ಚರಂಡಿ ನೀರಿಂದ ವಿದ್ಯುತ್ ಉತ್ಪಾದನೆ
ಆನೇಕಲ್ಲು: ಆನೇಕಲ್ಲಿನ ಶಿರಡಿ ಸಾಯಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಅಂತಿಮ ಬಿಇ ವಿದ್ಯಾರ್ಥಿಗಳು ವಿಭಿನ್ನ ರೀತಿಯ ಪ್ರಾಜೆಕ್ಟ್ಗಳ ಪ್ರದರ್ಶನ ಮಾಡಿದರು.
ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಒಳಚರಂಡಿ ನೀರಿನಿಂದ ವಿದ್ಯುತ್ ತಯಾರಿಸುವ ಪ್ರಾಜೆಕ್ಟ್ನ್ನು ಪ್ರೊಎಂ. ಸಿದ್ದೇಶ್ ನೇತೃತ್ವದಲ್ಲಿ ತಯಾರಿಸಲಾಗಿದ್ದು ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳು ಬೆಂಗಳೂರಿನಾದ್ಯಂತ ಸಂಚರಿಸಿ ಯಾವ ಭಾಗದಲ್ಲಿ ಚರಂಡಿ ನೀರು ರಭಸ ಹರಿಯುತ್ತದೆ ಎಂಬ ಮಾಹಿತಿ ಪಡೆದು ಟರ್ಬೈನ್ ಸಿದ್ದ ಮಾಡಿ ಅದರ ಮೇಲೆ ನೀರು ಹರಿಯುವಂತೆ ಮಾಡಿದಾಗ ವಿದ್ಯುತ್ ಉತ್ಪಾದನೆಯಾಯಿತು ಎಂದು ವಿವರಿಸಿದರು.
ಇದರಿಂದ ನೇರವಾಗಿ ವಿದ್ಯುತ್ ಬಲ್ಬ್ ಉರಿಯುವುದರ ಜೊತೆಗೆ ಬ್ಯಾಟರಿಯಲ್ಲಿಯೂ ವಿದ್ಯುತ್ ಶೇಖರಣೆ ಮಾಡಬಹುದು ಎಂದು ತಿಳಿಸಿದರು.
ಸಮುದ್ರದಲ್ಲಿ ರಿಮೋಟ್ ಯಂತ್ರದ ಮೂಲಕ ಚಲಿಸುವ ದೋಣಿ, ಮೊಬೈಲ್ ಸಹಾಯದಿಂದ ವಾಹನ ಚಾಲನೆ, ಅನಿಲ ಸಿಲಿಂಡರ್ ಮೂಲಕ ಚಾಲನೆ ಮಾಡಬಹುದಾದ ಮಿನಿ ಟ್ರ್ಯಾಕ್ಟರ್ ವಿವಿಧ ರೀತಿಯ ಕ್ಯಾಮೆರಾ ಚಾಲನೆಗಳು, ರೈತರಿಗೆ ಸಹಾಯಕ ಯಂತ್ರಗಳು, ಅಂಧರಿಗೆ ನಡೆಯುವಾಗ ದಾರಿಯಲ್ಲಿ ಇರುವ ವಸ್ತುಗಳ ಸ್ಪರ್ಶಮಾಡಿಸುವಂತಹ ತಂತ್ರಜ್ಞಾನ, ಬ್ಯಾಂಕ್ ಗಳಲ್ಲಿ ಕಳವು ಆಗದಂತೆ ಸೈರನ್ಗಳು ಮುಂತಾದ ಅನೇಕ ರೀತಿಯ ಪ್ರಾಜೆಕ್ಟ್ಗಳನ್ನು ಮಾಡಿ ಬಹುಮಾನಗಳನ್ನು ಗಳಿಸಿಕೊಂಡರು. ಕಾಲೇಜು ಆಡಳಿತ ಮಂಡಳಿಯ ಅರುಣ್ಕುಮಾರ್, ಶಶಿ ಶೇಖರ್, ಶಿವಪ್ರಸಾದ್, ರಾಘವೇಂದ್ರರಾವ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

