯಾಪೈಸೆ ಹೆಚ್ಚು ವಸೂಲು ಮಾಡುವಂತಿಲ್ಲ.
ಅನುದಾನಿತ ಸಂಸ್ಥೆ: ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ ಸಾಮಾನ್ಯ 1,703, ಬಿಸಿಎಂ 863, ಪ.ಜಾತಿ ಹಾಗೂ ಪ.ಪಂಗಡ 812, ವಿಜ್ಞಾನ ವಿಭಾಗದಲ್ಲಿ ಸಾಮಾನ್ಯ ವರ್ಗದವರಿಗೆ 2,109, ಬಿಸಿಎಂ 1,269, ಪ.ಜಾತಿ ಮತ್ತು ಪ.ಪಂಗಡ 1,218 ಶುಲ್ಕ ನಿಗದಿಯಾಗಿರುತ್ತದೆ.
ಅನುದಾನ ರಹಿತ ಸಂಸ್ಥೆ: ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ ಎಲ್ಲಾ ವರ್ಗದವರಿಗೆ 563, ವಿಜ್ಞಾನ ವಿಭಾಗದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ 969 ಮಾತ್ರವೇ ಶುಲ್ಕ ಪಡೆಯಬೇಕೆಂದು ಆದೇಶದಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ.
ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ವಿಶೇಷ ಅಭಿವೃದ್ಧಿ ಶುಲ್ಕವಾಗಿ ವಾರ್ಷಿಕ 600 ಪಡೆಯಬಹುದು. ಇದಲ್ಲದೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವಾರ್ಷಿಕ ವೇತನದ ಆಧಾರದಲ್ಲಿ ಸರ್ಕಾರದ ಮಾನದಂಡದ ಪ್ರಕಾರವೇ ಬೋಧನಾ ಶುಲ್ಕವನ್ನು ತೆಗೆದುಕೊಳ್ಳಬಹುದು.
ಪ್ರವೇಶ ಪ್ರಕ್ರಿಯೆ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಎಲ್ಲಾ ಪ್ರವೇಶಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯಂತೆ ನಡೆಸಬೇಕು. ಕೋ-ಎಜುಕೇಷನ್ ಕಾಲೇಜುಗಳಲ್ಲಿ ಶೇ.50ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಿಟ್ಟು, ಉಳಿದವನ್ನು ಹಂಚಿಕೆ ಮಾಡಲು ಸೂಚಿಸಲಾಗಿದೆ.
ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಶೇ.20ರಷ್ಟು ಸೀಟುಗಳನ್ನು ಕಾಲೇಜು ಆಡಳಿತ ಮಂಡಳಿಯವರ ವಿವೇಚನೆಗೆ ಬಿಡಲಾಗಿದೆ. ಶೇ.80ರಷ್ಟು ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ನೀಡುವುದು ನಿಯಮ ಪ್ರಕಾರ ಕಡ್ಡಾಯ.
ಖಾಸಗಿ ಅಲ್ಪಸಂಖ್ಯಾತ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.50ರಷ್ಟು ಸೀಟುಗಳನ್ನು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ಶೇ.50ರಷ್ಟು ಸೀಟುಗಳನ್ನು ಮೆರಿಟ್ ಆಧಾರದಲ್ಲಿ ಇತರರಿಗೆ ನೀಡಬೇಕು. ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.50 ಸೀಟುಗಳನ್ನು ಆಡಳಿತ ಮಂಡಳಿಯವರ ವಿವೇಚನೆಗೆ ಬಿಡಲಾಗಿದೆ ಎಂದು ಡಿಡಿಪಿಯು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

