ರಾಜೀವ್ ಜ್ಯೋತಿಗೆ ಸ್ವಾಗತ, ಬೀಳ್ಕೊಡುಗೆ
ಕ.ಪ್ರ. ವಾರ್ತೆ , ರಾಮನಗರ , ಮೇ 15
ಬೆಂಗಳೂರಿನಿಂದ ಶ್ರೀಪೆರಂಬೂರಿಗೆ ಹೊರಟಿರುವ ರಾಜೀವ್ ಜ್ಯೋತಿ ಯಾತ್ರೆಗೆ ನಗರದಲ್ಲಿ ಬುಧವಾರ ಅದ್ಧೂರಿ ಸ್ವಾಗತ ನೀಡಲಾಯಿತು.
ಬೆಂಗಳೂರಿನಿಂದ ಮಧ್ಯಾಹ್ನ 2.15ಕ್ಕೆ ಆಗಮಿಸಿದ ಜ್ಯೋತಿಗೆ ನಗರದ ಐಜೂರು ವೃತ್ತದಲ್ಲಿ ಕಾಂಗ್ರೆಸ್ನ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಆತ್ಮೀಯ ಸ್ವಾಗತ ನೀಡಿ ಬೀಳ್ಕೊಟ್ಟರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಕಾಶಂ ಸಾರಥ್ಯದಲ್ಲಿ ಆಗಮಿಸಿದ ಜ್ಯೋತಿಯ ಸ್ವಾಗತ ಸಂದರ್ಭದಲ್ಲಿ ಸಾಹುಕಾರ್ ಅಮ್ಜದ್, ಸಿ.ಎನ್.ಆರ್.ವೆಂಕಟೇಶ್, ವೆಂಕಟಸ್ವಾಮಿ, ಸತೀಶ್, ಶ್ರೀನಿವಾಸ್, ದೇವರಾಜ್, ಪಾದ್ರಳ್ಳಿ ರಾಜು ಮತ್ತಿತರರು ಪಾಲ್ಗೊಂಡಿದ್ದರು. ಕೆಲ ಹೊತ್ತಿನ ಬಳಿಕ ಜ್ಯೋತಿ ಯಾತ್ರೆಯ ಚನ್ನಪಟ್ಟಣ ಕಡೆ ಸಾಗಿತು. ರಾಮನಗರದಿಂದ ನೂರಾರು ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡರು. ಚನ್ನಪಟ್ಟಣದಲ್ಲೂ ಜ್ಯೋತಿಯನ್ನು ಸ್ವಾಗತಿಸಿ ಬಳಿಕ ಮಂಡ್ಯ ಜಿಲ್ಲೆಗೆ ಬೀಳ್ಕೊಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

